ರಾಷ್ಟ್ರಧ್ವಜಕ್ಕೆ ಅವಮಾನ: ಟ್ವಿಟರ್​ನಲ್ಲಿ Amazon Boycott​​ಗೆ ಮುಂದಾದ ನೆಟ್ಟಿಗರು

ಅಮೆಜಾನ್ ತಮ್ಮ ವಸ್ತುಗಳ ಮಾರಾಟಕ್ಕೆ ಈ ರೀತಿಯ ಅಗ್ಗದ ವಿಧಾನ ಬಸುತ್ತಿದ್ದು, ದೇಶಭಕ್ತಿಯ ಪ್ರದರ್ಶನದ ಮೂಲಕ ಭಾರತೀಯ ಗ್ರಾಹಕರು ಮೆಚ್ಚಿಸಲು ಪ್ರಯತ್ನಿಸುತ್ತಿದೆ. ಆದರೆ, ಇದು ದೇಶಭಕ್ತಿ ಪ್ರದರ್ಶನವಲ್ಲ ಎಂದು ಕಿಡಿಕಾರಿದ್ದಾರೆ.

ಅಮೆಜಾನ್​ನಲ್ಲಿ ಮಾರಾಟ ಮಾಡಲಾಗುತ್ತಿರುವ ಉತ್ಪನ್ನದ ಚಿತ್ರಣ

ಅಮೆಜಾನ್​ನಲ್ಲಿ ಮಾರಾಟ ಮಾಡಲಾಗುತ್ತಿರುವ ಉತ್ಪನ್ನದ ಚಿತ್ರಣ

 • Share this:
  ಇ- ಕಾಮರ್ಸ್​ ದೈತ್ಯ ಅಮೆಜಾನ್ (Amazon)​ ಭಾರತದ ರಾಷ್ಟ್ರಧ್ವಜಕ್ಕೆ (Indian National Flag) ಅಪಮಾನ ಮಾಡುವಂತಹ ಕೆಲವು ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಈಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಕೆನಡ ಮೂಲದ ಅಮೆಜಾನ್​ ಭಾರತದಲ್ಲಿ ಅತ್ಯಾಧಿಕ ವಹಿವಾಟು ಹೊಂದಿದೆ. ಹಬ್ಬ ಹರಿದಿನ ಸಂದರ್ಭದಲ್ಲಿ ಅನೇಕ ವಿಶೇಷ ಆಫರ್​ ನೀಡುವ ಅಮೆಜಾನ್​ ಈ ಬಾರಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅನೇಕರ ಭಾರತೀಯರ ಭಾವನೆಗೆ ಘಾಸಿ ಉಂಟು ಮಾಡಿದೆ. ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವ ರೀತಿಯ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ಅನೇಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

  ಗಣರಾಜ್ಯೋತ್ಸವಕ್ಕೆ ಇನ್ನೇನು ದಿನಗಣನೆ ಇರುವ ಹಿನ್ನಲೆ ಅಮೆಜಾನ್​ನಲ್ಲಿ ಅನೇಕ ವಸ್ತುಗಳ ಮಾರಾಟಕ್ಕೆ ಮುಂದಾಗಲಾಗಿದೆ. ಈ ವೇಳೆ ಚಾಕೋಲೆಟ್​ ಪೇಪರ್​, ಫೇಸ್​ ಮಾಸ್ಕ್​, ಮಗ್​, ಕಕೀ ಚೈನ್ ಮಕ್ಕಳ ಬಟ್ಟೆ ಹಾಗೂ ಶೂಗಳ ಮೇಲೆ ಭಾರತೀಯ ರಾಷ್ಟ್ರ ಧ್ವಜಗಳನ್ನು ಪ್ರಿಂಟ್​ ಮಾಡಲಾಗಿದೆ. ಈ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಯತ್ನ ನಡೆಸಲಾಗಿದೆ.  ರೊಚ್ಚಿಗೆದ್ದ ಭಾರತೀಯರಿಂದ ಬಾಯ್​ಕಟ್​ ಅಭಿಯಾನ

  ಈ ವಸ್ತುಗಳು ಅಮೆಜಾನ್​ನಲ್ಲಿ ಕಾಣುತ್ತಿದ್ದಂತೆ ರೊಚ್ಚಿಗೆದ್ದ ಭಾರತೀಯರು ಇದು ಭಾರತದ ರಾಷ್ಟ್ರ ಧ್ವಜಕ್ಕೆ ಮಾಡಿದ ಅಪಮಾನ ಈ ಹಿನ್ನಲೆ ಈ ದೈತ್ಯ ಇ ಕಾಮರ್ಸ್​ ಸಂಸ್ಥೆಯನ್ನು ಬಾಯ್​ಕಟ್​ ಮಾಡಬೇಕು ಎಂದು ಆಗ್ರಹಿಸಿದ್ದಾರೆ.  #Amazon_Insults_National_Flag ಹ್ಯಾಷ್​ಟ್ಯಾಗ್​ ಮೂಲಕ ಇ ಕಾಮರ್ಸ್​ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

  ಇದನ್ನು ಓದಿ: ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದೆ ದೇಶ, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಕಟ್ಟೆಚ್ಚರ-ಗಲ್ಲಿ ಗಲ್ಲಿಯಲ್ಲೂ ಖಾಕಿ ಹದ್ದಿನಕಣ್ಣು!

  2002ರ ಫ್ಲಾಗ್​ ಕೋಡ್ ಅಡಿ ಈ ರೀತಿ ರಾಷ್ಟ್ರಧ್ವಜವನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳಲುವಂತಿಲ್ಲ. ಈ ಹಿನ್ನಲೆ ತ್ರಿವರ್ಣಧ್ವಜ ಹೊಂದಿರುವ ಈ ವಸ್ತುಗಳ ಮಾರಾಟಕ್ಕೆ ಮುಂದಾಗಿರುವ ಅಮೆಜಾನ್​ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನಲೆ ಹಲವಾರು ಬಳಕೆದಾರರು ಅಮೆಜಾನ್ ವಿರುದ್ಧ ಸಾಮಾಜಿಕ ಮಾಧ್ಯಮದ ಮೂಲಕ ಕೋಪ ಹೊರ ಹಾಕಿದ್ದಾರೆ.

  ಅಗ್ಗದ ವಿಧಾನದ ಮೂಲಕ ದೇಶಭಕ್ತಿ ಪ್ರದರ್ಶನ

  ಅಮೆಜಾನ್ ತಮ್ಮ ವಸ್ತುಗಳ ಮಾರಾಟಕ್ಕೆ ಈ ರೀತಿಯ ಅಗ್ಗದ ವಿಧಾನ ಬಸುತ್ತಿದ್ದು, ದೇಶಭಕ್ತಿಯ ಪ್ರದರ್ಶನದ ಮೂಲಕ ಭಾರತೀಯ ಗ್ರಾಹಕರು ಮೆಚ್ಚಿಸಲು ಪ್ರಯತ್ನಿಸುತ್ತಿದೆ. ಆದರೆ, ಇದು ದೇಶಭಕ್ತಿ ಪ್ರದರ್ಶನವಲ್ಲ ಎಂದು ಕಿಡಿಕಾರಿದ್ದಾರೆ.

  ಇದನ್ನು ಓದಿ: Dehliಯ ರಾಜ್‍ಪಥ್‍ನಲ್ಲಿ ಈ ಬಾರಿ ಕರ್ನಾಟಕದ ಕರಕುಶಲ ವಸ್ತುಗಳ ತೊಟ್ಟಿಲು ಸ್ತಬ್ದಚಿತ್ರ ಪ್ರದರ್ಶನ

  ಟ್ವಿಟ್ಟರ್ ಬಳಕೆದಾರರಿಂದ ಪೋಸ್ಟ್ ಮಾಡಲಾದ ಎಲ್ಲಾ ಉತ್ಪನ್ನಗಳ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ಅಮೆಜಾನ್ ಇಂಡಿಯಾದಲ್ಲಿ ತ್ರಿವರ್ಣ ಧ್ವಜದ ಫೇಸ್ ಮಾಸ್ಕ್‌ಗಳು, ಬಟ್ಟೆಗಳನ್ನು ಭಾರತೀಯ ಕ್ರೀಡಾ ಉಡುಪುಗಳ ಮಾರಾಟ ಮಾಡಲಾಗುತ್ತಿದೆ.

  ಏನಿದರ ಸತ್ಯಾಸತ್ಯತೆ

  ಇದರ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿರುವ ಕೀಚೈನ್ಸ್. ಆದಾಗ್ಯೂ, ಅನೇಕ ಬಳಕೆದಾರರು ಆರೋಪಿಸಿದಂತೆ ಭಾರತೀಯ ಧ್ವಜವಿರುವ ಯಾವುದೇ ಬೂಟುಗಳನ್ನು ಕಂಡು ಬಂದಿಲ್ಲ.

  ಕೆಲವು ಬಳಕೆದಾರರು ಭಾರತೀಯ ಧ್ವಜದೊಂದಿಗೆ ವಿವಿಧ ಉತ್ಪನ್ನಗಳನ್ನು ತೋರಿಸುವ ಚಿತ್ರಗಳನ್ನು ಸುಮ್ಮನೆ ಪೋಸ್ಟ್ ಮಾಡುತ್ತಿದ್ದಾರೆ ಎಂಬುದನ್ನು ಸಹ ಗಮನಿಸಬೇಕು, ಆದರೆ ಈ ಚಿತ್ರಗಳು ಅಮೆಜಾನ್ ಇಂಡಿಯಾದಿಂದ ಕಂಡು ಬಂದಿಲ್ಲ

  2019ರಲ್ಲೂ ಇದೇ ರೀತಿ ಸುದ್ದಿಯಾಗಿದ್ದ ಅಮೆಜಾನ್​
  2019 ರಲ್ಲಿ, ರಾಷ್ಟಧ್ವಜಕ್ಕೆ ಅವಮಾನಿಸುವಂತಹ ಕಂಪನಿಯು ಟಾಯ್ಲೆಟ್ ಸೀಟ್ ಕವರ್‌ಗಳು ಡೋರ್‌ಮ್ಯಾಟ್‌ಗಳನ್ನು ಮಾರಾಟ ಮಾಡುತ್ತಿದ್ದ ಅಮೆಜಾನ್​ ವಿರುದ್ಧ ಇದೇ ರೀತಿಯ ಬಹಿಷ್ಕಾರ ಅಭಿಯಾನ ಶುರುವಾಗಿತ್ತು. ಈ ವೇಳೆ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್​ ಈ ಪ್ರಕರಣ ಸಂಬಂಧ ಕೆನಾಡದ ಭಾರತೀಯ ರಾಯಭಾರಿ ಕಚೇರಿಗೆ ಸೂಚನೆ ನೀಡಿ, ಅಮೆಜಾನ್​ ಅತ್ಯುನ್ನತ ಮಟ್ಟದಲ್ಲಿ ಈ ಕುರಿತು ವಿಚಾರಿಸುವಂತೆ ಟ್ವೀಟ್​ ಮಾಡಿದ್ದರು.
  Published by:Seema R
  First published: