ಹಣ ಡಬಲ್ ಮಾಡ್ತೀನಿ – ಬಿಲ್ ಗೇಟ್ಸ್​ನಂಥ ದೊಡ್ಡವರ ಅಕೌಂಟ್​ನಿಂದ ಟ್ವೀಟ್; ಟ್ವಿಟ್ಟರ್​ನಲ್ಲಿ ಹ್ಯಾಕರ್ಸ್ ಕಿತಾಪತಿ

ನೀವು ಕಳುಹಿಸುವ ಹಣವನ್ನು ಡಬಲ್ ಮಾಡಿ ವಾಪಸ್ ಕೊಡುತ್ತೇನೆ ಎಂಬಂತಹ ಹಣಕಾಸು ವಂಚನೆ ಉದ್ದೇಶದ ಟ್ವೀಟ್​ಗಳು ಹಲವು ಗಣ್ಯರ ಅಕೌಂಟ್​ಗಳಿಂದ ಹೋಗಿದ್ದವು. ಬಿಟ್ ಕಾಯಿನ್ ವಿಳಾಸವನ್ನು ಟ್ವೀಟ್​ಗಳಲ್ಲಿ ನೀಡಲಾಗಿತ್ತು.

ಟ್ವಿಟರ್

ಟ್ವಿಟರ್

 • Share this:
  ಸ್ಯಾನ್ ಫ್ರಾನ್ಸಿಸ್ಕೋ(ಜುಲೈ 16): ವಿಶ್ವದ ಅತಿದೊಡ್ಡ ಗಣ್ಯರು ಮತ್ತು ವಾಣಿಜ್ಯೋದ್ಯಮಿಗಳ ಟ್ವಿಟ್ಟರ್ ಖಾತೆಗಳನ್ನ ಹ್ಯಾಕ್ ಮಾಡಿ ಹಣಕಾಸು ಅವ್ಯವಹಾರಕ್ಕೆ ಪ್ರಯತ್ನಿಸಿರುವ ಘಟನೆ ನಿನ್ನೆ ನಡೆದಿದೆ. ಸದ್ಯ ಟ್ವಿಟ್ಟರ್ ಎಲ್ಲಾ ವೆರಿಫೈಡ್ ಅಕೌಂಟ್​ಗಳನ್ನ ಲಾಕ್ ಮಾಡಿ ಪರಿಶೀಲನೆ ನಡೆಸಿದೆ. ನಿನ್ನೆ ಬುಧವಾರ ಬಿಲ್ ಗೇಟ್ಸ್, ಇಲಾನ್ ಮಸ್ಕ್, ಜೋ ಬಿದೆನ್, ವಾರೆನ್ ಬಫೆಟ್, ಜೆಫ್ ಬೆಜೋಸ್, ಮೈಕ್ ಬ್ಲೂಂಬರ್ಗ್, ಬರಾಕ್ ಒಬಾಮಾ, ಕಿಮ್ ಕರ್ದಾಶಿಯನ್ ಮೊದಲಾದ ಗಣ್ಯರ ಅಕೌಂಟ್​ಗಳಿಂದ ಒಂದೇ ತೆರನಾದ ಅನುಮಾನಸ್ಪದ ಟ್ವೀಟ್​ಗಳು ಆಗಿದ್ದವು. ಆಗ ಟ್ವಿಟ್ಟರ್ ಸಂಸ್ಥೆ ಎಚ್ಚೆತ್ತು, ಅಂಥ ಅಕೌಂಟ್​ಗಳೆಲ್ಲವನ್ನೂ ಲಾಕ್ ಮಾಡಿ ಭದ್ರತೆ ವ್ಯವಸ್ಥೆ ಸರಿಪಡಿಸಿದೆ. ಈಗ ಬಹುತೇಕ ಎಲ್ಲಾ ಅಕೌಂಟ್​ಗಳನ್ನ ಭದ್ರಗೊಳಿಸಲಾಗಿದೆ.

  ಕಂಪನಿಯ ಆಂತರಿಕ ಸಾಧನಗಳ (ಇಂಟರ್ನಲ್ ಟೂಲ್ಸ್) ನಿರ್ವಹಣೆ ಮಾಡುವ ತನ್ನ ಉದ್ಯೋಗಿಗಳ ಖಾತೆಗಳನ್ನ ಹ್ಯಾಕ್ ಮಾಡಲಾಗಿದೆ ಎಂದು ಟ್ವಿಟ್ಟರ್​ನ ಸಪೋರ್ಟ್ ಟೀಮ್ ಹೇಳಿಕೆ ನೀಡಿದೆ.

  ಇದನ್ನೂ ಓದಿ: RIL AGM 2020: ದೇಶದ ಆರ್ಥಿಕತೆಗೆ ಸಣ್ಣ ಉದ್ಯಮಗಳೇ ಮೂಲಾಧಾರ ಎಂದ ಫೇಸ್​ಬುಕ್ ಸಿಇಓ ಮಾರ್ಕ್ ಜುಕರ್​ಬರ್ಗ್

  ಏನಿತ್ತು ಟ್ವೀಟ್?

  “ಸಮಾಜಕ್ಕೆ ವಾಪಸ್ ಕೊಡಬೇಕು ಎಂದು ನನ್ನನ್ನು ಎಲ್ಲರೂ ಕೇಳುತ್ತಲೇ ಇದ್ಧಾರೆ. ಈಗ ಆ ಸಮಯ ಬಂದಿದೆ. ಮುಂದಿನ 30 ನಿಮಿಷಗಳಲ್ಲಿ ನನ್ನ BTC (ಬಿಟ್ ಕಾಯಿನ್) ವಿಳಾಸಕ್ಕೆ ಕಳುಹಿಸುವ ಎಲ್ಲಾ ಹಣವನ್ನು ದ್ವಿಗುಣ ಮಾಡುತ್ತೇನೆ. ನೀವು 1,000 ಡಾಲರ್ ಕಳುಹಿಸಿದರೆ ನಾನು 2,000 ವಾಪಸ್ ಮಾಡುತ್ತೇನೆ…. ಇದು 30 ನಿಮಿಷಗಳವರೆಗೆ ಮಾತ್ರ..!” ಎಂದು ಬಿಲ್ ಗೇಟ್ಸ್ ಸೇರಿದಂತೆ ಹಲವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಬಂದ ಟ್ವೀಟ್ ಆಗಿದೆ.

  Tweet sent by hackers using Bill Gates account
  ಬಿಲ್ ಗೇಟ್ಸ್ ಅವರ ಖಾತೆಯಿಂದ ಹೋಗಿದ್ದ ಒಂದು ಟ್ವೀಟ್


  ಇದರಲ್ಲಿ ಬಿಟ್ ಕಾಯಿನ್ ವಿಳಾಸವನ್ನು ನೀಡಲಾಗಿತ್ತು. ಅದರಲ್ಲಿರುವ ಬಿಟ್ ಕಾಯಿನ್ ವ್ಯಾಲಟ್​ಗೆ 1 ಲಕ್ಷ ಡಾಲರ್​ಗಿಂತ ಹೆಚ್ಚು ಹಣದ ಬಿಟ್ ಕಾಯಿನ್​ಗಳು ರವಾನೆಯಾಗಿದ್ದವು. ಆ ವ್ಯಾಲಟ್​ನಿಂದ ಆ ಹಣ ಬೇರೆ ಬೇರೆ ವ್ಯಾಲಟ್​ಗಳಿಗೆ ಹಂಚಿಕೆಯಾದವು. ಇದು ಬಹುದೊಡ್ಡ ಹಣಕಾಸು ವಂಚನೆಯಾಗಿದ್ದು, ಅಮೆರಿಕದ ಎಫ್​ಬಿಐ ತನಿಖಾ ಸಂಸ್ಥೆಯ ಗಮನ ಸೆಳೆದಿದೆ.

  ಇದನ್ನೂ ಓದಿ: Crime News: ಕಣ್ಮುಚ್ಚಿ ಬಿಡುವಷ್ಟರಲ್ಲಿ ಬ್ಯಾಂಕ್​ನಲ್ಲಿದ್ದ 10 ಲಕ್ಷ ರೂ. ಕದ್ದು 10 ವರ್ಷದ ಬಾಲಕ ಪರಾರಿ!

  ಇದೇ ವೇಳೆ, ಟ್ವಿಟ್ಟರ್​ನ ಸುರಕ್ಷತೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸೆಲೆಬ್ರಿಟಿಗಳು ಲಕ್ಷಾಂತರ ಫಾಲೋಯರ್​ಗಳನ್ನ ಹೊಂದಿರುವು ಒಂದೆಡೆಯಾದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂಥವರು ದೇಶದ ಪ್ರಮುಖ ನಿರ್ಧಾರಗಳನ್ನ ಟ್ವಿಟ್ಟರ್​ನಲ್ಲೇ ಘೋಷಿಸಲು ರೂಢಿ ಮಾಡಿಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅವರ ಅಕೌಂಟ್​ಗಳನ್ನು ಹ್ಯಾಕ್ ಮಾಡಿ ರಾಜಕೀಯ ಚಿತಾವಣಿಗೆ ದುರ್ಬಳಕೆ ಮಾಡಿಕೊಂಡರೆ ಹೇಗೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ಧಾರೆ.
  Published by:Vijayasarthy SN
  First published: