ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾಕ್ಕೆ ಮಹಾ ತಿರುವು; ಇಂದು ಭೋಪಾಲ್​ಗೆ ಬಂದ ನಾಪತ್ತೆಯಾಗಿದ್ದ ಪಕ್ಷೇತರ ಶಾಸಕ

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಬಿಜೆಪಿ ನಾಯಕರು ಬಲವಂತಾಗಿ ಸುರೇಂದ್ರ ಸಿಂಗ್ ಶೆರಾ ಮತ್ತು ಇತರೆ ಮೂವರು ಶಾಸಕರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈ ಮೂಲಕ ಕುದುರೆ ವ್ಯಾಪಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.

ಭೋಪಾಲ್​ಗೆ ಬಂದ ಪಕ್ಷೇತರ ಶಾಸಕ ಸುರೇಂದ್ರ ಸಿಂಗ್ ಶೆರಾ.

ಭೋಪಾಲ್​ಗೆ ಬಂದ ಪಕ್ಷೇತರ ಶಾಸಕ ಸುರೇಂದ್ರ ಸಿಂಗ್ ಶೆರಾ.

 • Share this:
  ಭೋಪಾಲ್: ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಾ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಕಾಣೆಯಾಗಿದ್ದ ಪಕ್ಷೇತರ ಶಾಸಕ ಸುರೇಂದ್ರ ಸಿಂಗ್ ಶೆರಾ ಶನಿವಾರ ಮಧ್ಯಾಹ್ನ ಭೋಪಾಲ್​ಗೆ ಹಿಂದಿರುಗಿದ್ದಾರೆ. ಮಾರ್ಚ್​ 10ರ ಹೊಳಿ ಒಳಗಾಗಿ ಸಿಎಂ ಕಮಲನಾಥ್ ಸಂಪುಟದಲ್ಲಿ ಸಚಿವರಾಗುವುದಾಗಿ ರಹಸ್ಯವಾಗಿ ಘೋಷಣೆ ಮಾಡಿದ್ದಾರೆ.

  ನಾಲ್ಕು ದಿನ ಬೆಂಗಳೂರಿನಲ್ಲಿ ಕಾಲ ಕಳೆದು ಸುರೇಂದ್ರ ಸಿಂಗ್ ಶೆರಾ ಇಂದು ಮಧ್ಯಪ್ರದೇಶಕ್ಕೆ ವಾಪಸ್ಸಾಗಿದ್ದಾರೆ. ಇದೊಂದು ಖಾಸಗಿ ಭೇಟಿ ಎಂದು ಅವರು ಹೇಳಿಕೊಂಡಿದ್ದಾರೆ.

  ಇತರೆ ಮೂವರು ಶಾಸಕರಾದ ಹರ್ದೀಪ್ ಸಿಂಗ್ ದಂಗ್, ರಘುರಾಜ್ ಕನ್ಸಾನಾ ಮತ್ತು ಬಿಸಾವುಲಾಲ್ ಸಿಂಗ್​ ಅವರು ರಾಜ್ಯದಿಂದ ಕಾಣೆಯಾಗಿದ್ದಾರೆ. ಶಾಸಕರನ್ನು ಬಿಜೆಪಿ ನಾಯಕರು ಅಪಹರಿಸಿ ಕರ್ನಾಟಕದಲ್ಲಿ ಇರಿಸಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್​ ಆರೋಪಿಸಿದೆ.

  ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಂದ್ರ ಸಿಂಗ್ ಶೆರಾ, ಅಪಹರಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದರು. ದೆಹಲಿಯಿಂದ ರಾಜ ಬೋಜ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸುರೇಂದ್ರ ಸಿಂಗ್ ಅವರನ್ನು ರಾಜ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಸಿ.ಶರ್ಮಾ ಬರಮಾಡಿಕೊಂಡರು.

  ಅಪಹರಣದ ಆರೋಪವನ್ನು ಅವರು ನಿರಾಕರಿಸಿದರೂ, ಶೆರಾ ಅವರು ಶುಕ್ರವಾರ ವೀಡಿಯೊ ಸಂದೇಶವೊಂದರಲ್ಲಿ, ಅಪರಿಚಿತ ವ್ಯಕ್ತಿಗಳು ವಿಮಾನ ನಿಲ್ದಾಣಕ್ಕೆ ಹೋಗುವಾಗ ಎರಡು ಬಾರಿ ತಡೆದಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದಾಗಿ ಆ ದಿನ ನಿಗದಿಯಾಗಿದ್ದ ವಿಮಾನ ತಪ್ಪಿಸಿಕೊಳ್ಳಲು ಕಾರಣವಾಯಿತು.

  ಇದನ್ನು ಓದಿ: ಭಾರತ ಮಾತೆಯನ್ನ ಬಿಜೆಪಿಯವ್ರು ಗುತ್ತಿಗೆ ಪಡೆದಿದ್ದಾರಾ?, ಮರ್ಯಾದೆಗೆಟ್ಟ ಭಂಡ ಜನ; ಸಿದ್ದರಾಮಯ್ಯ ಕಿಡಿ

  ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಬಿಜೆಪಿ ನಾಯಕರು ಬಲವಂತಾಗಿ ಸುರೇಂದ್ರ ಸಿಂಗ್ ಶೆರಾ ಮತ್ತು ಇತರೆ ಮೂವರು ಶಾಸಕರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಈ ಮೂಲಕ ಕುದುರೆ ವ್ಯಾಪಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.

   
  First published: