ವಧುವಿನ ಅಮ್ಮನ ಜೊತೆ ವರನ ಅಪ್ಪ ಪರಾರಿ; ವಿಚಿತ್ರ ಲವ್ ಸ್ಟೋರಿಯಿಂದ ಮಕ್ಕಳ ಮದುವೆ ಕ್ಯಾನ್ಸಲ್!

ಬಾಲ್ಯದಿಂದಲೇ ಇಬ್ಬರಿಗೂ ಪರಿಚಯವಿತ್ತು. ಅನಿವಾರ್ಯ ಕಾರಣಗಳಿಂದ ಇಬ್ಬರೂ ಬೇರೆಯವರನ್ನು ಮದುವೆಯಾಗಿದ್ದರು. ತಮ್ಮ ಮಕ್ಕಳ ಮದುವೆ ಸಂದರ್ಭದಲ್ಲಿ ಮತ್ತೆ ಅವರಿಬ್ಬರ ಹಳೆಯ ಪ್ರೇಮಕತೆಗೆ ಜೀವ ಬಂದಿದೆ.

Sushma Chakre | news18-kannada
Updated:January 21, 2020, 3:45 PM IST
ವಧುವಿನ ಅಮ್ಮನ ಜೊತೆ ವರನ ಅಪ್ಪ ಪರಾರಿ; ವಿಚಿತ್ರ ಲವ್ ಸ್ಟೋರಿಯಿಂದ ಮಕ್ಕಳ ಮದುವೆ ಕ್ಯಾನ್ಸಲ್!
ಪ್ರಾತಿನಿಧಿಕ ಚಿತ್ರ
  • Share this:
ಸೂರತ್ (ಜ. 21): ಮದುವೆ ಇಷ್ಟವಿಲ್ಲದೆ ಮಂಟಪದಿಂದ ಮದುಮಗಳು ಅಥವಾ ಮದುಮಗ ಪರಾರಿಯಾಗಿರುವ ಘಟನೆಗಳನ್ನು ಆಗಾಗ ಕೇಳುತ್ತಿರುತ್ತೇವೆ. ಮನೆಯವರ ಬಲವಂತಕ್ಕೆ ಒಪ್ಪಿ ಮದುವೆಯಾಗಲು ಒಪ್ಪುವ ವಧು-ವರರು ಕೊನೆಕ್ಷಣದಲ್ಲಿ ಮನಸು ಬದಲಾಯಿಸಿದ ಎಷ್ಟೋ ಉದಾಹರಣೆಗಳಿವೆ. ಆದರೆ, ಗುಜರಾತ್​ನಲ್ಲೊಂದು ಮದುವೆ ಇದೇ ರೀತಿ ರದ್ದಾಗಿದ್ದು, ಅದಕ್ಕೆ ವಧುವಾಗಲಿ, ವರನಾಗಲಿ ಕಾರಣರಲ್ಲ ಎಂಬುದೇ ವಿಶೇಷ.

ಮಕ್ಕಳ ಮದುವೆಯನ್ನು ಸ್ಮರಣೀಯವಾಗಿಸಬೇಕೆಂದು ಎಲ್ಲ ಅಪ್ಪ-ಅಮ್ಮಂದಿರಿಗೂ ಇಷ್ಟವಿರುತ್ತದೆ. ಆದರೆ, ಗುಜರಾತ್​ನಲ್ಲೊಂದು ಸಿನಿಮೀಯ ಘಟನೆ ನಡೆದಿದ್ದು, ವಧುವಿನ ಅಮ್ಮನ ಜೊತೆ ವರನ ಅಪ್ಪ ಓಡಿಹೋಗಿದ್ದಾರೆ. ಇದರಿಂದಾಗಿ ಆ ಮದುವೆ ಕ್ಯಾನ್ಸಲ್ ಅಗಿದೆ!

ಅಚ್ಚರಿಯಾದರೂ ಇದು ಸತ್ಯ. 1 ವರ್ಷದ ಹಿಂದೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದ ಜೋಡಿಯ ಮದುವೆ ಫೆಬ್ರವರಿ 2ನೇ ವಾರ ನಿಗದಿಯಾಗಿತ್ತು. ಸೂರತ್​ನಲ್ಲಿ ನಡೆಯಬೇಕಿದ್ದ ಮದುವೆ ರದ್ದಾಗಿದ್ದು, ಅದಕ್ಕೆ ವರನ ಅಪ್ಪ ಮತ್ತು ವಧುವಿನ ಅಮ್ಮನೇ ಕಾರಣ ಎನ್ನಲಾಗಿದೆ. ವರನ 48 ವರ್ಷದ ಅಪ್ಪ ಮತ್ತು ವಧುವಿನ 46 ವರ್ಷದ ಅಮ್ಮ 10 ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರಿಬ್ಬರೂ ಓಡಿಹೋಗಿರುವ ಬಗ್ಗೆ ಅನುಮಾನ ಎದ್ದಿರುವುದರಿಂದ ಈ ಮದುವೆಯನ್ನು ಕ್ಯಾನ್ಸಲ್ ಮಾಡಲಾಗಿದೆ.

ಇದನ್ನೂ ಓದಿ: 60 ವರ್ಷದ ಮಹಿಳೆಗೆ ತಾಳಿ ಕಟ್ಟಿದ 20ರ ಯುವಕ; ಇದು ರಾಂಗ್ ​ನಂಬರ್​ನಿಂದ ಶುರುವಾದ ಲವ್ ಸ್ಟೋರಿ!

ಈ ಬಗ್ಗೆ ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದ್ದು, ಉದ್ಯಮಿ ಹಾಗೂ ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ವರನ ಅಪ್ಪ ಜನವರಿ 10ರಂದು ಕತಾರ್​ಗ್ರಾಮದಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದಾರೆ. ವಧುವಿನ ಅಮ್ಮ ಕೂಡ ಅದೇ ದಿನದಿಂದ ನಾಪತ್ತೆಯಾಗಿದ್ದು, ಇಬ್ಬರೂ ಒಟ್ಟಾಗಿ ಮನೆಬಿಟ್ಟು ಹೋಗಿದ್ದಾರೆ ಎಂದು ಎರಡೂ ಕುಟುಂಬಸ್ಥರು ಅನುಮಾನ ಪಟ್ಟಿದ್ದಾರೆ.

ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಅರಳಿತು ಪ್ರೀತಿ; ಇಳಿವಯಸ್ಸಿನಲ್ಲಿ ಮದುವೆಯಾದ ಅಜ್ಜ-ಅಜ್ಜಿಯ ಲವ್​ ಸ್ಟೋರಿ ಇಲ್ಲಿದೆ...

ನಾಪತ್ತೆಯ ಹಿಂದಿತ್ತು ಲವ್​ ಸ್ಟೋರಿ!:ಅದಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ಇವರಿಬ್ಬರೂ ಬಾಲ್ಯದಿಂದ ಒಬ್ಬರಿಗೊಬ್ಬರು ಪರಿಚಯವಿದ್ದವರು. ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿತ್ತು. ಆಗಲೇ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಇಷ್ಟವಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ವಧುವಿನ ತಾಯಿ ಬ್ರೋಕರ್​ನನ್ನು ಮದುವೆಯಾಗಿದ್ದಳು. ಆ ಉದ್ಯಮಿ ಕೂಡ ಮನೆಯವರು ನೋಡಿದ್ದ ಹುಡುಗಿಯನ್ನು ಮದುವೆಯಾಗಿದ್ದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ಭಾರೀ ಹಿಮಪಾತ: ತನ್ನದೇ ಮದುವೆಗೆ ಗೈರಾದ ಯೋಧ; ಮುಂದೇನಾಯ್ತು ಗೊತ್ತಾ?

ಇದೀಗ ತಮ್ಮ ಮಕ್ಕಳ ಮದುವೆ ಸಂದರ್ಭದಲ್ಲಿ ಮತ್ತೆ ಅವರಿಬ್ಬರ ಹಳೆಯ ಪ್ರೇಮಕತೆಗೆ ಜೀವ ಬಂದಿದೆ ಎಂದು ಹೇಳಲಾಗುತ್ತಿದೆ. ಸೂರತ್​ನಲ್ಲಿ ಹೆಸರುವಾಸಿಯಾಗಿರುವ ಉದ್ಯಮಿ ಮಗನ ಅತ್ತೆಯಾಗಬೇಕಿದ್ದ ಮಹಿಳೆಯೊಂದಿಗೆ ಇದ್ದಕ್ಕಿದ್ದಂತೆ ಪರಾರಿಯಾಗಿರುವ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿರುವುದರಿಂದ ಅವರ ಕುಟುಂಬಸ್ಥರಿಗೆ ಭಾರೀ ಮುಜುಗರವಾಗಿದೆ. ಅವರಿಬ್ಬರೂ ಎಲ್ಲಿಗೆ ಹೋಗಿದ್ದಾರೆಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ