news18 Updated:October 28, 2020, 8:33 PM IST
ಫ್ರಾನ್ಸ್ ದೇಶದ ಅಧ್ಯಕ್ಷ ಮ್ಯಾಕ್ರಾನ್ ವಿರುದ್ಧ ಟರ್ಕಿ ಜನರ ಆಕ್ರೋಶ
- News18
- Last Updated:
October 28, 2020, 8:33 PM IST
ನವದೆಹಲಿ: ಇಸ್ಲಾಮ್ ಧರ್ಮದ ಬಗ್ಗೆ ಚಾರ್ಲಿ ಹೆಬ್ಡೋ ಪತ್ರಿಕೆ ವ್ಯಂಗ್ಯ ಚಿತ್ರ ಬಿಡಿಸೋದನ್ನ ನಿಲ್ಲಿಸೋದಿಲ್ಲ; ಪತ್ರಿಕೆಯ ಕಾರ್ಟೂನುಗಳಿಂದ ಮುಸ್ಲಿಮರು ರೊಚ್ಚಿಗೇಳೋದು ತಪ್ಪಲ್ಲ ಎನ್ನುವಂತಾಗಿದೆ. ಪ್ರವಾದಿ ಮೊಹಮ್ಮದ್ ಅವರ ಕಾರ್ಟೂನುಗಳನ್ನ ವಿದ್ಯಾರ್ಥಿಗಳಿಗೆ ತೋರಿಸಿದ್ದ ಫ್ರೆಂಚ್ ಟೀಚರ್ವೊಬ್ಬರನ್ನ ಇಸ್ಲಾಮ್ ಮೂಲಭೂತವಾದಿಗಳು ಕತ್ತು ಕತ್ತರಿಸಿದ ಘಟನೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯ ನಂತರ ಇಸ್ಲಾಮ್ ಮೂಲಭೂತವಾದದ ವಿರುದ್ಧ ಫ್ರಾನ್ಸ್ನಲ್ಲಿ ಜನಾಂದೋಲನವೇ ಆಗುತ್ತಿದೆ. ಫ್ರಾನ್ಸ್ ಸರ್ಕಾರ ಇಸ್ಲಾಮ್ ಮೂಲಭೂತವಾದದ ವಿರುದ್ಧ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿದೆ. ಇದರ ಮಧ್ಯೆ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ ಹೊಸ ಕಾರ್ಟೂನೊಂದು ಮುಸ್ಲಿಮ್ ಜಗತ್ತಿನ ಕೆಂಗಣ್ಣಿಗೆ ಕಾರಣವಾಗಿದೆ. ಟರ್ಕಿ ಅಧ್ಯಕ್ಷ ಎರ್ಡೋಗನ್ ಅವರು ಮಹಿಳೆಯ ಲಂಗ ಎತ್ತುತ್ತಿರುವ ವ್ಯಂಗ್ಯ ಚಿತ್ರ ಇದಾಗಿದೆ. ಈ ಕಾರ್ಟೂನ್ ವಿರುದ್ಧ ಟರ್ಕಿ ದೇಶ ಸಿಡಿಮಿಡಿಗೊಂಡಿದೆ. ಚಾರ್ಲಿ ಹೆಬ್ಡೋ ವಿರುದ್ಧ ಕಾನೂನು ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಕ್ರಮ ತೆಗೆದುಕೊಳ್ಳುವುದಾಗಿ ಟರ್ಕಿ ಪಣತೊಟ್ಟಿದೆ.
ಫ್ರಾನ್ಸ್ ಟೀಚರ್ ಶಿರಚ್ಛೇದ ಘಟನೆ ನಂತರದ ಬೆಳವಣಿಗೆಗಳು ಫ್ರಾನ್ಸ್ ಮತ್ತು ಟರ್ಕಿ ಮಧ್ಯೆ ವಿಷಮ ವಾತಾವರಣ ಹೆಚ್ಚಿಸುತ್ತಿವೆ. ಇಸ್ಲಾಮ್ ಮೂಲಭೂತವಾದವನ್ನು ಸಹಿಸುವುದಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷರು ಘೋಷಿಸಿದ ಬೆನ್ನಲ್ಲೇ ಟರ್ಕಿ ದೇಶ ಫ್ರೆಂಚ್ ಸರಕುಗಳನ್ನ ನಿಷೇಧಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮೆಕ್ರಾನ್ ಅವರ ತಲೆ ರಿಪೇರಿ ಆಗಬೇಕಿದೆ ಎಂದು ಟರ್ಕಿ ಅಧ್ಯಕ್ಷ ಎರ್ಡೋಗನ್ ಆರ್ಭಟಿಸಿದ್ದಾರೆ. ಇಸ್ಲಾಮ್ ಧರ್ಮ ಪ್ರವಾದಿಗಳ ವ್ಯಂಗ್ಯಚಿತ್ರದ ವಿಚಾರವಷ್ಟೇ ಅಲ್ಲ, ಟರ್ಕಿ ದೇಶದ ಕೋಪಕ್ಕೆ ಇನ್ನೊಂದು ಬಲವಾದ ಕಾರಣವೂ ಇದೆ.
ಇದನ್ನೂ ಓದಿ: ಚೀನಾದ ಭಾಗ ಲಡಾಖ್ ಎಂದು ಯಡವಟ್ಟು; ಟ್ವಿಟ್ಟರ್ ವಿವರಣೆ ಸಮರ್ಪಕವಲ್ಲ ಎಂದ ಸಂಸದರ ಸಮಿತಿ
“ನಮ್ಮ ಅಧ್ಯಕ್ಷರನ್ನ ಅವಹೇಳನಕಾರಿಯಾಗಿ ಬಿಂಬಿಸಿ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ ಸರಣಿಯಾಗಿ ಕಾರ್ಟೂನುಗಳು ಪ್ರಕಟವಾಗಿವೆ. ಇದು ಸಾಂಸ್ಕೃತಿಕ ಜನಾಂಗೀಯತೆ ಮತ್ತು ದ್ವೇಷವನ್ನ ಹರಡುವ ಪ್ರಯತ್ನವನ್ನು ನಾನು ಖಂಡಿಸುತ್ತೇವೆ” ಎಂದು ಟರ್ಕಿ ಅಧ್ಯಕ್ಷ ಕಚೇರಿಯ ಸಂವಹನ ನಿರ್ದೇಶಕರು ಹೇಳುತ್ತಾರೆ.
ವೈಚಾರಿಕ ಸ್ವಾತಂತ್ರ್ಯದ ಹಿಂದೆ ಅವಿತು ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಟರ್ಕಿ ಉಪಾಧ್ಯಕ್ಷ ಫೌತ್ ಆಕ್ಟೇ ಟ್ವೀಟ್ ಮಾಡಿ ಗುಡುಗಿದ್ದಾರೆ.
ಆದರೆ, ಒಂದು ಧರ್ಮೀಯರಿಗೆ ಬೇಸರವಾಗುತ್ತದೆ ಎಂಬ ಕಾರಣಕ್ಕೆ ವಾಕ್ಸ್ವಾತಂತ್ರ್ಯವನ್ನು ಕಡಿಯಲು ಆಗುವುದಿಲ್ಲ ಎಂದು ಚಾರ್ಲಿ ಹೆಬ್ಡೋ ಪತ್ರಿಕೆಯನ್ನು ಫ್ರಾನ್ಸ್ ದೇಶ ಸಮರ್ಥಿಸಿಕೊಂಡಿದೆ.
Published by:
Vijayasarthy SN
First published:
October 28, 2020, 8:33 PM IST