• Home
  • »
  • News
  • »
  • national-international
  • »
  • Elon Musk: ಸ್ವಚ್ಛತಾ ಸಿಬ್ಬಂದಿ ವಜಾಗೊಳಿಸಿದ ಎಲಾನ್ ಮಸ್ಕ್; ಕಚೇರಿಗೆ ತಮ್ಮ ದುಡ್ಡಲ್ಲೇ ಟಾಯ್ಲೆಟ್ ಟಿಶ್ಯೂ ತರುತ್ತಿರುವ ಉದ್ಯೋಗಿಗಳು!

Elon Musk: ಸ್ವಚ್ಛತಾ ಸಿಬ್ಬಂದಿ ವಜಾಗೊಳಿಸಿದ ಎಲಾನ್ ಮಸ್ಕ್; ಕಚೇರಿಗೆ ತಮ್ಮ ದುಡ್ಡಲ್ಲೇ ಟಾಯ್ಲೆಟ್ ಟಿಶ್ಯೂ ತರುತ್ತಿರುವ ಉದ್ಯೋಗಿಗಳು!

ಎಲಾನ್ ಮಸ್ಕ್

ಎಲಾನ್ ಮಸ್ಕ್

ನಿರ್ವಹಣಾ ಕೆಲಸಗಾರರು ಹೆಚ್ಚಿನ ಪಾವತಿಗೆ ಆಗ್ರಹಿಸಿ ಧರಣಿ ಮಾಡಿದ್ದರಿಂದ ಸಂಸ್ಥೆಯು ಅವರನ್ನು ಕೈಬಿಟ್ಟಿದೆ. ಸ್ವಚ್ಛತಾ ಕೆಲಸಗಾರರು ಸಂಸ್ಥೆಯಲ್ಲಿ ಇಲ್ಲದೇ ಇರುವುದರಿಂದ ಮತ್ತು ಸ್ವಚ್ಛತೆಗಳನ್ನು ನಿರ್ವಹಿಸಲು ಸಿಬ್ಬಂದಿ ಕೊರತೆ ಇರುವುದರಿಂದ ಕೆಲವು ಸಿಬ್ಬಂದಿ ತಮ್ಮದೇ ಟಾಯ್ಲೆಟ್ ಟಿಶ್ಯೂಗಳನ್ನು ಕಚೇರಿಗೆ ತರುತ್ತಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ ...
  • Share this:

ಶತಕೋಟ್ಯಾಧಿಪತಿ ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಸ್ವಾಧೀನಪಡಿಸಿಕೊಂಡ ನಂತರ ಒಂದಲ್ಲೊಂದು ಸುದ್ದಿಯಿಂದ ಮನೆಮಾತಾಗಿದ್ದಾರೆ. ವೆಚ್ಚಕಡಿತ ನೀತಿಯನ್ನು ಈಗ ಮಸ್ಕ್ ತಮ್ಮ ಕಚೇರಿಯಲ್ಲಿ (Office) ಅಳವಡಿಸಿದ್ದು, ಇದೀಗ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಸಂಸ್ಥೆಯು ಸ್ವಚ್ಛತಾ ನಿರ್ವಹಣಾ ಸಿಬ್ಬಂದಿಯನ್ನು ಉದ್ಯೋಗದಿಂದ (Employees) ತೆಗೆದುಹಾಕಿದ್ದು ಈ ಹಿನ್ನೆಲೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ (San Francisco) ಉಳಿದ ಉದ್ಯೋಗಿಗಳು ತಮ್ಮದೇ ವೆಚ್ಚದಲ್ಲಿ ಟಾಯ್ಲೆಟ್ ಪೇಪರ್‌ಗಳನ್ನು ತರುವ ಪರಿಸ್ಥಿತಿ ಎದುರಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.


ಸ್ವಚ್ಛತಾ ಕೆಲಸಗಾರರು, ಭದ್ರತಾ ಸಿಬ್ಬಂದಿಗಳನ್ನು ವಜಾಗೊಳಿಸಿರುವ ಸಂಸ್ಥೆ


ನಿರ್ವಹಣಾ ಕೆಲಸಗಾರರು ಹೆಚ್ಚಿನ ಪಾವತಿಗೆ ಆಗ್ರಹಿಸಿ ಧರಣಿ ಮಾಡಿದ್ದರಿಂದ ಸಂಸ್ಥೆಯು ಅವರನ್ನು ಕೈಬಿಟ್ಟಿದೆ. ಸಂಸ್ಥೆಯಲ್ಲಿ ನಿರ್ವಹಣಾಕಾರರು, ಸ್ವಚ್ಛತಾ ಕೆಲಸಗಾರರು ಇಲ್ಲದೇ ಇರುವುದರಿಂದ ಕಚೇರಿಯು ಕೊಳಕಾಗಿದೆ ಹಾಗೂ ಅಸ್ತವ್ಯಸ್ತಗೊಂಡಿದೆ ಒಂದು ರೀತಿಯಲ್ಲಿ ಟ್ವಿಟರ್ ಕಚೇರಿಯೇ ಕೊಳಕಾಗಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.


ಕಚೇರಿಗೆ ಬರುವಾಗ ಟಾಯ್ಲೆಟ್ ಪೇಪರ್ ತರುತ್ತಿರುವ ಟ್ವಿಟರ್ ಉದ್ಯೋಗಿಗಳು


ಸ್ವಚ್ಛತಾ ಕೆಲಸಗಾರರು ಸಂಸ್ಥೆಯಲ್ಲಿ ಇಲ್ಲದೇ ಇರುವುದರಿಂದ ಮತ್ತು ಸ್ವಚ್ಛತೆಗಳನ್ನು ನಿರ್ವಹಿಸಲು ಸಿಬ್ಬಂದಿ ಕೊರತೆ ಇರುವುದರಿಂದ ಕೆಲವು ಸಿಬ್ಬಂದಿ ತಮ್ಮದೇ ಟಾಯ್ಲೆಟ್ ಟಿಶ್ಯೂಗಳನ್ನು ಕಚೇರಿಗೆ ತರುತ್ತಿದ್ದಾರೆ ಎನ್ನಲಾಗಿದೆ.


twitter owner elon Musk tweets photo of his bedside table stg mrq
ಎಲಾನ್ ಮಸ್ಕ್​


ವೆಚ್ಚಕಡಿತದ ಹಿನ್ನೆಲೆಯಲ್ಲಿ ಕ್ರಮಕೈಗೊಂಡಿರುವ ಮಸ್ಕ್


ಸಂಸ್ಥೆಯು ತೀವ್ರ ನಷ್ಟ ಅನುಭವಿಸುತ್ತಿದ್ದು, ಈ ಹಿನ್ನೆಲೆ ಎಲಾನ್ ಮಸ್ಕ್ ಒಂದೊಂದೇ ಹಂತಗಳನ್ನು ಜಾರಿಗೆ ತರುತ್ತಿದ್ದಾರೆ. ದರ ಕಡಿತದ ಹೆಸರಿನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಹೆಚ್ಚುವರಿ ಕೆಲಸ ಮಾಡುವಂತೆ ಉದ್ಯೋಗಿಗಳನ್ನು ನಿರ್ಬಂಧಿಸಿದ್ದು, ಕಚೇರಿಯಲ್ಲೇ ನಿದ್ರಿಸಲು ಉದ್ಯೋಗಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಹೀಗೆ ಟ್ವಿಟರ್‌ನ ಸ್ವಾಧೀನದ ನಂತರ ಎಲೋನ್ ಹಲವಾರು ಟೀಕೆಗಳಿಗೆ ಗುರಿಯಾಗಿದ್ದಾರೆ. ಜೊತೆಗೆ ಟ್ವಿಟರ್‌ನಿಂದ ವಜಾಗೊಂಡಿರುವ ಉದ್ಯೋಗಿಗಳು ತಮಗೆ ಪರಿಹಾರವನ್ನು ನೀಡಿಲ್ಲವೆಂದು ಎಲೋನ್ ಮೇಲೆ ಕೇಸ್ ಕೂಡ ದಾಖಲಿಸಿದ್ದಾರೆ.


ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ


ಇದೀಗ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಟ್ವಿಟರ್‌ನ ಡೇಟಾ ಕೇಂದ್ರಗಳಲ್ಲಿ ಒಂದನ್ನು ಮುಚ್ಚುವ ನಿರ್ಧಾರವನ್ನು ಎಲೋನ್ ಮಸ್ಕ್ ತಾಳಿದ್ದು, ದರ ಕಡಿತದ ಕ್ರಮವಾಗಿ ಉಲ್ಲೇಖಗೊಂಡಿದೆ. ಹೀಗೆ ಮಾಡುವುದರಿಂದ ಟ್ವಿಟರ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮವುಂಟಾಗುತ್ತದೆ ಎಂಬುದಾಗಿ ಉದ್ಯೋಗಿಗಳು ಕಳವಳ ವ್ಯಕ್ತಪಡಿಸಿದ್ದಾರೆ.


Twitter is down everywhere Elon Musk is the reason for this
ಟ್ವಿಟರ್


ಡೇಟಾ ಸೆಂಟರ್ ಮುಚ್ಚುವ ನಿರ್ಧಾರದಲ್ಲಿರುವ ಮಸ್ಕ್


ಈ ಡೇಟಾ ಸೆಂಟರ್ ಸಾಮಾಜಿಕ ತಾಣದ ನೆಟ್‌ವರ್ಕ್ ಅನ್ನು ಚಾಲನೆಯಲ್ಲಿರಿಸಿರುವ ಮೂರು ನಿರ್ಣಾಯಕ ಸರ್ವರ್ ಸೌಲಭ್ಯಗಳಲ್ಲಿ ಒಂದಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ ಸರ್ವರ್‌ಗಳನ್ನು ಕಳೆದುಕೊಳ್ಳುವುದರಿಂದ ಹಲವಾರು ಸಮಸ್ಯೆಗಳನ್ನು ಸಂಸ್ಥೆಗೆ ಉಂಟಾಗಬಹುದು ಎಂದು ತಿಳಿಸಿದೆ. ಆದರೆ ಇಲ್ಲಿ ಹಣ ಉಳಿಸುವುದು ಹೆಚ್ಚು ಮುಖ್ಯವಾಗಿದೆ ಎಂಬುದು ಮಸ್ಕ್ ಯೋಜನೆಯಾಗಿದೆ ಎಂದು ತಿಳಿದು ಬಂದಿದೆ.


ಸಂಸ್ಥೆಗಳನ್ನು ಮುಚ್ಚಿ ಬಾಡಿಗೆ ಹಣ ಉಳಿತಾಯ ಮಾಡುವ ನಿರ್ಧಾರ


ಸಂಸ್ಥೆಯು ಸಿಯಾಟಲ್ ಕಟ್ಟದಲ್ಲಿ ಬಾಡಿಗೆ ಪಾವತಿಸಿರುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವುದರಿಂದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದೆ. ಸುದ್ದಿ ಮಾಧ್ಯಮಗಳ ಪ್ರಕಾರ ಟ್ವಿಟರ್ ಸದ್ಯಕ್ಕೆ ನ್ಯೂಯಾರ್ಕ್ ನಗರ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾತ್ರ ಕಚೇರಿಗಳನ್ನು ಹೊಂದಿದೆ ಎಂದಾಗಿದೆ.


Twitter starts laying off staff in India
ಎಲಾನ್ ಮಸ್ಕ್​


ಟ್ವಿಟರ್ ತನ್ನ ಬೇ ಏರಿಯಾ ಮುಖ್ಯ ಕಚೇರಿ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯ ಬಾಡಿಗೆಯನ್ನು ಪಾವತಿಸುತ್ತಿಲ್ಲ ಎಂಬುದು ವರದಿಯಾಗಿದ್ದು ನ್ಯೂಯಾರ್ಕ್ ಕಚೇರಿಗಳಲ್ಲಿರುವ ಸ್ವಚ್ಛತಾ ಕೆಲಸಗಾರರು ಹಾಗೂ ಭದ್ರತಾ ಸಿಬ್ಬಂದಿ ವಜಾಗೊಳಿಸಲಾಗಿದೆ.


ಇದನ್ನೂ ಓದಿ:Elon Musk: ಅಮೆರಿಕಾ ಅಧ್ಯಕ್ಷರಾಗ್ತಾರಂತೆ ಎಲಾನ್ ಮಸ್ಕ್! ಭವಿಷ್ಯ ನುಡಿದ ರಷ್ಯಾದ ಮಾಜಿ ಅಧ್ಯಕ್ಷ


ಟ್ವಿಟರ್ ನಷ್ಟಕ್ಕೆ ಮಸ್ಕ್ ನಾಯಕತ್ವ ದೋಷವೇ ಕಾರಣ


ಎಲಾನ್ ಮಸ್ಕ್ ತಮ್ಮದೇ ಆದ ನಾಯಕತ್ವ ಶೈಲಿಯನ್ನು ಹೊಂದಿದ್ದು, ಪ್ರತಿಯೊಂದನ್ನೂ ತಮ್ಮದೇ ದೃಷ್ಟಿಕೋನದಿಂದ ನಿರ್ಣಯಿಸುತ್ತಾರೆ. ಸಾರ್ವಭೌಮ ರೀತಿಯ ಆಡಳಿತದಿಂದಲೇ ಮಸ್ಕ್ ಹೆಚ್ಚಿನ ಟ್ವಿಟರ್ ಉದ್ಯೋಗಿಗಳನ್ನು ಕಳೆದುಕೊಂಡಿದ್ದಾರೆ ಎಂಬುದು ಹಲವು ಆರ್ಥಿಕ ಚಿಂತಕರ ಅಭಿಪ್ರಾಯವಾಗಿದೆ. ಕಂಪನಿಯ ಕಾರ್ಯಾಚರಣೆಗಳ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಉದ್ಯೋಗಿಗಳನ್ನು ಗುರುತಿಸುವಂತೆ ತಮ್ಮ ಅಧಿಕಾರಿಗಳಿಗೆ ಎಲಾನ್ ಮಸ್ಕ್ ಸೂಚಿಸಿದ್ದಾರೆ. ಬಿಲಿಯನೇರ್ ಟ್ವಿಟರ್‌ನ ಬಜೆಟ್‌ನಿಂದ ಕಾರ್ಮಿಕೇತರ ವೆಚ್ಚದಲ್ಲಿ $500 ಮಿಲಿಯನ್ ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

Published by:Monika N
First published: