HOME » NEWS » National-international » TWO ARRESTED FOR STEALING 110 KG ONIONS FROM KALYAN APMC MARKET HG

ಅಂಗಡಿಗೆ ಕನ್ನ ಹಾಕಿದ ಕಳ್ಳರು; ರಾತ್ರೋರಾತ್ರಿ 1 ಕ್ವಿಂಟಾಲ್​ ಈರುಳ್ಳಿ ಮಂಗಮಾಯ

ಸಗಟು ವ್ಯಾಪಾರಿ ಅಮಿತ್​ ಗಣಪತ್​ ಸಾರ್ವ ಗೌಡ್​ ಎಂಬವರು ಶನಿವಾರ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ 55 ಕೆ.ಜಿ ಈರುಳ್ಳಿ ತುಂಬಿದ ಗೋಣಿಯನ್ನು ಅಂಗಡಿಯ ಹೊರಗಿಟ್ಟು ಹೋಗಿದ್ದರು. ಆದರೆ ಬೆಳಗ್ಗೆ ಬಂದು ನೋಡಿದಾಗ ಎರಡು ಮೂಟೆಗಳು ಕಾಣೆಯಾಗಿದ್ದವು.

Harshith AS | news18-kannada
Updated:December 16, 2019, 7:50 PM IST
ಅಂಗಡಿಗೆ ಕನ್ನ ಹಾಕಿದ ಕಳ್ಳರು; ರಾತ್ರೋರಾತ್ರಿ 1 ಕ್ವಿಂಟಾಲ್​ ಈರುಳ್ಳಿ ಮಂಗಮಾಯ
ಈರುಳ್ಳಿ
  • Share this:
ಚಿನ್ನದ ಮಳಿಗೆ, ಬ್ಯಾಂಕ್​ಗಳಿಗೆ, ಮೊಬೈಲ್​ ಅಂಗಡಿಗಳಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ದೋಚಿ ಪೋಲಿಸರ ಅತಿಥಿಯಾದ ಸುದ್ದಿಯನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಆದರೀಗ ಕಳ್ಳರ ದಿಕ್ಕು ಇದಾವುದರ ಮೇಲೆ ಬೀಳದೆ ಬೇರೆ ದಿಕ್ಕಿನತ್ತ ತಿರುಗಿದೆ. ಅದು ಯಾವುದು ಗೊತ್ತಾ? ಈರುಳ್ಳಿ ಮೇಲೆ!

ಕೆಲ ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳ್ಳರ ಗುಂಪೊಂದು ಈರುಳ್ಳಿ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಮುಂಬೈನ ಕಲ್ಯಾಣ್​ ಎಪಿಎಮ್​ಸಿ ಮಾರ್ಕೆಟ್​ನಲ್ಲಿ ಇಬ್ಬರು ಕಳ್ಳರು ಈರುಳ್ಳಿ ಕದ್ದು ಪೊಲೀಸರ ಅತಿಥಿಯಾಗಿದ್ದಾರೆ. ಇವರು ಕದ್ದಿರುವ ಈರುಳ್ಳಿ ಎಷ್ಟು ಗೊತ್ತಾ? ಬರೋಬ್ಬರಿ 110 ಕೆ. ಜಿ.

ಸದ್ಯ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಇಮ್ರಾನ್​ ಸೈಯದ್​(20) ಮತ್ತು ಝರೀದ್​ ಶೇಖ್​(19) ಎಂದು ಗುರುತಿಸಲಾಗಿದೆ. ಈ ಸಂಬಂಧ ಕಲ್ಯಾಣ್​ ಬಜಾರ್​ಪೇಟೆ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಗಟು ವ್ಯಾಪಾರಿ ಅಮಿತ್​ ಗಣಪತ್​ ಸಾರ್ವ ಗೌಡ್​ ಎಂಬವರು ಶನಿವಾರ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ 55 ಕೆ.ಜಿ ಈರುಳ್ಳಿ ತುಂಬಿದ ಗೋಣಿಯನ್ನು ಅಂಗಡಿಯ ಹೊರಗಿಟ್ಟು ಹೋಗಿದ್ದರು. ಆದರೆ ಬೆಳಗ್ಗೆ ಬಂದು ನೋಡಿದಾಗ ಎರಡು ಮೂಟೆಗಳು ಕಾಣೆಯಾಗಿದ್ದವು.

ತಕ್ಷಣವೇ ಅಮಿತ್​ ಅವರು ಈರುಳ್ಳಿ ಕಳುವಿನ ಮಾಹಿತಿಯನ್ನು ಪೊಲೀಸರಿಗೆ ತಿಳಿಸುತ್ತಾರೆ. ಅಮಿತ್​ ನೀಡಿದ ದೂರಿನ ಅನ್ವಯ ಪೊಲೀಸರು ಕಳ್ಳರಿಗಾಗಿ ಬಲೆ ಬೀಸುತ್ತಾರೆ. ಕೊನೆಗೆ ಒಂದು ಕ್ವಿಂಟಾಲ್​ ಈರುಳ್ಳಿ ಕದ್ದ ಕಳ್ಳರನ್ನು ಪೊಲೀಸರು ಹಿಡಿದು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Salaga: ಡಿ.18ಕ್ಕೆ ‘ಸಲಗ‘ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್!ಇದನ್ನೂ ಓದಿ: ಬದಲಾಯ್ತು ನಟಿ ಶಾನ್ವಿ ಶ್ರೀವಾಸ್ತವ್​​ ಹೆಸರು! ಇದಕ್ಕೆ ‘ಅವನೇ‘ ಕಾರಣ
Published by: Harshith AS
First published: December 16, 2019, 7:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories