• Home
  • »
  • News
  • »
  • national-international
  • »
  • ಟ್ವಿಟ್ಟರ್ V/S ಕೇಂದ್ರ ಸರ್ಕಾರ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಚ್ಚರಿಕೆ!

ಟ್ವಿಟ್ಟರ್ V/S ಕೇಂದ್ರ ಸರ್ಕಾರ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಚ್ಚರಿಕೆ!

ಕೇಂದ್ರ ಐಟಿ ಸಚಿವ ರವಿಶಂಕರ್​ ಪ್ರಸಾದ್.

ಕೇಂದ್ರ ಐಟಿ ಸಚಿವ ರವಿಶಂಕರ್​ ಪ್ರಸಾದ್.

ಪ್ರಸಾರ ಖಾತೆ ಸಚಿವರ ಟ್ವಿಟ್ಟರ್​ ಖಾತೆಯನ್ನು 1 ಗಂಟೆಗಳ ಕಾಲ ಸ್ಥಗಿತ ಮಾಡಿ ಎಚ್ಚರಿಕೆ ಸಂದೇಶ ಕಳಹಿಸಿರುವುದು ತೀವ್ರ ಚರ್ಚೆಗೆ ಗುರಿಯಾಗಿದೆ.

  • Share this:

ನವದೆಹಲಿ : ಹೊಸ ಐಟಿ ನಿಯಮಗಳ ವಿಚಾರವಾಗಿ ಟ್ವಿಟ್ಟರ್​ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿ ಮುಂದುವರೆದಿದೆ.ಈಗಾಗಲೇ ಹಲವು ನಾಯಕರ ಟ್ವಿಟ್ಟರ್ ಖಾತೆಯನ್ನ ಬ್ಲೂ ಟಿಕ್ ತೆಗೆದು ಹಾಕಿ, ವಿವಾದಕ್ಕೆ ಈಡಾಗಿದ್ದಂತ ಟ್ವಿಟ್ಟರ್, ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕೇಂದ್ರ ಪ್ರಸಾರ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರ ಖಾತೆಗೆ ಪ್ರವೇಶವನ್ನು ಟ್ವಿಟ್ಟರ್ 1 ಗಂಟೆಗಳ ಕಾಲ ನಿರಾಕರಿಸಿದೆ.


ಈ ಕುರಿತಂತೆ ಮತ್ತೊಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು, ಟ್ವಿಟ್ಟರ್ ನನ್ನ ಖಾತೆಯನ್ನು ಪ್ರವೇಶಿಸುವುದಕ್ಕೆ ನಿರ್ಬಂಧಿಸಿದೆ. ಈ ಬಗ್ಗೆ ಮಾಹಿತಿ ಪಡೆದಾಗ, ತಾವು ಯುಎಸ್‌ಎಯ ಡಿಜಿಟಲ್ ಮಿಲೇನಿಯಂ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬುದಾಗಿ ತಿಳಿಸಿದೆ ಎಂದಿದ್ದಾರೆ.


ಸಾರ್ವಜನಿವಾಗಿ ರವಿಶಂಕರ್​ ಪ್ರಸಾದ್​ ಅವರ ಖಾತೆ ಕಾಣುತ್ತಿತ್ತು, ಆದರೆ ಅಕೌಂಟ್​​ ತೆರೆಯಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕೊ ಆ್ಯಪ್​ನಲ್ಲಿ ವಿಚಿತ್ರ ಸಂಗತಿ ನಡೆದಿದೆ ಎಂದು ತಮ್ಮ ಅಕೌಂಟ್​ ಬಗ್ಗೆ ಸಚಿವರು ತಿಳಿಸಿದ್ದರು. 1 ಗಂಟೆಗಳ ಸ್ಥಗಿತದ ಬಳಿಕ ಟ್ವಿಟ್ಟರ್​​ ಎಚ್ಚರಿಕೆ ಸಂದೇಶದೊಂದಿಗೆ ಮತ್ತೆ ಅಕೌಂಟ್​ ತೆರೆಯಲು ಅನುಮತಿ ನೀಡಿದೆ. ನಿಮ್ಮೆ ಖಾತೆ ಬಗ್ಗೆ ಮತ್ತೆ ದೂರುಗಳು ಬಂದರೆ ಶಾಶ್ವತವಾಗಿ ಖಾತೆ ಬಂದ್​ ಆಗಬಹುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಹಿಂಸೆ, ಕೃತಿ ಸ್ವಾಮ್ಯಕ್ಕೆ ಧಕ್ಕೆ ಬರವಂತೆ ಮತ್ತೆ ಮಾಡಬೇಡಿ ಎಂದು ಎಚ್ಚರಿಸಲಾಗಿದೆ.


ಈ ಬಗ್ಗೆ ಸಚಿವರ ಕಚೇರಿ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ಟ್ವಿಟ್ಟರ್​ ಖಾತೆ ಸ್ಥಗಿತದ ಬಗ್ಗೆ ಮೊದಲೇ ತಿಳಿಸಿರಲಿಲ್ಲ. ಜೊತೆಗೆ ಯಾವ ವಿಚಾರದಲ್ಲಿ ನಿಯಮಗಳನ್ನು ಮೀರಲಾಗಿದೆ ಎಂದೂ ಟ್ವಿಟ್ಟರ್​ ತಿಳಿಸಿಲ್ಲ ಎಂದಿದ್ದಾರೆ. ಕಳೆದ ಕೆಲ ದಿನಗಳಿಂದ ಹೊಸ ಐಟಿ ನಿಯಮಗಳ ವಿಚಾರವಾಗಿ ನಡೆಯುತ್ತಿರುವ ತಿಕ್ಕಾಟ ಸಂಬಂಧ ಟ್ವಿಟ್ಟರ್​ ಹೀಗೆ ಮಾಡಿದೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಬಿಜೆಪಿ ಹಾಗೂ ಆರ್​ಎಸ್​ಎಸ್​ ನಾಯಕ ಖಾತೆಗಳ ಬ್ಲೂ ಟಿಕನ್ನು ರದ್ದುಗೊಳಿಸಿ ಟ್ವಿಟ್ಟರ್​ ಕೆಂಗಣ್ಣಿಗೆ ಗುರಿಯಾತ್ತಿತ್ತು. ಈಗ ಪ್ರಸಾರ ಖಾತೆ ಸಚಿವರ ಟ್ವಿಟ್ಟರ್​ ಖಾತೆಯನ್ನು 1 ಗಂಟೆಗಳ ಕಾಲ ಸ್ಥಗಿತ ಮಾಡಿ ಎಚ್ಚರಿಕೆ ಸಂದೇಶ ಕಳಹಿಸಿರುವುದು ತೀವ್ರ ಚರ್ಚೆಗೆ ಗುರಿಯಾಗಿದೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: