ಗೂಗಲ್​ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅವಳಿಗಳು; ಇವರ ಸಂಬಳ ಕೇಳಿದ್ರೆ ಶಾಕ್​ ಆಗ್ತೀರಾ..!

ಸಪ್ತರ್ಷಿ ಹಾಗೂ ರಾಜರ್ಷಿ ಆಂಧ್ರಪ್ರದೇಶದ ಎಸ್​ಆರ್​ಎಂ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಬ್ಯಾಚ್ ಆಗಿದೆ. ಸಾಮಾನ್ಯವಾಗಿ ಮೊದಲ ಬ್ಯಾಚ್​​ಗೆ ವಾರ್ಷಿಕ ಪ್ಯಾಕೇಜ್​​ 7 ಲಕ್ಷ ಇರುತ್ತದೆ. ಆದರೆ ಈ ಅವಳಿ ಸಹೋದರರು ಅತ್ಯಧಿಕ ಪ್ಯಾಕೇಜ್​ ಪಡೆದಿದ್ದಾರೆ.

ಅವಳಿ ಸಹೋದರರು

ಅವಳಿ ಸಹೋದರರು

  • Share this:
    ಅವಳಿ ಸಹೋದರರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು, ಉತ್ತಮ ಸಂಬಳದ ಪ್ಯಾಕೇಜನ್ನೂ ಸಹ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಬುರ್ದ್ವಾನ್​​ನ ಸಪ್ತರ್ಷಿ ಮತ್ತು ರಾಜರ್ಷಿ ಮಜುಂದಾರ್ ಅವಳಿ ಸಹೋದರರು. ಜಪಾನ್​​ನ ಪಿವಿಪಿ ಇಂಕ್​​ ಕಂಪನಿಯಲ್ಲಿ ಕೆಲಸ ಪಡೆದಿದ್ದಾರೆ. ಇದು ಗೂಗಲ್​ ಜಪಾನ್​​ನ ಕಾರ್ಯತಂತ್ರದ ಪಾಲುದಾರ ಆಗಿದೆ. ಇಬ್ಬರೂ ವಾರ್ಷಿಕ 50 ಲಕ್ಷ ಸಂಬಳದ ಪ್ಯಾಕೇಜ್​ ಪಡೆದಿದ್ದಾರೆ. ಇಬ್ಬರೂ ಆಂಧ್ರಪ್ರದೇಶದ ಎಸ್​ಆರ್​​ಎಂ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ. ಕ್ಯಾಂಪಸ್​ ಪ್ಲೇಸ್​ಮೆಂಟ್​ನಲ್ಲಿ ಈ ಇಬ್ಬರೂ ಅವಳಿಗಳು ಆಯ್ಕೆಯಾಗಿದ್ದಾರೆ. ಆ ಮೂಲಕ ಆಂಧ್ರಪ್ರದೇಶದಿಂದ ಪದವಿ ಪಡೆದ ವಿದ್ಯಾರ್ಥಿಗಳ ಪೈಕಿ ಇವರಿಬ್ಬರೇ ಅತೀ ಹೆಚ್ಚು ಸಂಬಳದ ಪ್ಯಾಕೇಜ್​ ಪಡೆದಿರುವವರು.

    ಸಪ್ತರ್ಷಿ ಮತ್ತು ರಾಜರ್ಷಿ ಆಂಧ್ರ ಪ್ರದೇಶದ ಎಸ್​ಆರ್​ಎಂ ವಿಶ್ವವಿದ್ಯಾಲಯದ ಬಿ.ಟೆಕ್​ ಕಂಪ್ಯೂಟರ್​ ಸೈನ್ಸ್​ ವಿದ್ಯಾರ್ಥಿಗಳು. ಇವರು ತಮ್ಮ ಬಾಲ್ಯದ ದಿನಗಳನ್ನು ಬಹುತೇಕ ಜಾರ್ಖಂಡ್​ನಲ್ಲೇ ಕಳೆದಿದ್ದಾರೆ.

    ಇದನ್ನೂ ಓದಿ:ಬಿಸಿಯೂಟ ಆಹಾರ ಧಾನ್ಯಕ್ಕೆ ಕಳ್ಳರ ಕಾಟ; ರಾತ್ರಿಯಿಡೀ ಶಾಲೆಯಲ್ಲೇ ವಾಸ್ತವ್ಯ ಹೂಡಿದ ಶಿಕ್ಷಕ

    ’ನಮ್ಮ ತಂದೆಗೆ ಜಾರ್ಖಂಡ್​ನಲ್ಲೇ ಉದ್ಯೋಗ ಇದ್ದ ಕಾರಣ, ನಾವು ಹೆಚ್ಚಾಗಿ ನಮ್ಮ ಬಾಲ್ಯವನ್ನು ಜಾರ್ಖಂಡ್​ನಲ್ಲೇ ಕಳೆದೆವು. ನಾವು ನಮ್ಮ ಪ್ರಾಥಮಿಕ ಶಿಕ್ಷಣವನ್ನು ಅರ್ಧ ಬೊಕರೊ ಸ್ಟೀಲ್​ ಸಿಟಿಯಲ್ಲಿ, ಇನ್ನರ್ಧ ಡೆಹಘರ್​ನಲ್ಲಿ ಪಡೆದವು. ಬಳಿಕ ಪ್ರೌಢ ಶಿಕ್ಷಣವನ್ನು ಬೊಕರೋ ಸ್ಟೀಲ್​ ಸಿಟಿಯಲ್ಲಿ ಪಡೆದೆವು. ನಂತರ ಆಂಧ್ರ ಪ್ರದೇಶಕ್ಕೆ ಬಂದು ಎಸ್​​ಆರ್​ಎಂ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್​​ ಸೈನ್ಸ್​​ ಕೋರ್ಸ್​​ಗೆ ಸೇರಿಕೊಂಡೆವು. ನಮ್ಮ ತಂದೆ ಹೋಟೆಲ್​​ನಲ್ಲಿ ಜನರಲ್​ ಮ್ಯಾನೇಜರ್​ ಆಗಿದ್ದರೆ, ನಮ್ಮ ತಾಯಿ ಗೃಹಿಣಿಯಾಗಿದ್ದಾರೆ’ ಎಂದು 22 ವರ್ಷದ ರಾಜರ್ಷಿ ಹೇಳುತ್ತಾನೆ.

    ಸಪ್ತರ್ಷಿ ಹಾಗೂ ರಾಜರ್ಷಿ ಆಂಧ್ರಪ್ರದೇಶದ ಎಸ್​ಆರ್​ಎಂ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಬ್ಯಾಚ್ ಆಗಿದೆ. ಸಾಮಾನ್ಯವಾಗಿ ಮೊದಲ ಬ್ಯಾಚ್​​ಗೆ ವಾರ್ಷಿಕ ಪ್ಯಾಕೇಜ್​​ 7 ಲಕ್ಷ ಇರುತ್ತದೆ. ಆದರೆ ಈ ಅವಳಿ ಸಹೋದರರು ಅತ್ಯಧಿಕ ಪ್ಯಾಕೇಜ್​ ಪಡೆದಿದ್ದಾರೆ. ಇವರ ಸಾಧನೆಯನ್ನು ಎಸ್​ಆರ್​ಎಂ ಯೂನಿವರ್ಸಿಟಿ ಗೌರವಿಸಿದೆ. ಉಪಕುಲಪತಿ ಪ್ರೊ.ವಿ.ಎಸ್​.ರಾವ್​ ಅವರು ಅವಳಿ ಸಹೋದರರಾದ ಸಪ್ತರ್ಷಿ ಹಾಗೂ ರಾಜರ್ಷಿಗೆ ತಲಾ 2 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.

    ಇದನ್ನೂ ಓದಿ:Migrants: ಕೊರೋನಾ 2ನೇ ಅಲೆಯಲ್ಲಿ 13 ಲಕ್ಷ ವಲಸೆ ಕಾರ್ಮಿಕರು ದೆಹಲಿ ತೊರೆದಿದ್ದಾರೆ; ವರದಿ

    ಸಾಧನೆಗೈದ ಇಬ್ಬರೂ ಅವಳಿಗಳು ಯಶಸ್ಸಿಗೆ ಕಾರಣರಾದ ತಮ್ಮ ತಂದೆ-ತಾಯಿಗೆ ಹಾಗೂ ಯೂನಿವರ್ಸಿಟಿ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ‘ಈ ರೀತಿಯ ದೊಡ್ಡ ಪ್ಲೇಸ್​ಮೆಂಟ್​ನಲ್ಲಿ ನಾವು ಸೆಲೆಕ್ಟ್​ ಆಗುತ್ತೇವೆ ಎಂದು ಊಹಿಸಿಯೇ ಇರಲಿಲ್ಲ. ನಾವಿಬ್ಬರೂ ಒಟ್ಟಿಗೆ ಓದಿ, ಒಟ್ಟಿಗೆ ಬೆಳೆದು ಈಗ ಒಟ್ಟಿಗೆ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೇವೆ. ನಮ್ಮಿಬ್ಬರ ಆಲೋಚನೆಗಳು ಒಂದೇ ರೀತಿಯಾಗಿವೆ‘ ಎಂದು ಸಪ್ತರ್ಷಿ ಹೇಳಿದ್ದಾರೆ.

    ನಮಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದ ಎಸ್​ಆರ್​ಎಂ ಯೂನಿವರ್ಸಿಟಿ ಸಿಬ್ಬಂದಿ ಹಾಗೂ ಪ್ಲೇಸ್​​​ಮೆಂಟ್​​ ಸೆಲ್​ಗೆ ಅಭಿನಂದನೆಗಳು ಎಂದು ರಾಜರ್ಷಿ ಸಂತಸ ವ್ಯಕ್ತಪಡಿಸಿದ್ದಾರೆ.
    Published by:Latha CG
    First published: