ಕೊರೋನಾ ಕುರಿತು ತಪ್ಪು ಮಾಹಿತಿ; ಟ್ರಂಪ್ ಹಂಚಿಕೊಂಡ ವಿಡಿಯೋ ನಿರ್ಬಂಧಿಸಿದ ಟ್ವಿಟರ್‌-ಫೇಸ್‌ಬುಕ್

ಟ್ರಂಪ್ ಈ ವೀಡಿಯೊವನ್ನು ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ನ ತಮ್ಮ ಖಾತೆಯಿಂದ ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋದಲ್ಲಿ ಟ್ರಂಪ್‌ ಹೇಳಿರುವುದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಆರೋಪಿಸಿರುವ ಟ್ವಿಟರ್‌ ಮತ್ತು ಫೇಸ್‌ಬುಕ್‌ ಎರಡೂ ಕಂಪೆನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿವೆ. ಅಲ್ಲದೆ, ಖಾತೆಯನ್ನೂ ಸ್ಥಗಿತಗೊಳಿಸಿವೆ.

MAshok Kumar | news18-kannada
Updated:August 6, 2020, 4:42 PM IST
ಕೊರೋನಾ ಕುರಿತು ತಪ್ಪು ಮಾಹಿತಿ; ಟ್ರಂಪ್ ಹಂಚಿಕೊಂಡ ವಿಡಿಯೋ ನಿರ್ಬಂಧಿಸಿದ ಟ್ವಿಟರ್‌-ಫೇಸ್‌ಬುಕ್
ಡೊನಾಲ್ಡ್‌ ಟ್ರಂಪ್‌.
  • Share this:
ಮಾರಣಾಂತಿಕ ಕೊರೋನಾ ವೈರಸ್ ಕುರಿತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೋ ತಪ್ಪು ಮಾಹಿತಿಗಳಿಂದ ಕೂಡಿದೆ ಮತ್ತು ತಮ್ಮ ನೀತಿಗಳನ್ನು ಉಲ್ಲಂಘಿಸಿದೆ ಎಂಬ ಕಾರಣವನ್ನು ಮುಂದಿಟ್ಟು ಟ್ವಿಟರ್ ಇಂಕ್ ಮತ್ತು ಫೇಸ್ಬುಕ್ ಇಂಕ್ ಟ್ರಂಪ್ ಹಂಚಿಕೊಂಡಿದ್ದ ವಿಡಿಯೋವನ್ನು ನಿರ್ಬಂಧಿಸಿವೆ. ಅಲ್ಲದೆ, ಟ್ರಂಪ್ ಚುನಾವಣಾ ಪ್ರಚಾರದ ಟ್ವಿಟರ್ ಖಾತೆಯಿಂದ ಹೊಸ ಟ್ವೀಟ್‌ಗಳನ್ನು ಪೋಸ್ಟ್ ಮಾಡುವುದಕ್ಕೂ ನಿಷೇಧ ವಿಧಿಸಲಾಗಿದೆ.

ಟ್ರಂಪ್ ಬುಧವಾರ ಫಾಕ್ಸ್ ನ್ಯೂಸ್‌ನೊಂದಿಗೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ “ಅಮೆರಿಕದಲ್ಲಿ ಶಾಲೆಗಳನ್ನು ಏಕೆ ತೆರೆಯಬೇಕು?” ಎಂಬ ಪ್ರಶ್ನೆಗೆ ಉತ್ತರಿಸಿದ್ದ ಟ್ರಂಪ್, “ವಾಸ್ತವದಲ್ಲಿ ಮಕ್ಕಳು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಹೀಗಾಗಿ ಅವರಿಗೆ ಸೋಂಕು ತಗಲುವ ಸಾಧ್ಯತೆ ಕಡಿಮೆ” ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಟ್ರಂಪ್ ಈ ವೀಡಿಯೊವನ್ನು ಟ್ವಿಟ್ಟರ್‌ ಮತ್ತು ಫೇಸ್‌ಬುಕ್‌ನ ತಮ್ಮ ಖಾತೆಯಿಂದ ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋದಲ್ಲಿ ಟ್ರಂಪ್‌ ಹೇಳಿರುವುದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಆರೋಪಿಸಿರುವ ಟ್ವಿಟರ್‌ ಮತ್ತು ಫೇಸ್‌ಬುಕ್‌ ಎರಡೂ ಕಂಪೆನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿವೆ. ಅಲ್ಲದೆ, ಖಾತೆಯನ್ನೂ ಸ್ಥಗಿತಗೊಳಿಸಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ಟ್ವಿಟರ್‌ ಮತ್ತು ಫೇಸ್‌ಬುಕ್, “ಜನರಿಗೆ ಮಾರಣಾಂತಿಕವಾಗಿರುವ ಕೊರೋನಾ ವೈರಸ್‌ ಕುರಿತು ತಪ್ಪು ದಾರಿಗೆ ಎಳೆಯುವ ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ತಮ್ಮ ಕಂಪೆನಿಯ ನೀತಿಗಳು ವಿರೋಧಿಸುತ್ತವೆ” ಎಂದು ತಿಳಿಸಿವೆ.

ಇದನ್ನೂ ಓದಿ : ಐದು ಬದಲು ಒಂದೇ ವರ್ಷಕ್ಕೆ ಗ್ರಾಚ್ಯುಟಿ ಹಣ ಪಡೆಯುವ ಅವಕಾಶ ನೀಡಿ: ಸಂಸದೀಯ ಸಮಿತಿ ಶಿಫಾರಸು

ಅಮೆರಿಕ ಅಧ್ಯಕ್ಷರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಟ್ವಿಟರ್ ಹಾಗೂ ಫೇಸ್‌ಬುಕ್ ಯಾವುದೇ ಸೂಕ್ತ ಕ್ರಮಗಳನ್ನು ಜರುಗಿಸುತ್ತಿಲ್ಲ ಎಂದು ಕಳೆದ ಹಲವು ವರ್ಷಗಳಿಂದ ಟೀಕಿಸಲಾಗುತ್ತಿತ್ತು. ಹೀಗಾಗಿ ಟೀಕೆಗಳ ವಿರುದ್ಧ ಎಚ್ಚೆತ್ತಿರುವ ಟ್ವಿಟರ್ ಹಾಗೂ ಫೇಸ್‌ಬುಕ್ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಅಕ್ರಮಣಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್‌ನ ಪ್ರಕಾರ, “ಮಕ್ಕಳು ಮತ್ತು ಹದಿಹರೆಯದವರು ಯಾವುದೇ ವಯಸ್ಸಿನವರಂತೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಮತ್ತು ರೋಗವನ್ನು ಹರಡಬಹುದು. ಕೆಲವು ಮಕ್ಕಳು ವೈರಸ್‌ಗೆ ತುತ್ತಾಗಿದ್ದಾರೆ. ಹಾಗಾಗಿ ಅವರಿಗೂ ವಯಸ್ಕರಂತೆಯೇ ಸಾಮಾಜಿಕ ದೂರ ಮಾರ್ಗಸೂಚಿಗಳನ್ನು ಅನುಸರಿಸಲು ಶಿಫಾರಸು ಮಾಡಲಾಗಿದೆ” ಎಂದು ತಿಳಿಸಿದೆ.
Published by: MAshok Kumar
First published: August 6, 2020, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading