Kabul Explosions: ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಸ್ಪೋಟ; 13 ಜನರು ಸಾವು

ಘಟನೆ ಕುರಿತು ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಮಾಹಿತಿ ಪಡೆದಿದ್ದು, ಅಫಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಬಿಡೆನ್, ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ

ಘಟನೆ ಕುರಿತು ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಮಾಹಿತಿ ಪಡೆದಿದ್ದು, ಅಫಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಬಿಡೆನ್, ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ

ಘಟನೆ ಕುರಿತು ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ಮಾಹಿತಿ ಪಡೆದಿದ್ದು, ಅಫಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಬಿಡೆನ್, ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ

  • Share this:

ಕಾಬೂಲ್​ ವಿಮಾನ ನಿಲ್ದಾಣದಲ್ಲಿ(Kabul Airport Blast) ಸ್ಪೋಟ ಸಂಭವಿಸಿದ್ದು, 13 ಜನರು ಸಾವನ್ನಪ್ಪಿರುವ ವರದಿಯಾಗಿದೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅಮೆರಿಕ ಮಿಲಿಟರಿ ಸಿಬ್ಬಂದಿಗಳು (US military personnel) ಕೂಡ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಅಬ್ಬೆ ಗೇಟ್​ನಲ್ಲಿ ಸಂಕೀರ್ಣದಲ್ಲಿ ಈ ಸ್ಪೋಟ ಸಂಭವಿಸಿದೆ. ಇದರ ಜೊತೆಗೆ ಅಬ್ಬೆ ಗೇಟ್ (Abbey Gate)​ನಿಂದ ಸ್ವಲ್ಪ ದೂರದ ಬ್ಯಾರನ್​ ಹೋಟೆಲ್​ನಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದೆ. ಅಫ್ಘಾನಿಸ್ತಾನ (Afghanistan) ತಾಲಿಬಾನ್​ ವಶವಾದ ಬಳಿಕ ಸಾವಿರಾರು ಸಂಖ್ಯೆಯ ಜನರು ದೇಶ ತೊರೆಯಲು ಮುಂದಾಗಿದ್ದಾರೆ. ಈ ಹಿನ್ನಲೆ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಂಖ್ಯೆಯ ಜನರು ಇದ್ದರು. ಅಮೆರಿಕ ಮತ್ತು ಇತರೆ ಅಧಿಕಾರಿಗಳ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಸೂಸೈಟ್​ ಬಾಂಬರ್​​ಗಳು ವಿಮಾನ ನಿಲ್ದಾಣವನ್ನು ಸ್ಪೋಟಿಸುವ ಬೆದರಿಕೆಯನ್ನು ಹಾಕಿದ್ದರು.


ಬಾಂಬ್​ ಸ್ಪೋಟ ಸಂಭವಿಸುತ್ತಿದ್ದಂತೆ ಅಮೆರಿಕ ನಾಗರಿಕರು ವಿಮಾನ ನಿಲ್ದಾಣದತ್ತ ಬರದಂತೆ, ವಿಮಾನ ನಿಲ್ದಾಣದ ಗೇಟ್​ ಬಳಿ ಇರುವವರು ಸ್ಥಳ ಬಿಟ್ಟು ಹೋಗುವಂತೆ ಅಮೆರಿಕ ರಾಯಭಾರ ಕಚೇರಿ ಮನವಿ ಮಾಡಿದೆ. ಘಟನೆ ಕುರಿತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ (Joe Biden)​ ಮಾಹಿತಿ ಪಡೆದಿದ್ದು, ಅಫಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಬಿಡೆನ್, ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ



ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಡೆದ ಈ ಅವಳಿ ಸ್ಫೋಟದ ನಂತರ ಯುಕೆ ಸರ್ಕಾರ ಕೂಡ ಬಿಕ್ಕಟ್ಟಿನ ಕುರಿತು ಸಭೆ ನಡೆಸಲು ನಿರ್ಧರಿಸಿದೆ.


ಘಟನೆಯಲ್ಲಿ ಹಲವು ತಾಲಿಬಾನ್ ಗಾರ್ಡ್ಸ್​​ ಕೂಡ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.  ಗಾಯಗೊಂಡವರಲ್ಲಿ ಯುಎಸ್ ಸೇವಾ ಸದಸ್ಯರು ಸೇರಿದ್ದಾರೆ ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ


ಇದನ್ನು ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ಬಾಟಲಿ ನೀರಿಗೆ 3,000, ಪ್ಲೇಟ್​ ಅನ್ನಕ್ಕೆ 7,400


ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಐಸಿಸ್ ಭಯೋತ್ಪಾದಕ ದಾಳಿ ನಡೆಸಿರ ಬಹುದು ಎಂಬ ಕುರಿತು ಅಮೆರಿಕನ್ನರಿಗೆ ಮಾಹಿತಿ ನೀಡಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ತಿಳಿಸಿದ್ದಾರೆ. ಇದೇ ವೇಳೆ ಅವರು, ತಾಲಿಬಾನ್ ಅಂತರಾಷ್ಟ್ರೀಯ ಸಮುದಾಯಕ್ಕೆ ಬದ್ಧವಾಗಿದ್ದು, ಭಯೋತ್ಪಾದಕರು ತಮ್ಮ ಕಾರ್ಯಾಚರಣೆಗೆ ಅಫ್ಘಾನಿಸ್ತಾನವನ್ನು ಆಧಾರವಾಗಿ ಬಳಸಲು ಅನುಮತಿಸುವುದಿಲ್ಲ ಎಂದಿದ್ದಾರೆ


ಅಫ್ಘಾನ್​ ಅನ್ನು ತಾಲಿಬಾನ್​ ವಶ ಪಡಿಸಿಕೊಂಡ ನಂತರ ಅಲ್ಲಿನ ಅಮೆರಿಕನ್ನರ ಸ್ಥಳಾಂತರ ಕಾರ್ಯ ನಡೆಯುತ್ತಿದ್ದು, ಆಗಸ್ಟ್​ 31ರವರೆಗೆ ಈ ಸ್ಥಳಾಂತರಕ್ಕೆ ತಾಲಿಬಾನ್​ಗಳು ಅನುಮತಿ ನೀಡಿವೆ. ಈ ಹಿನ್ನಲೆ ಅಮರಿಕ ಸ್ಥಳಾಂತರ ಕಾರ್ಯವನ್ನು ಭರದಿಂದ ಸಾಗಿದ್ದು, ಸ್ಪರ್ಧೆಯಂತೆ ಈ ಸ್ಥಳಾಂತರ ಕಾರ್ಯ ನಡೆಸಲಾಗುತ್ತಿದೆ.


ಅಮೆರಿಕ ಹೊರತಾಗಿ ಅನೇಕ ಪಾಶ್ಚಿಮಾತ್ಯ ದೇಶಗಳು ತಮ್ಮ ಪ್ರಜೆಗಳಿಗೆ ಸುರಕ್ಷತಾ ಎಚ್ಚರಿಕೆ ನೀಡಿದ್ದು, ವಿಮಾನ ನಿಲ್ದಾಣದತ್ತ ಪ್ರಯಾಣಿಸದಂತೆ ಸೂಚನೆ ನೀಡಿವೆ. ಇದರ ಹೊರತಾಗಿ ಕೂಡ ವಿಮಾನ ನಿಲ್ದಾಣದಲ್ಲಿ ಭಾರೀ ಜನ ಸಂದಣಿ ಉಂಟಾಗಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: