ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ; ಟ್ವಿಟರ್​ನಲ್ಲಿ ಗಮನಸೆಳೆಯುತ್ತಿರುವ ಮೆಮ್ಸ್​

ಪ್ರಧಾನಿ ಮೋದಿಯವರು ಯಾವ ವಿಷಯದ ಕುರಿತು ಮಾತನಾಡಲಿದ್ದಾರೆ ಎಂಬ ಅಂಶವನ್ನು ಸ್ಪಷ್ಟಪಡಿಸದ ಹಿನ್ನಲೆ ಜನರಲ್ಲಿ ಅನೇಕ ವಿಷಯಗಳ ಕುರಿತು ಊಹೆ ಮೂಡಿದೆ.

news18-kannada
Updated:October 20, 2020, 4:16 PM IST
ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ; ಟ್ವಿಟರ್​ನಲ್ಲಿ ಗಮನಸೆಳೆಯುತ್ತಿರುವ ಮೆಮ್ಸ್​
ಟ್ವಿಟರ್​ ಚಿತ್ರ
  • Share this:
ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ದೇಶದ ಜನರಲ್ಲಿ ಕುತೂಹಲ ಮೂಡಿದೆ. ಅವರು ಯಾವ ವಿಷಯದ ಕುರಿತು ಮಾತನಾಡಬಹುದು ಎಂಬ ಊಹೆ ಕುರಿತು ಟ್ವಿಟರ್​ನಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್​ನಲ್ಲಿ ಈ ವಿಷಯ ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಳೆದ ಬಾರಿ ದೇಶವನ್ನು ಉದ್ದೇಶಿಸಿದ ಮೋದಿ ದೇಶಾದಾದ್ಯಂತ ಲಾಕ್​ಡೌನ್​ ಜಾರಿ ಮಾಡಿದ್ದರು. ಇದರಿಂದ ವಲಸೆ ಕಾರ್ಮಿಕರು ಸೇರಿದಂತೆ ಸಾಮಾನ್ಯ ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಸದ್ಯ ಕೊರೋನಾ ಸೋಂಕು ಭಾರತದಲ್ಲಿ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ನವರಾತ್ರಿಯ ಸಾಲು ಸಾಲು ರಜೆಗಳು ಕೂಡ ಇದೆ. ಈ ಹಿನ್ನಲೆಅವರು ಯಾವ ವಿಷಯದ ಕುರಿತು ಮಾತನಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.ಪ್ರಧಾನಿ ಮೋದಿಯವರು ಯಾವ ವಿಷಯದ ಕುರಿತು ಮಾತನಾಡಲಿದ್ದಾರೆ ಎಂಬ ಅಂಶವನ್ನು ಸ್ಪಷ್ಟಪಡಿಸದ ಹಿನ್ನಲೆ ಜನರಲ್ಲಿ ಅನೇಕ ವಿಷಯಗಳ ಕುರಿತು ಊಹೆ ಮೂಡಿದೆ. ಇನ್ನು ಸೆಪ್ಟೆಂಬರ್​ನಲ್ಲಿ ಕೊರೋನಾ ಪ್ರಕರಣ ಗರಿಷ್ಠ ಮಟ್ಟದಲ್ಲಿ ಕಡಿಮೆಯಾಗಿರುವ ಕುರಿತು ಆರೋಗ್ಯ ಇಲಾಖೆ ಕೂಡ ಪ್ರಕಟಿಸಿದೆ.
Published by: Seema R
First published: October 20, 2020, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading