ಜೈಪುರ (ಆಗಸ್ಟ್ 11): ರಾಜಸ್ಥಾನದಲ್ಲಿ ಕಳೆದ ಕೆಲ ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾ ಅಂತ್ಯಕಂಡಿತ್ತು. ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ನಂತರದಲ್ಲಿ ಬಂಡಾಯ ಶಾಸಕ ಸಚಿನ್ ಪೈಲಟ್ ಕಾಂಗ್ರೆಸ್ನಲ್ಲೇ ಉಳಿದುಕೊಂಡು, ಕಾಂಗ್ರೆಸ್ಗಾಗಿಯೇ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಇದಾದ ಬೆನ್ನಲ್ಲೇ ಅವರು ಟ್ರೋಲ್ ಆಗಿದ್ದಾರೆ.
ಬಂಡಾಯ ಏಳುವ ಮೂಲಕ ಸರ್ಕಾರವನ್ನೇ ಬೀಳಿಸಲು ಸಚಿನ್ ಪೈಲಟ್ ಮುಂದಾಗಿದ್ದರು. ಅವರು ಬೇರೆ ಪಕ್ಷ ಕಟ್ಟಲಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂಬಿತ್ಯಾದಿ ವಿಚಾರಗಳು ಚರ್ಚೆಗೆ ಬಂದಿದ್ದವು. ಸೋಮವಾರ ದಿಢೀರ್ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಂಧಾನ ಮಾತುಕತೆ ಯಶಸ್ವಿಯಾಗಿತ್ತು.
ಸಭೆಯ ಬಗ್ಗೆ ಎಐಸಿಸಿ ಮುಖ್ಯ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರಾವ್ ಮಾಹಿತಿ ನೀಡಿದ್ದಾರೆ. ಸಚಿನ್ ಪೈಲಟ್ ಪಕ್ಷ ತೊರೆಯುವುದಿಲ್ಲ. ಅವರು ಪಕ್ಷಕ್ಕಾಗಿಯೇ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ, ಸಚಿನ್ ಹಾಗೂ ಅತೃಪ್ತ ಶಾಸಕರ ಬೇಡಿಕೆ ಆಲಿಸಲು ಮೂರು ಸದಸ್ಯರ ಸಮಿತಿ ರಚನೆ ಮಾಡಲಾಗುತ್ತಿದೆ, ಎಂದು ತಿಳಿಸಿದ್ದರು.
ಸಚಿನ್ ಪೈಲಟ್ ಬಂಡಾಯ ಎದ್ದ ನಂತರ ಅವರಿಗೆ ನೀಡಿದ್ದ ಉಪಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಳ್ಳಲಾಗಿತ್ತು. ಈ ಬಗ್ಗೆ ಸಚಿನ್ ಪೈಲಟ್ ಮಾತನಾಡಿದ್ದು, “ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಅವರು ನನಗೆ ನೀಡಿದ ಆಶ್ವಾಸನೆಗಳು ತೃಪ್ತಿ ನೀಡಿವೆ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಉಪಮುಖ್ಯಮಂತ್ರಿ ಸ್ಥಾನವನ್ನು ಅವರು ನನಗೆ ಮರಳಿ ನೀಡುತ್ತಿದ್ದಾರೆ,” ಎಂದು ಹೇಳಿದ್ದಾರೆ. ಈ ಮೂಲಕ ಬಂಡಾಯ ಶಮನವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದರು. ಇದಾದ ಬೆನ್ನಲ್ಲೇ ಸಚಿನ್ ಪೈಲಟ್ ಟ್ರೋಲ್ ಆಗಿದ್ದಾರೆ.
Sachin Pilot leaving Congress pic.twitter.com/0WMDoyBlXB
— Sagar (@sagarcasm) August 11, 2020
So #SachinPilot pulled a #AjitPawar 😂
I bet it had something to do with #SharadPawar recent visit to Delhi
— Ibu Hatela™ (@Esmilebhai) August 11, 2020
Sachin Pilot has disappointed so many news anchors today. Bad boy.
— Ajay Kamath (@ajay43) August 10, 2020
Me after knowing the drama ended without any climax of court scene..!! #SachinPilot pic.twitter.com/yqpNL7w7iZ
— Maaru Chokro (@vampy_vc) August 11, 2020
#Sachin_pilot comeback in Congress #SachinPilot
Ashok Gehlot be like: pic.twitter.com/ERHI8e8aSn
— Shubham Tripathi (@InoffensiveLad) August 11, 2020
Sachin pilot and Sachin pilot and
Ashok gehlot in Ashok gehlot in
Front of media Reality#SachinPilot pic.twitter.com/Px9QxUriWQ
— Abhishek Maheshwari (@be_mewadi) August 11, 2020
#Sachin_pilot comeback in congress be like pic.twitter.com/PoGuPyJlPE
— Shubham Tripathi (@InoffensiveLad) August 10, 2020
#Sachin_pilot returns back 🏡 to Gehlot. pic.twitter.com/aLaedPyLiL
— Rajesh Yadav (@irajeshyadav) August 10, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ