ಹಿಂದೂ ಮುಖಂಡ ಕಮಲೇಶ್ ತಿವಾರಿ ಬರ್ಬರ ಹತ್ಯೆ; ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಕಮಲೇಶ್ ತಿವಾರಿ ಅವರು ಹಿಂದೂ ಸಮಾಜ ಪಾರ್ಟಿಯ ಮುಖ್ಯಸ್ಥರು ಹಾಗೂ ಹಿಂದೂ ಮಹಾಸಭಾ ಮಾಜಿ ನಾಯಕರಾಗಿದ್ದು, ಕಳೆದ ಶುಕ್ರವಾರ ಲಕ್ನೋದಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎಸ್‍ಐಟಿ ತಂಡ ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

news18-kannada
Updated:October 23, 2019, 3:30 PM IST
ಹಿಂದೂ ಮುಖಂಡ ಕಮಲೇಶ್ ತಿವಾರಿ ಬರ್ಬರ ಹತ್ಯೆ; ಇಬ್ಬರು ಪ್ರಮುಖ ಆರೋಪಿಗಳ ಬಂಧನ
ಕಮಲೇಶ್ ತಿವಾರಿ
  • Share this:
ನವದೆಹಲಿ (ಅ. 23): ಉತ್ತರ ಪ್ರದೇಶದ ಹಿಂದೂ ನಾಯಕ ಕಮಲೇಶ್ ತಿವಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅ. 18ರಂದು ಲಕ್ನೋದಲ್ಲಿ ಕಮಲೇಶ್ ತಿವಾರಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಗುಜರಾತ್​ನ ಭಯೋತ್ಪಾದನಾ ನಿಗ್ರಹ ದಳ ಇಬ್ಬರು ಆರೋಪಿಗಳನ್ನು ರಾಜಸ್ಥಾನ ಗಡಿಯಲ್ಲಿ ಹತ್ಯೆ ಮಾಡಿದೆ. ಸೂರತ್​ ಮೂಲದ ಅಶ್​ಫಾಖ್​ ಶೇಖ್ ಮತ್ತು ಮೊಯಿನುದ್ದೀನ್ ಪಠಾಣ್ ಅವರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್ ತಿವಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಅರವಿಂದ ನಗರದ ಮೊಹಮ್ಮದ್ ಜಾಫರ್ ಸಾದಿಕ್​ನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು. ರೈಲ್ವೆ ಇಲಾಖೆಯ ಕಾರ್ಯಾಗಾರದಲ್ಲಿ ನೌಕರನಾಗಿದ್ದ ಮೊಹಮ್ಮದ್, ಕೆಲ ವರ್ಷಗಳಿಂದ ಸಿಮಿ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದನು ಎನ್ನಲಾಗಿದೆ. ಇದುವರೆಗೂ ಈ ಪ್ರಕರಣದಲ್ಲಿ 7 ಜನರನ್ನು ಬಂಧಿಸಲಾಗಿದೆ.

ಅತ್ಯಾಚಾರ ತಡೆಯಲಾಗದಿದ್ದರೆ ಎಂಜಾಯ್ ಮಾಡಿ; ವಿವಾದ ಸೃಷ್ಟಿಸಿದ ಕಾಂಗ್ರೆಸ್ ಸಂಸದನ ಪತ್ನಿಯ ಫೇಸ್​ಬುಕ್ ಪೋಸ್ಟ್​

ಕಮಲೇಶ್ ತಿವಾರಿ ಅವರು ಹಿಂದೂ ಸಮಾಜ ಪಾರ್ಟಿಯ ಮುಖ್ಯಸ್ಥರು ಹಾಗೂ ಹಿಂದೂ ಮಹಾಸಭಾ ಮಾಜಿ ನಾಯಕರಾಗಿದ್ದು, ಕಳೆದ ಶುಕ್ರವಾರ ಲಕ್ನೋದಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎಸ್‍ಐಟಿ ತಂಡ ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಕಮಲೇಶ್ ತಿವಾರಿ 2015ರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಇದೀಗ ಬಂಧಿಸಿರುವ ಅಶ್​ಫಾಕ್​ (34), ಮೊಯಿನುದ್ದೀನ್ ಪಠಾಣ್ (27) ಗುಜರಾತ್​- ರಾಜಸ್ಥಾನ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಹತ್ಯೆ ಮಾಡಿದ ನಂತರ ತಪ್ಪಿಸಿಕೊಳ್ಳುವ ಸಲುವಾಗಿ ಈ ಇಬ್ಬರು ಆರೋಪಿಗಳು ನೇಪಾಳಕ್ಕೆ ಹೋಗಿ ತಲೆಮರೆಸಿಕೊಳ್ಳಲು ಪ್ಲಾನ್ ಮಾಡಿದ್ದರು. ಇದರ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಗುಜರಾತ್ ಎಟಿಎಸ್​ ಸಹಾಯದೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರ ಬಳಿಯೂ ದುಡ್ಡು ಖಾಲಿಯಾಗಿದ್ದರಿಂದ ಮನೆಯವರನ್ನು ಸಂಪರ್ಕಿಸಿ ತುರ್ತಾಗಿ ದುಡ್ಡು ಬೇಕೆಂದು ಕೇಳಿದ್ದರು. ಆ ಇಬ್ಬರು ಕುಟುಂಬಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ನಿನ್ನೆ ಸಂಜೆ ಬಂಧಿಸುವಲ್ಲಿ ಸಫಲರಾಗಿದ್ದಾರೆ.ಹಿಂದೂ ಸಮಾಜ ಪಾರ್ಟಿ ಮುಖಂಡರಾಗಿದ್ದ 45 ವರ್ಷದ ತಿವಾರಿ ಅವರನ್ನು ಲಕ್ನೋದ ಅವರ ಮನೆಯಲ್ಲೇ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಇದಕ್ಕೂ ಮೊದಲು ಅವರು ಹಿಂದು ಮಹಾಸಭಾದಲ್ಲೂ ಗುರುತಿಸಿಕೊಂಡಿದ್ದರು. ಬಂಧಿಸಲ್ಪಟ್ಟ ಆರೋಪಿಗಳಿಂದ ರಕ್ತಸಿಕ್ತವಾದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಕೇಸರಿ ಕುರ್ತಾ ಧರಿಸಿದ್ದ ವ್ಯಕ್ತಿಗಳು ಕೊಲೆ ನಡೆದ ರಾತ್ರಿ ತಿವಾರಿ ಅವರ ಮನೆಯಿಂದ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸಿತ್ತು.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading