• Home
  • »
  • News
  • »
  • national-international
  • »
  • Twitter: ಉದ್ಯೋಗಿಗಳನ್ನು ವಜಾಗೊಳಿಸುವ ತೀರ್ಮಾನ ಕೈಗೊಂಡ ಎಲೋನ್ ಮಸ್ಕ್!

Twitter: ಉದ್ಯೋಗಿಗಳನ್ನು ವಜಾಗೊಳಿಸುವ ತೀರ್ಮಾನ ಕೈಗೊಂಡ ಎಲೋನ್ ಮಸ್ಕ್!

ಟ್ವಿಟರ್ ಖಾತೆ ಬ್ಯಾನ್

ಟ್ವಿಟರ್ ಖಾತೆ ಬ್ಯಾನ್

ಎಲ್ಲಾ ಟ್ವಿಟರ್ ಉದ್ಯೋಗಿಗಳಿಗೆ ಇಮೇಲ್‌ನಲ್ಲಿರುವ ಸಂದೇಶವು ಮನೆಗಳಿಗೆ ಹಿಂತಿರುಗುವಂತೆ ತಿಳಿಸಿದ್ದು ಅವರ ಇಮೇಲ್ ಬಾಕ್ಸ್‌ಗೆ ಬರುವ ಮೇಲ್‌ಗಾಗಿ ಕಾಯುವಂತೆ ತಿಳಿಸಿದೆ. ಟ್ವಿಟರ್‌ನಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಅವರ ಕೆಲಸದ ಸ್ಥಿತಿಯನ್ನು ತಿಳಿಸುವ ಮೇಲ್ ಅನ್ನು ಭಾರತೀಯ ಕಾಲಮಾನ ರಾತ್ರಿ 9:30 ಗೆ ಕಳುಹಿಸಲಾಗುತ್ತದೆ

ಮುಂದೆ ಓದಿ ...
  • Share this:

    ಭಾರತದಲ್ಲಿರುವ ಟ್ವಿಟರ್ ಕಚೇರಿಯು ಇದೀಗ ಭಯ ಹಾಗೂ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು ಎಲೋನ್ ಮಸ್ಕ್ ಸಂಸ್ಥೆಯಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಈ ನಿರ್ಧಾರ ಕೈಗೊಂಡ ಬೆನ್ನಲ್ಲೇ ಉದ್ಯೋಗಿಗಳು ದುಃಖಿತರಾಗಿದ್ದಾರೆ ಹಾಗೂ ಅವ್ಯವಸ್ಥೆಯಿಂದ ಕಂಗೆಟ್ಟಿದ್ದಾರೆ. ಸಾಮಾಜಿಕ ಮಾಧ್ಯಮ ಸಂಸ್ಥೆಯು ದಿನದ ಅಂತ್ಯದಲ್ಲಿ ಸಾಕಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಖಚಿತಪಡಿಸಿದ್ದು ವಿಶ್ವದಾದ್ಯಂತವಿರುವ ಟ್ವಿಟರ್‌ ಉದ್ಯೋಗಿಗಳಿಗೆ ಈ ಕುರಿತು ಇಮೇಲ್ ಕಳುಹಿಸಲಾಗಿದೆ.


    ಎಲ್ಲಾ ಟ್ವಿಟರ್ ಉದ್ಯೋಗಿಗಳಿಗೆ ಇಮೇಲ್‌ನಲ್ಲಿರುವ ಸಂದೇಶವು ಮನೆಗಳಿಗೆ ಹಿಂತಿರುಗುವಂತೆ ತಿಳಿಸಿದ್ದು ಅವರ ಇಮೇಲ್ ಬಾಕ್ಸ್‌ಗೆ ಬರುವ ಮೇಲ್‌ಗಾಗಿ ಕಾಯುವಂತೆ ತಿಳಿಸಿದೆ. ಟ್ವಿಟರ್‌ನಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಅವರ ಕೆಲಸದ ಸ್ಥಿತಿಯನ್ನು ತಿಳಿಸುವ ಮೇಲ್ ಅನ್ನು ಭಾರತೀಯ ಕಾಲಮಾನ ರಾತ್ರಿ 9:30 ಗೆ ಕಳುಹಿಸಲಾಗುತ್ತದೆ ಎಂಬುದು ತಿಳಿದುಬಂದಿದೆ.


    ಇದನ್ನೂ ಓದಿ: Twitter Story: ಎಲಾನ್ ಮಸ್ಕ್ ರವರ ಮಾಜಿ ಗೆಳತಿಯ ಟ್ವಿಟರ್ ಖಾತೆಯು ಕಣ್ಮರೆಯಂತೆ, ಅಸಲಿ ಕಥೆಯೇನು!


    ಯಾವುದೇ ಮಾಹಿತಿಯಿಲ್ಲದೆ ಮೇಲ್ ಕಳುಹಿಸಿರುವ ಟ್ವಿಟರ್


    ಈ ಇಮೇಲ್‌ಗೆ ಪ್ರತಿಯಾಗಿ ಭಾರತದಲ್ಲಿರುವ ಟ್ವಿಟರ್ ಸಂಸ್ಥೆಯ ಉದ್ಯೋಗಿಗಳು ಇಂದು ಬೆಳಗ್ಗೆ (ಶುಕ್ರವಾರ) ತಮ್ಮ ಅಧಿಕೃತ ಇಮೇಲ್ ಐಡಿಗಳಿಂದ ಲಾಗ್ ಔಟ್ ಆಗಿರುವುದು ತಿಳಿದುಬಂದಿದೆ. ಇನ್ನು ಕೆಲವರು ಲಾಗ್ ಔಟ್ ಆಗುತ್ತಿದ್ದಾರೆ ಎಂಬ ಮಾಹಿತಿಯೂ ದೊರಕಿದೆ.


    ಕಚೇರಿಯಲ್ಲಿ ಮಂಕಿನ ವಾತಾವರಣ


    ಉದ್ಯೋಗಿ ವಜಾದ ಈ ಘೋಷಣೆಯು ಯಾವುದೇ ಹಿನ್ನಲೆಯಿಲ್ಲದೇ ಬಂದಿರುವುದಾಗಿ ಉದ್ಯೋಗಿಗಳು ತಿಳಿಸಿದ್ದು ಇದಕ್ಕೆ ತಾವು ಸಿದ್ಧರಿರರಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಯಾವುದೇ ಸೂಚನೆಯನ್ನು ನೀಡದೆಯೇ ತಮ್ಮನ್ನು ವಜಾಗೊಳಿಸಲಾಗುತ್ತಿದೆ ಎಂಬುವುದು ಉದ್ಯೋಗಿಗಳ ಅಳಲಾಗಿದೆ. ವಜಾಗೊಳಿಸುವ ಕುರಿತು ಯಾವುದೇ ಅಧಿಕೃತ ಮಾಹಿತಿಯಾಗಲಿ ಸೂಚನೆಯಾಗಲಿ ದೊರೆತಿಲ್ಲ ಎಂಬುದು ಉದ್ಯೋಗಿಗಳ ಅಳಲಾಗಿದೆ. ಒಂದು ರೀತಿಯ ಮಂಕಿನ ವಾತಾವರಣದ ಕಚೇರಿಯಲ್ಲಿ ಸೃಷ್ಟಿಯಾಗಿತ್ತು ಎಂಬುದು ಮಾಹಿತಿಗಳಿಂದ ತಿಳಿದುಬಂದಿದೆ.


    ಇಮೇಲ್ ಕೊನೆಯಲ್ಲಿ ಎಲೋನ್ ಮಸ್ಕ್ ಹೆಸರಿಲ್ಲ


    ಈ ವಜಾಗೊಳಿಸುವಿಕೆಯಿಂದ ನಿಮ್ಮ ಮೇಲೆ ಪರಿಣಾಮ ಉಂಟಾಗಿರಲಿ ಅಥವಾ ಇಲ್ಲದೇ ಇರಲಿ ಇದು ಸವಾಲಿನ ಅನುಭವವಾಗಿದೆ ಎಂಬುದಾಗಿ ನಾವು ಅಂಗೀಕರಿಸಿದ್ದೇವೆ ಎಂದು ಟ್ವಿಟರ್ ಉದ್ಯೋಗಿಗಳಿಗೆ ಕಳುಹಿಸಿರುವ ಮೆಮೊ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ, ಪತ್ರಿಕಾ ಮಾಧ್ಯಮದಲ್ಲಿ ಅಥವಾ ಬೇರೆಡೆ ಗೌಪ್ಯವಾದ ಕಂಪನಿ ಮಾಹಿತಿಯನ್ನು ಚರ್ಚಿಸುವುದನ್ನು ನಿಷೇಧಿಸುವ ಟ್ವಿಟರ್ ನೀತಿಗಳಿಗೆ ಬದ್ಧವಾಗಿರುವುದನ್ನು ಮುಂದುವರಿಸಿದ್ದಕ್ಕೆ ಧನ್ಯವಾದಗಳು ಎಂದು ಮೆಮೊ ತಿಳಿಸಿದೆ.


    ಮಸ್ಕ್ ಕ್ರೂರವಾದ ಸ್ವಭಾವ ಅನಾವರಣ


    ಇಮೇಲ್ ತಂಡ ಎಂಬುದಾಗಿ ಸಂಬೋಧಿಸಿದ್ದು ಪತ್ರದ ಒಕ್ಕಣೆಯ ಕೊನೆಯಲ್ಲಿ ಟ್ವಿಟರ್ ಎಂಬುದಾಗಿ ಸಹಿ ಹಾಕಲಾಗಿದೆ. ಆದರೆ ವಜಾಕ್ಕೆ ಕಾರಣವಾಗಿರುವ ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ತಮ್ಮ ಹೆಸರನ್ನು ಇಲ್ಲಿ ನಮೂದಿಸಿಲ್ಲ ಎಂಬ ವಿಚಾರ ದುಃಖಕರವಾಗಿಸಿದೆ. ಜೊತೆಗೆ ಅತ್ಯಂತ ಕ್ರೂರವಾದ ಸ್ವಭಾವವನ್ನು ಪ್ರದರ್ಶಿಸಿದೆ.


    ಇದನ್ನೂ ಓದಿ:WhatsApp Communities: ವಾಟ್ಸಪ್​ನ ಈ ಹೊಸಾ ಫೀಚರ್​ನಲ್ಲಿ ಏನೇನಿದೆ? ಬಳಸೋದು ಹೇಗೆ?


    ಉದ್ಯೋಗಿ ವಜಾಕ್ಕೆ ನೇರವಾಗಿ ಕಾರಣರಾಗಿರುವ ಎಲೋನ್ ಮಸ್ಕ್ ಇಮೇಲ್‌ಗೆ ತನ್ನ ಹೆಸರನ್ನು ಲಗತ್ತಿಸಲು ಬಯಸುವುದಿಲ್ಲವೆಂದೇ ಹೇಳಿದ್ದಾರೆ. ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಟ್ವಿಟರ್ ಯೋಜನೆಗಳನ್ನು ಹಮ್ಮಿಕೊಂಡಿದ್ದು ಮಸ್ಕ್ ನಿಕಟ ಆಪ್ತರ ಮೂಲಕ ಇದನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂಬುದು ತಿಳಿದು ಬಂದಿದೆ. ಟ್ವಿಟರ್ ಅನ್ನು ಎಲೋನ್ ಮಸ್ಕ್ $44 ಬಿಲಿಯನ್ ಒಪ್ಪಂದದಲ್ಲಿ ಖರೀದಿಸಿದ್ದು ಒಂದೊಂದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು.


    ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ?


    ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂಬ ನಿಖರ ಮಾಹಿತಿಯನ್ನು ಸಂಸ್ಥೆ ನೀಡಿಲ್ಲ. ಹಿಂದಿನ ವರದಿಗಳ ಪ್ರಕಾರ ಟ್ವಿಟರ್‌ನ ಒಟ್ಟು 7,500 ಉದ್ಯೋಗಿಗಳಲ್ಲಿ 50% ದಷ್ಟು ಉದ್ಯೋಗಿಗಳು ವಜಾಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದು ಟ್ವಿಟರ್‌ನ ಭಾರತೀಯ ಉದ್ಯೋಗಿಗಳ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬ ನಿಖರ ಮಾಹಿತಿ ಇಲ್ಲ.


    ಎಲೋನ್ ಮಸ್ಕ್ ಅಧಿಕೃತವಾಗಿ ವೇದಿಕೆಯ ಉಸ್ತುವಾರಿ ವಹಿಸಿಕೊಂಡ ಒಂದು ವಾರದ ನಂತರ ವಜಾಗೊಳಿಸುವಿಕೆ ಆದೇಶಗಳು ಕಾರ್ಯರೂಪಕ್ಕೆ ಬಂದಿವೆ. ಕಂಪನಿಯಲ್ಲಿ ಹಲವಾರು ಬದಲಾವಣೆಗಳನ್ನು ಮಸ್ಕ್ ನಡೆಸಿದ್ದಾರೆ. ವಜಾಗೊಳಿಸಿದ ಉದ್ಯೋಗಿಗಳಿಗೆ ವಿಘಟನೆ ಮೊತ್ತವನ್ನು ಪಾವತಿಸಲಾಗುವುದಾದರೂ ಮಸ್ಕ್ ತಮ್ಮ ಹೂಡಿಕೆ ಮಾಡದ ಸ್ಟಾಕ್‌ಗಳ ನಿಯೋಜನೆಯನ್ನು ತಡೆಯುವ ವಿಧಾನಗಳನ್ನು ಎದುರು ನೋಡುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.

    Published by:Precilla Olivia Dias
    First published: