ಆರ್ಥಿಕತೆ ಮೇಲೆ ಮತ್ತೆ ಎರಡು ಪೆಟ್ಟು; ಗ್ರಾಹಕ ಹಣದುಬ್ಬರ ಶೇ.5.54 ಹೆಚ್ಚಳ, -3.8ಕ್ಕೆ ಕುಸಿದ ಕೈಗಾರಿಕಾ ಉತ್ಪನ್ನ

news18-kannada
Updated:December 12, 2019, 6:11 PM IST
ಆರ್ಥಿಕತೆ ಮೇಲೆ ಮತ್ತೆ ಎರಡು ಪೆಟ್ಟು; ಗ್ರಾಹಕ ಹಣದುಬ್ಬರ ಶೇ.5.54  ಹೆಚ್ಚಳ, -3.8ಕ್ಕೆ ಕುಸಿದ ಕೈಗಾರಿಕಾ ಉತ್ಪನ್ನ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ: ಭಾರತದ ಆರ್ಥಿಕತೆಗೆ ಮತ್ತೆ ಎರಡು ಆಘಾತಗಳು ಎದುರಾಗಿವೆ. ಚಿಲ್ಲರೆ ಬೆಲೆ ಆಧಾರಿತ ಗ್ರಾಹಕ ಹಣದುಬ್ಬರ ಏರಿಕೆಯಾಗಿದೆ. ಇದರ ಜೊತೆಗೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಸಂಕುಚಿತಗೊಂಡಿದೆ ಎಂದು ಅಧಿಕೃತ ದತ್ತಾಂಶ ಬಹಿರಂಗಪಡಿಸಿದೆ.

ಅಂಕಿ-ಅಂಶಗಳ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, ದುಬಾರಿ ಆಹಾರ ಪದಾರ್ಥಗಳ ಮೇಲೆ ಗ್ರಾಹಕರ ಹಣದುಬ್ಬರ ನವೆಂಬರ್​ನಲ್ಲಿ ಶೇ.5.54ರಷ್ಟು ಹೆಚ್ಚಾಗಿದೆ. ಅಕ್ಟೋಬರ್​ನಲ್ಲಿ ಇದು ಶೇ.4.62ರಷ್ಟಿತ್ತು. ಕೈಗಾರಿಕಾ ಉತ್ಪಾದನೆ ಸೂಚ್ಯಂಕವು ಅಕ್ಟೋಬರ್‌ನಲ್ಲಿ -3.8ಕ್ಕೆ ಕುಸಿದಿದೆ ಎಂದು ಅಂಕಿ-ಅಂಶಗಳು ಹೇಳಿವೆ. 2018ರ ಅಕ್ಟೋಬರ್​ನಲ್ಲಿ ಕೈಗಾರಿಕೆ ಉತ್ಪಾದನೆಯು ಶೇ.8.4ರಷ್ಟು ಹೆಚ್ಚಿತ್ತು.
First published:December 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ