Turkey Earthquake: ಭೂಕಂಪದ ತೀವ್ರತೆಗೆ ಒಡೆದು ಎರಡು ತುಂಡಾದ ಟರ್ಕಿಯ ಏರ್‌ಪೋರ್ಟ್‌ ರನ್‌ವೇ!

ರನ್‌ವೇ ಎರಡು ಭಾಗ

ರನ್‌ವೇ ಎರಡು ಭಾಗ

ಟರ್ಕಿಯ ಹಟಾಯ್ ಪ್ರಾಂತ್ಯದಲ್ಲಿ ನಿರ್ಮಾಣ ಮಾಡಲಾಗಿರುವ ವಿಮಾನ ನಿಲ್ದಾಣದಲ್ಲಿ ಇರುವ ಏಕೈಕ ರನ್‌ವೇ ಕೂಡ ಭೂಕಂಪದ ಅಬ್ಬರಕ್ಕೆ ಒಡೆದು ಹೋಗಿದ್ದು, ರನ್‌ವೇ ಎರಡು ಭಾಗವಾಗಿ ಹೋಗಿರುವುದರಿಂದ ಬಳಸಲು ಅಸಾಧ್ಯ ಎನ್ನುವಷ್ಟರ ಮಟ್ಟಿದೆ ಹಾಳಾಗಿದೆ.

  • News18 Kannada
  • 2-MIN READ
  • Last Updated :
  • New Delhi, India
  • Share this:

ಟರ್ಕಿ: ಪ್ರಬಲ ಭೂಕಂಪದ ಅಟ್ಟಹಾಸಕ್ಕೆ ಟರ್ಕಿ ಮತ್ತು ಸಿರಿಯಾ (Turkey Earthquake) ಅಕ್ಷರಶಃ ತತ್ತರಿಸಿ ಹೋಗಿದೆ. ಭೂಕಂಪದ ತೀವ್ರತೆಗೆ (Earthquake) ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮನೆಗಳು, ಕಟ್ಟಡಗಳು (Buildings) ಧರಾಶಾಹಿಯಾಗಿವೆ. ಮೂಕ ಪ್ರಾಣಿಗಳು (Animals) ಬದುಕಿಗಾಗಿ ವೇದನೆ ಪಡುತ್ತಿದೆ. ಪ್ರಕೃತಿಯ ಕೋಪಕ್ಕೆ ತುತ್ತಾಗಿರುವ ಕೋಟ್ಯಂತರ ಜನರು ಸಾಕಪ್ಪಾ ಸಾಕು ಅನ್ನೋ ಹಾಗೆ ಭೀತಿಯಿಂದಲೇ ಬದುಕುತ್ತಿದ್ದಾರೆ.


ಹೌದು.. ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಮೂರು ಪ್ರಬಲ ಭೂಕಂಪಗಳಿಂದ ಜನ ಜೀವನವೇ ಅಲ್ಲೋಲ ಕಲ್ಲೋಲವಾಗಿದ್ದು, ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟು ಮಾಡಿರೋದು ಮಾತ್ರವಲ್ಲದೇ ಇಲ್ಲಿಯವರೆಗೆ ಹತ್ತಿರತ್ತಿರ ಸುಮಾರು 4000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 7.8 ತೀವ್ರತೆಯ ಪ್ರಬಲ ಭೂಕಂಪದ ನಂತರ ಡಜನ್‌ಗಟ್ಟಲೆ ಅವಘಡಗಳು ಸಂಭವಿಸಿದ್ದು, ಇದರ ತೀವ್ರತೆ ಎಷ್ಟಿತ್ತೆಂದರೆ ಟರ್ಕಿಯ ಹಟಾಯ್‌ ಪ್ರಾಂತ್ಯದಲ್ಲಿ ಇರುವ ವಿಮಾನ ನಿಲ್ದಾಣದಲ್ಲಿನ ಏಕೈಕ ರನ್‌ವೇ (Airport Runway) ಕೂಡ ಒಡೆದು ಇಬ್ಭಾಗವಾಗಿದೆ.


ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಭೂಕಂಪಕ್ಕೆ ಸತ್ತವರ ಸಂಖ್ಯೆ 1300ಕ್ಕೆ ಏರಿಕೆ, ಭಾರತ ಸೇರಿ 45 ರಾಷ್ಟ್ರಗಳಿಂದ ಸಹಾಯಹಸ್ತ


ಹೌದು.. ಟರ್ಕಿಯ ಹಟಾಯ್ ಪ್ರಾಂತ್ಯದಲ್ಲಿ ನಿರ್ಮಾಣ ಮಾಡಲಾಗಿರುವ ವಿಮಾನ ನಿಲ್ದಾಣದಲ್ಲಿ ಇರುವ ಏಕೈಕ ರನ್‌ವೇ ಕೂಡ ಭೂಕಂಪದ ಅಬ್ಬರಕ್ಕೆ ಒಡೆದು ಹೋಗಿದ್ದು, ರನ್‌ವೇ ಎರಡು ಭಾಗವಾಗಿ ಹೋಗಿರುವುದರಿಂದ ಬಳಸಲು ಅಸಾಧ್ಯ ಎನ್ನುವಷ್ಟರ ಮಟ್ಟಿದೆ ಹಾಳಾಗಿದೆ. ಭೂಕಂಪದಿಂದ ಸಂಪೂರ್ಣ ನಾಶವಾಗಿರುವ ರನ್‌ವೇಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸದ್ಯ ಯಾವುದೇ ವಿಮಾನಗಳನ್ನು ಏರ್‌ಪೋರ್ಟ್‌ಗೆ ಬಾರದಂತೆ ಸ್ಥಳೀಯ ಆಡಳಿತ ಸೂಚಿಸಿದೆ.


ದಶಕದ ಅತಿದೊಡ್ಡ ಭೂಕಂಪ!


ಅಂದ ಹಾಗೆ ಸೋಮವಾರ ಟರ್ಕಿಯಲ್ಲಿ ಸಂಭವಿಸಿದ ಭೂಕಂಪವು ದಶಕದಲ್ಲೇ ಸಂಭವಿಸಿದ ಅತಿದೊಡ್ಡ ಪ್ರಾಕೃತಿಕ ವಿಕೋಪವಾಗಿದೆ ಎಂದು ಟರ್ಕಿ ದೇಶದ ಅಧ್ಯಕ್ಷರು ತಿಳಿಸಿದ್ದು, ಭೂಕಂಪ ಶಾಸ್ತ್ರಜ್ಞರ ಅಭಿಪ್ರಾಯದ ಪ್ರಕಾರ ಈ ಭೂಕಂಪ ಟರ್ಕಿಯಲ್ಲಿ ಈವರೆಗೆ ಸಂಭವಿಸಿದ ಭೂಕಂಪಗಳ ಪೈಕಿ ಅತಿ ದೊಡ್ಡದಾಗಿದೆ. ಆರಂಭದಲ್ಲಿ ಭೂಕಂಪ ಸಂಭವಿಸಿ ಎರಡನೇ ಬಾರಿಗೆ 7.5 ತೀವ್ರತೆಯೊಂದಿಗೆ ಭೂಕಂಪ ಸಂಭವಿಸಿತು. ಇದರ ಕೇಂದ್ರ ಬಿಂದು ಕಹ್ರಮನ್ಮರಸ್ ಪ್ರಾಂತ್ಯದ ಎಲ್ಬಿಸ್ತಾನ್ ಜಿಲ್ಲೆಯಲ್ಲಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Indonesia Earthquake: ಭೂಕಂಪದ ಹೊಡೆತಕ್ಕೆ ನಲುಗಿದ ಇಂಡೋನೇಷ್ಯಾ, 162 ಸಾವು, ನೂರಾರು ಮಂದಿಗೆ ಗಾಯ


2000ಕ್ಕೂ ಹಳೆಯ ವರ್ಷದ ಕಟ್ಟಡ ಧರಾಶಾಹಿ!


ಭೂಕಂಪ ಎಷ್ಟು ಭಯಾನಕವಾಗಿತ್ತೆಂದರೆ ನೋಡು ನೋಡುತ್ತಿದ್ದಂತೆ ಜನರ ಕಣ್ಣೆದುರಿಗೆ ಸಾವಿರಾರು ಕಟ್ಟಡಗಳು ಕುಸಿದು ಬಿದ್ದಿವೆ. ಅನೇಕರ ಜೀವ ರಕ್ಷಣೆಗಾಗಿ ಓಡುತ್ತಿದ್ದಾಗಲೆ ಬಿರಿದ ಭೂಮಿಯ ಬಾಯಿಗೆ ಆಹಾರವಾಗಿ ಹೋಗಿದ್ದಾರೆ. ಸಾವಿರಾರು ಮಂದಿಯ ಮೇಲೆ ಕಟ್ಟಡ, ಮರ ಗಿಡಗಳು ಬಿದ್ದು ಸಾವನ್ನಪ್ಪಿದ್ದಾರೆ. ನಿನ್ನೆಯ ಭೂಕಂಪಕ್ಕೆ ಉರುಳಿಬಿದ್ದು ನಾಶವಾದ ಕಟ್ಟಡಗಳ ಪೈಕಿ ಗಾಜಿಯಾಂಟೆಪ್ ಕ್ಯಾಸಲ್ ಕಟ್ಟಡಕ್ಕೆ 2000ಕ್ಕೂ ಹಳೆಯ ಇತಿಹಾಸವಿದೆ. ಟರ್ಕಿಯ ಐತಿಹಾಸಿಕ ಹೆಗ್ಗುರುತಗಳಲ್ಲೊಂದಾದ ಈ ಕಟ್ಟಡ ಕೂಡ ಭೂಕಂಪಕ್ಕೆ ನಾಶವಾಗಿರೋದು, ಅಲ್ಲಿನ ಜನರ ಬೇಸರಕ್ಕೆ ಕಾರಣವಾಗಿದೆ.


ಹಲವು ರಾಷ್ಟ್ರಗಳಿಂದ ನೆರವಿನ ವಾಗ್ದಾನ


ಭೂಕಂಪ ಸಂಭವಿಸಿದ ಮೊದಲ ಹತ್ತು ಗಂಟೆಗಳಲ್ಲಿ 50ಕ್ಕೂ ಹೆಚ್ಚು ಅವಘಡಗಳು ನಡೆದಿದ್ದು, ಇನ್ನೂ ಹಲವು ದಿನಗಳ ಕಾಲ ಈ ತರಹ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಭೂಕಂಪ ಶಾಸ್ತ್ರಜ್ಞರು ತಿಳಿಸಿದ್ದಾರೆ. ಈ ಮಧ್ಯೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು ದುರಂತಕ್ಕೆ ಸಂಬಂಧಪಟ್ಟಂತೆ ಸ್ಪಂದಿಸುವಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕರೆ ನೀಡಿದ್ದಾರೆ. ಫ್ರಾನ್ಸ್, ಜರ್ಮನಿ, ಇಸ್ರೇಲ್ ಮತ್ತು ಯುಎಸ್ ಸೇರಿದಂತೆ ಅನೇಕ ರಾಷ್ಟ್ರಗಳು ಟರ್ಕಿಗೆ ಸಹಾಯ ಮಾಡುವುದಾಗಿ ಘೋಷಿಸಿದೆ.

Published by:Avinash K
First published: