ಅಮಿತ್ ಶಾ ರಾಜೀನಾಮೆ ನೀಡಬೇಕು: ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್

ಅಮಿತ್​ ಶಾ

ಅಮಿತ್​ ಶಾ

#AmitShahMustResign ಹ್ಯಾಷ್​ಟ್ಯಾಗ್ ಇವತ್ತು ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್ ಆಗಿದೆ. ದೆಹಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಇವತ್ತೂ ಗುಂಡಿನ ದಾಳಿ ನಡೆಸಿದ ಕಾರಣಕ್ಕೆ ಟ್ವೀಟಿಗರ ಗುಂಪೊಂದು ಆಕ್ರೋಶ ವ್ಯಕ್ತಪಡಿಸಿದೆ.

  • News18
  • 2-MIN READ
  • Last Updated :
  • Share this:

    ಬೆಂಗಳೂರು(ಜ. 03): ಸಿಎಎ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಲೇ ಇದೆ. ಶಾಹೀನ್​ಬಾಗ್​ನಲ್ಲಿ ಸಾವಿರಾರು ಜನರು ನಿತ್ಯವೂ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರ ಮೇಲೆ ದಾಳಿ ನಡೆಯುತ್ತಿರುವ ಪ್ರಕರಣಗಳೂ ಇವೆ. ಇವತ್ತು ಇಂಥ ಮೂರನೇ ಘಟನೆ ವರದಿಯಾಗಿದೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಅಪರಿಚಿತ ವ್ಯಕ್ತಿಗಳು ಪ್ರಭಟನಾಕಾರರತ್ತ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ಟ್ವಿಟ್ಟರ್​ನಲ್ಲಿ ಒಂದು ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ದಾಳಿಯಾದರೂ ಭದ್ರತಾ ಕ್ರಮ ಅನುಸರಿಸುತ್ತಿಲ್ಲವೆಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಟ್ವೀಟಿಗರು ಆಗ್ರಹಪಡಿಸುತ್ತಿದ್ಧಾರೆ. ಇವತ್ತು ಟ್ವಿಟ್ಟರ್​ನಲ್ಲಿ #AmitShahMustResign (ಅಮಿತ್ ಶಾ ರಾಜೀನಾಮೆ ನೀಡಬೇಕು) ಟ್ರೆಂಡಿಂಗ್ ಆಗಿದೆ.


    ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಪಾಲಿಸಲು ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ. ಈವರೆಗೆ ನಾಲ್ಕು ಫೈರಿಂಗ್ ಪ್ರಕರಣಗಳು ದಾಖಲಾಗಿವೆ. ಇದು ನಿಲ್ಲಬೇಕಾದರೆ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಜೈನಬ್ ಖಾನ್ ಎಂಬುವರು ಟ್ವೀಟ್ ಮಾಡಿದ್ದಾರೆ.


    ಅಮಿತ್ ಶಾ ಅವರಿಗೆ ಅಧಿಕಾರವನ್ನು ಜಾಣತನದಿಂದ ಬಳಕೆ ಮಾಡುವುದು ಗೊತ್ತಿದೆ. ಚುನಾವಣೆ ವೇಳೆ ಯಾರನ್ನು ಆಯ್ಕೆ ಮಾಡಬೇಕೆಂಬ ಅವಕಾಶ ಜನರಿಗೆ ಇತ್ತು. ಅವರು ಆಯ್ಕೆ ಮಾಡಿದ್ದು ಇಂಥವರನ್ನೇ ಎಂದು ಒಬ್ಬ ಟ್ವೀಟಿಗ ಮರುಗಿದ್ಧಾರೆ.


    ಇದನ್ನೂ ಓದಿ: ಜಾಮಿಯಾ ವಿವಿಯಲ್ಲಿ ಮತ್ತೆ ಗುಂಡಿನ ಮೊರೆತ; ದೆಹಲಿಯಲ್ಲಿ ಸಿಎಎ ವಿರೋಧಿ ಹೋರಾಟಗಾರರನ್ನು ಗುರಿಯಾಗಿಸಿ 4 ದಿನದಲ್ಲಿ 3ನೇ ದಾಳಿ


    ರಾಷ್ಟ್ರ ರಾಜಧಾನಿಯ ಪರಿಸ್ಥಿತಿ ಹದಗೆಟ್ಟುಹೋಗಿದೆ. ಅಮಿತ್ ಶಾ ದೇಶ ಕಂಡ ಅತ್ಯಂತ ಕೆಟ್ಟ ಗೃಹ ಮಂತ್ರಿ ಎಂದು ಐರಿಸ್ ಅರ್ಮಾನ್ ಎಂಬುವರು ಗುಡುಗಿದ್ದಾರೆ. ಒಂದು ತಿಂಗಳಿನಿಂದ ದೆಹಲಿಯು ದುಷ್ಕರ್ಮಿಗಳ ಕೈಗೆ ಸಿಕ್ಕು ನಲುಗುತ್ತಿದೆ. ಇದಕ್ಕೆ ಅಮಿತ್ ಶಾ ಮಾತ್ರವೇ ಕಾರಣ ಎಂದು ಫೈಜಾನ್ ಎಂಬುವರು ಆರೋಪಿಸಿದ್ದಾರೆ.







    ಭಾರತದಲ್ಲಿ ಸಿಎಎ ವಿರೋಧಿಸಿ ಪ್ರತಿಭಟಿಸಿದ್ದಕ್ಕಾಗಿ ದೇಶಾದ್ಯಂತ 22 ಅಮಾಯಕರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಭಾರತವನ್ನ ಹಿಟ್ಲರ್ ಕಾಲದ ಜರ್ಮನಿಯಂತೆ ಮಾಡಲು ಹೊರಟಿದ್ಧಾರೆ. ಬಿಜೆಪಿಯ ಪ್ರತಿಯೊಂದು ನೀತಿಯೂ ಹಿಟ್ಲರ್​ನದ್ದಕ್ಕೆ ಹೋಲಿಕೆಯಾಗುತ್ತದೆ ಎಂದು ಶದಾಬ್ ಅಲಿ ಖಾನ್ ಪರಿತಪಿಸಿದ್ದಾರೆ.





    #AmitShahMustResign ಹ್ಯಾಷ್​ಟ್ಯಾಗ್​ನಲ್ಲಿ ಬಲಪಂಥೀಯರೂ ಕೂಡ ಅಮಿತ್ ಶಾ ಅವರನ್ನ ಸಮರ್ಥಿಸಿಕೊಂಡು ಟ್ವೀಟ್ ಮಾಡುತ್ತಿದ್ಧಾರೆ. ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸುತ್ತಿರುವವರನ್ನು ಚೀನಾದ ವುಹಾನ್ ಪ್ರದೇಶಕ್ಕೆ ಎಸೆದರೆ ಕೆಲವೇ ನಿಮಿಷಗಳಲ್ಲಿ ನಮ್ಮನ್ನು ಕಾಪಾಡಿ ಎಂದು ಅಮಿತ್ ಶಾಗೆ ಈ ಜನಗಳೇ ಮೊರೆ ಹೋಗುತ್ತಾರೆ ಎಂದು ಟ್ವೀಟಿಗನೊಬ್ಬ ವ್ಯಂಗ್ಯ ಮಾಡಿದ್ಧಾನೆ.


    ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.


    Published by:Vijayasarthy SN
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು