• Home
  • »
  • News
  • »
  • national-international
  • »
  • Elon Musk: 'ವಿಶ್ವ ಕುಬೇರನ' ಪಟ್ಟ ಕೈ ಜಾರುತ್ತಿದ್ದಂತೆಯೇ ಕೊಟ್ಟ ಮಾತು ತಪ್ಪಿದ್ರಾ ಮಸ್ಕ್? ಎಲಾನ್​ಜೆಟ್​ಗೆ ಶಾಕ್!

Elon Musk: 'ವಿಶ್ವ ಕುಬೇರನ' ಪಟ್ಟ ಕೈ ಜಾರುತ್ತಿದ್ದಂತೆಯೇ ಕೊಟ್ಟ ಮಾತು ತಪ್ಪಿದ್ರಾ ಮಸ್ಕ್? ಎಲಾನ್​ಜೆಟ್​ಗೆ ಶಾಕ್!

ಎಲಾನ್ ಮಸ್ಕ್

ಎಲಾನ್ ಮಸ್ಕ್

ಎಲಾನ್ ಮಸ್ಕ್​ರ ಫ್ರೀ ಸ್ಪಿಚ್​​ ಬಹಿರಂಗ ಹೇಳಿಕೆ ಬಳಿಕವೂ ಎಲಾನ್​​​ ಜೆಟ್​ ಟ್ವಿಟರ್ ಖಾತೆಯನ್ನು ರದ್ದು ಪಡಿಸಲಾಗಿದೆ.

  • Share this:

ಟೆಸ್ಲಾ (Tesla) ಮುಖ್ಯಸ್ಥ, ಟೆಕ್ ಲೋಕದ ದೈತ್ಯ ಎಲಾನ್ ಮಸ್ಕ್ (Elon Musk)  ಅವರ ಖಾಸಗಿ ಜೆಟ್​​ಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಎಲಾನ್​ಜೆಟ್ (@ElonJet) ಖಾತೆಯನ್ನು ಟ್ವಿಟರ್ (Twitter) ರದ್ದುಪಡಿಸಿದೆ. ಎಲಾನ್ ಮಸ್ಕ್​ರ ಫ್ರೀ ಸ್ಪಿಚ್​​ ಬಹಿರಂಗ ಹೇಳಿಕೆ ಬಳಿಕವೂ ಎಲಾನ್​​ಜೆಟ್​ ಟ್ವಿಟರ್ ಖಾತೆಯನ್ನು ರದ್ದು ಪಡಿಸಲಾಗಿದೆ. ಅಂದಹಾಗೇ, ಎಲಾನ್​​ಜೆಟ್​ ಟ್ವಿಟರ್ ಖಾತೆ ಸಾವಿರಾರು ಹಿಂಬಾಲಕರನ್ನು ಹೊಂದಿದ್ದು, ಈ ಖಾತೆಯಲ್ಲಿ ಎಲಾನ್ ಮಸ್ಕ್​ರ ಖಾಸಗಿ ಜೆಟ್​​ಗಳ ಮಾಹಿತಿಯನ್ನು ಪ್ರಕಟಿಸಲಾಗುತ್ತಿತ್ತು. ಈ ಟ್ವಿಟರ್​ ಖಾತೆಯನ್ನು 19 ವರ್ಷದ ಜ್ಯಾಕ್​ ಎಂಬಾತ ತೆರದು ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಇದೆ.


ವಿಶೇಷ ಎಂದರೆ, ಜ್ಯಾಕ್​ ವಿಶ್ವದ ಹಲವು ಗಣ್ಯ ವ್ಯಕ್ತಿಗಳ ಖಾಸಗಿ ಜೆಟ್​​ಗಳ ಮಾಹಿತಿಯನ್ನು ಟ್ರ್ಯಾಕ್​ ಮಾಡಿ ಆ ಮಾಹಿತಿಯನ್ನು ಟ್ವಿಟರ್, ಇನ್​​ಸ್ಟಾ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ. ವಿಶ್ವದಾದ್ಯಂತ ಈತನಿಗೆ ಸಾವಿರಾರರು ಮಂದಿ ಹಿಂಬಾಲಕರಿದ್ದಾರೆ.


ಜ್ಯಾಕ್​ಗೆ ಬಿಗ್​ ಆಫರ್​ ನೀಡಿದ್ದರಂತೆ ಎಲಾನ್ ಮಸ್ಕ್​​


ಹೌದು, ಈ ಹಿಂದೆ ವರದಿಯದಂತೆ ಟೆಸ್ಲಾ ಸಿಇಒ ಎಲಾನ್​ ಮಸ್ಕ್​​ರ ಜೆಟ್​​ ಮಾಹಿತಿಗಳನ್ನು ಬಹಿರಂಗ ಪಡಿಸಿದಂತೆ ಜ್ಯಾಕ್​ಗೆ ಬಿಗ್​ ಆಫರ್​​ ನೀಡಲಾಗಿತ್ತಂತೆ. ಕಾಲೇಜು ವಿದ್ಯಾರ್ಥಿಯಾಗಿರೋ ಜ್ಯಾಕ್​, ಎಲಾನ್ ಮಸ್ಕ್​​ ಮಾತ್ರವಲ್ಲದೇ ಬಿಲ್​​ ಗೇಟ್ಸ್, ಜೆಫ್​ ಬೆಜೋಸ್ ಸೇರಿದಂತೆ ವಿಶ್ವದ ಗಣ್ಯರನ್ನು ಟ್ರ್ಯಾಕ್​ ಮಾಡಿ ಅವರ ಜೆಟ್​​ಗಳ ಟೆಕ್​ ಆಫ್​​ ಹಾಗೂ ಲ್ಯಾಂಡಿಂಗ್​ ಮಾಹಿತಿಯನ್ನು ಸಾರ್ವಜನಿಕರಿಗೆ ಸಿಗುವಂತೆ ಪೋಸ್ಟ್​ ಮಾಡುತ್ತಿದ್ದ.


ಇದನ್ನೂ ಓದಿ: Elon Musk: ಟೆಸ್ಲಾ ಷೇರು ಖರೀದಿಸೋರಿಲ್ಲ, ಎಲಾನ್​ ಮಸ್ಕ್​ಗೂ ಶುರುವಾಯ್ತು ಡವ ಡವ!


ಎಲಾನ್​ ಮಸ್ಕ್​ ಅವರ ಜೆಟ್​ ಮಾಹಿತಿಯನ್ನು ಟ್ರ್ಯಾಕ್​ ಮಾಡಿ ಹಂಚಿಕೊಳ್ಳುತ್ತಿದ್ದ ಟ್ವಿಟರ್​ ಖಾತೆಗೆ ಬರೋಬ್ಬರಿ 80 ಸಾವಿರಕ್ಕೂ ಹೆಚ್ಚು ಹಿಂಬಾಲಕರಿದ್ದರಂತೆ. ಈ ಕಾರಣದಿಂದಲೇ ಖಾಸಗಿ ಮಾಹಿತಿ ಬಹಿರಂಗ ಪಡಿಸದಂತೆ ಜ್ಯಾಕ್​ಗೆ ಎಲಾನ್​ ಮಸ್ಕ್​ ಕಡೆಯಿಂದ ಬಿಗ್​ ಆಫರ್ ನೀಡಲಾಗಿತ್ತು ಎನ್ನಲಾಗಿದೆ.ಟ್ವಿಟರ್​ ಖಾತೆ ಬಂದ್​ ಆಗುತ್ತಿದ್ದಂತೆ ಇನ್​​ಸ್ಟಾದಲ್ಲಿ ಪೋಸ್ಟ್​


ಇನ್ನು, ಎಲಾನ್​​ ಜೆಟ್​ ಟ್ವಿಟರ್​ ಖಾತೆ ರದ್ದು ಮಾಡಿರುವ ಬಗ್ಗೆ ಜಾಕ್​ ಸ್ವೀನಿ ತನ್ನ ಖಾಸಗಿ ಟ್ವಿಟರ್​ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. @ElonJet ಅನ್ನು ರದ್ದುಗೊಳಿಸಲಾಗಿದೆ ಎಂದು ಕಾಣುತ್ತಿದೆ ಎಂದು ಜ್ಯಾಕ್​​ ಬರೆದುಕೊಂಡಿದ್ದಾರೆ.


ಟ್ವಿಟರ್​ ನೀತಿ ನಿಯಮಗಳ ನವೀಕರಣವಾದ ಒಂದು ದಿನದ ಬಳಿಕ ಎಲಾನ್ ​ಜೆಟ್ ಖಾತೆಯನ್ನು ರದ್ದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೊಸ ನಿಯಮಗಳ ಅನ್ವಯ ಯಾವುದೇ ಒಬ್ಬರ ವ್ಯಕ್ತಿಯ ರಿಯಲ್​ ಟೈಮ್ ಲೇಕೋಶನ್​​ ಶೇರ್​ ಮಾಡುವುದನ್ನು ಸಂಸ್ಥೆಯ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.


ದುರುದ್ದೇಶದಿಂದ ಖಾಸಗಿ ವ್ಯಕ್ತಿಯ ಮಾಹಿತಿ ಬಹಿರಂಗ ಪಡಿಸುವಂತಿಲ್ಲ


ಎಲಾನ್ ​ಜೆಟ್​​ ಟ್ವಿಟರ್​ ಖಾತೆಯನ್ನು ರದ್ದು ಪಡಿಸಿದ ಬಳಿಕ ಇನ್​​ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿರೋ ಜ್ಯಾಕ್, ನನ್ನ ಟ್ವಿಟರ್​ ಖಾತೆಯನ್ನು ರದ್ದುಪಡಿಸಿದ ಬಳಿಕ ಮಸ್ಕ್​ ಅವರ ಜೆಟ್​ ಕಳೆದ ರಾತ್ರಿ ಲಾಸ್​​ಎಂಜಲೀಸ್​​ನಿಂದ ಆಸ್ಟಿನ್​​ಗೆ ಹಾರಾಟ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.


ಈ ಹಿಂದೆ ಟ್ವೀಟ್​ ಮಾಡಿದ್ದ ಎಲಾನ್ ಮಸ್ಕ್​, ಯಾವುದೇ ಖಾತೆಯಿಂದ ವ್ಯಕ್ತಿಯ ರಿಯಲ್​​ ಟೈಮ್​​ ಮಾಹಿತಿಯನ್ನು ಬಹಿರಂಗ ಪಡಿಸುವುದು ಭೌತಿಕ ಸುರಕ್ಷತೆಯ ನಿಯಮದ ಉಲ್ಲಂಘನೆಯಾಗುತ್ತದೆ. ಅಂತಹ ಖಾತೆಗಳನ್ನು ಅಮಾನತು ಮಾಡಲಾಗುತ್ತದೆ ಎಂದು ವಿವರಿಸಿದ್ದರು.


ಇದನ್ನೂ ಓದಿ: Elon Musk: ಗೂಗಲ್ ಓನರ್ ಹೆಂಡತಿ ಜೊತೆ ಎಲಾನ್ ಮಸ್ಕ್ ಲವ್ವಿ ಡವ್ವಿ?


Twitter Suspends Account ElonJet that Tracked Elon Musk s Private Jet Flights
ಎಲಾನ್ ಮಸ್ಕ್ ಟ್ವೀಟ್


ಟ್ವಿಟರ್​ ಕೊಟ್ಟ ಸ್ಪಷ್ಟನೆ ಏನು?


ವ್ಯಕ್ತಿಯ ಗುರುತು, ಆತನ ವಿಳಾಸ ಅಥವಾ ಮೊಬೈಲ್ ನಂಬರ್ ನಂತಹ ಮಾಹಿತಿ ಸೇರಿರುತ್ತದೆ. ಅದರಲ್ಲೂ ಟಾರ್ಗೆಟ್ ಮಾಡಿ ನಿಂದನೆ ಮಾಡಲು ದುರುಪಯೋಗ ಪಡಿಸಿಕೊಳ್ಳುವುದು ನಿಯಮದ ಉಲ್ಲಂಘನೆಯಾಗುತ್ತದೆ. ಆದರೆ ಸಾರ್ವಜನಿಕ ಸಮಾರಂಭಗಳು ಸೇರಿದಂತೆ ವ್ಯಕ್ತಿಯ ಅದೇ ದಿನದ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ಟ್ವಿಟರ್ ತಿಳಿಸಿದೆ.


ಇದೇ ವೇಳೆ ಟ್ವಿಟರ್ ಸ್ಪಷ್ಟನೆಯನ್ನು ನೀಡಿದ್ದು, ಜನರು ತಮ್ಮ ಲೈವ್ ಲೋಕೇಶನ್​​ಅನ್ನು ತಮ್ಮ ಖಾತೆಗಳಲ್ಲಿ ಶೇರ್ ಮಾಡಬಹುದು. ಅಲ್ಲದೇ ಮ್ಯೂಸಿಕ್​ ಕಾರ್ಯಕ್ರಮಗಳು, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಸಾರ್ವಜನಿಕ ಈವೆಂಟ್​​ಗೆ ಸಂಬಂಧಿಸಿದ ಸ್ಥಳಗಳ ಮಾಹಿತಿ ಹಂಚಿಕೊಳ್ಳಲು ಅನುಮತಿ ನೀಡಿದ್ದಾಗಿ ಹೇಳಿದೆ. ಆದರೆ, ಟ್ವಿಟರ್​​​ ಅನ್ನು 44 ಬಿಲಿಯನ್​ ಡಾಲರ್​ ಕೊಟ್ಟು ಖರೀದಿ ಮಾಡಿದ್ದ ಸಂದರ್ಭದಲ್ಲಿ ಎಲಾನ್​ ಮಸ್ಕ್​, ಟ್ವಿಟರ್ ಖಾತೆಗಳನ್ನು ರದ್ದು ಮಾಡೋದಿಲ್ಲ ಎಂದು ತಿಳಿಸಿದ್ದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು