ನವದೆಹಲಿ(ಜೂನ್ 28): ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ಮಧ್ಯೆ ಶೀತಲ ಸಮರ ಏರ್ಪಟ್ಟಿರುವಂತೆ ತೋರುತ್ತಿದೆ. ಕೇಂದ್ರ ಸರ್ಕಾರದ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸುವ ಧ್ವನಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಆರೋಪ ಟ್ವಿಟ್ಟರ್ ಮೇಲಿದೆ. ಹಾಗೆಯೇ, ಬಿಜೆಪಿ ನಾಯಕರ ಪ್ರೊಫೈಲ್ಗೆ ಅಧಿಕೃತ ಮಾನ್ಯತೆ ನೀಡುವ ಬ್ಲೂಟಿಕರ್ ಅನ್ನು ತೆಗೆಯುವ ಮೂಲಕ ಟ್ವಿಟ್ಟರ್ ಸಂಸ್ಥೆ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು. ಅದರ ಬೆನ್ನಲ್ಲೇ ತಪ್ಪು ಮಾಹಿತಿ ರವಾನೆ ಕಾರಣವೊಡ್ಡಿ ಟ್ವಿಟ್ಟರ್ ಮೇಲೆ ವಿವಿಧೆಡೆ ಪ್ರಕರನಗಳೂ ದಾಖಲಾಗಿವೆ. ಇದಷ್ಟೇ ಅಲ್ಲ, ಭಾರತದ ನಕ್ಷೆಯ ವಿಚಾರದಲ್ಲೂ ಟ್ವಿಟ್ಟರ್ ಅನಗತ್ಯ ವಿವಾದಕ್ಕೆ ಒಳಗಾಗುತ್ತಿದೆ. ಇತ್ತೀಚೆಗೆ ಲಡಾಖ್ನ ಲೆಹ್ ಪ್ರದೇಶವನ್ನು ಚೀನಾಕ್ಕೆ ಸೇರಿರುವಂತೆ ತೋರಿಸಿದ್ದ ಟ್ವಿಟ್ಟರ್ಗೆ ಭಾರತ ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು. ಅದು ಸಾಲದೆಂಬಂತೆ ಇದೀಗ ವಿವಾದಾತ್ಮಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಸ್ವತಂತ್ರ ದೇಶವೆಂಬಂತೆ ನಕ್ಷೆಯಲ್ಲಿ ತೋರಿಸಿ ಟ್ವಿಟ್ಟರ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಇದು ಟ್ವಿಟ್ಟರ್ನ ಉದ್ಯೋಗ ವಿಭಾಗದಲ್ಲಿ ಈ ನಕ್ಷೆ ಇದೆ.
ಭಾರತದ ಅಧಿಕೃತ ನಕ್ಷೆಯನ್ನು ತಪ್ಪಾಗಿ ತೋರಿಸುವುದು ಕೇಂದ್ರದ ಹೊಸ ಐಟಿ ನಿಯಮಗಳಿಗೆ ವಿರುದ್ಧವಾಗಿದೆ. ಈ ವಿಚಾರದ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯವು ಅವಲೋಕಿಸಿ ಮಾಹಿತಿ ಕಲೆಹಾಕಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Twitter| ಮುಂದುವರೆದ ಕೇಂದ್ರ ಸರ್ಕಾರ-ಟ್ವಿಟರ್ ನಡುವಿನ ಜಟಾಪಟಿ; ಭಾರತೀಯ ಅಧಿಕಾರಿ ರಾಜೀನಾಮೆ
ಕೇಂದ್ರದ ಹೊಸ ಐಟಿ ನಿಯಮಗಳನ್ನ ಟ್ವಿಟ್ಟರ್ ಸಂಸ್ಥೆ ಪದೇ ಪದೇ ಉಲ್ಲಂಘನೆ ಮಾಡುತ್ತಿದೆ ಎಂದು ಸರ್ಕಾರದ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ. ಇದು ಮುಂದೆ ಟ್ವಿಟ್ಟರ್ ತಾಣದ ನಿಷೇಧಕ್ಕೆ ಕಾರಣವಾದರೂ ಅಚ್ಚರಿ ಇಲ್ಲ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ