Turkey Earthquake: ನಡುಗಿದ ಭೂಮಿ, ಟರ್ಕಿ-ಸಿರಿಯಾ ಅವಶೇಷಗಳಡಿ 21,000 ಮಂದಿ ಸಾವು!

ಟರ್ಕಿ ಭೂಕಂಪ

ಟರ್ಕಿ ಭೂಕಂಪ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 21,000 ದಾಟಿದೆ. ಮೊದಲ ಯುಎನ್ ರಕ್ಷಣಾ ತಂಡ ಸಿರಿಯಾದ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳನ್ನು ತಲುಪಿದೆ. ಸದ್ಯ ಭೂಕಂಪ ಸಂಭವಿಸಿ ಮೂರು ದಿನಗಳಾಗಿದ್ದು, ಅವಶೇಷಗಳಡಿ ಸಿಲುಕಿದವರು ಜೀವಂತವಾಗಿರುವ ಭರವಸೆ ಕ್ಷೀಣವಾಗಿದೆ.

ಮುಂದೆ ಓದಿ ...
  • Share this:

    ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದಾಗಿ (Turkey And Syria Earthquake) ಸಾವಿನ ಸಂಖ್ಯೆ ಹೆಚ್ಚುತ್ತಿದೆ. ರಕ್ಷಣಾ ತಂಡಗಳು ತೀವ್ರ ಚಳಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇನ್ನು ಭೂಕಂಪದ (Earthquake) 72 ಗಂಟೆಗಳ ನಂತರ, ಅವಶೇಷಗಳಲ್ಲಿಸಿಲುಕಿದವರು ಬದುಕುಳಿದಿರುವ ಸಾಧ್ಯತೆ ಕ್ಗಷಣಭವಾಗಿದೆ ಎಂದು ತಜ್ಞರು ತಿಳೀಸಿದ್ದಾರೆ. ಸುದ್ದಿ ಸಂಸ್ಥೆ ಎಎಫ್‌ಪಿ ಪ್ರಕಾರ, ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 21,000 ಕ್ಕೆ ಏರಿದೆ. ಮತ್ತೊಂದೆಡೆ, ವಿಶ್ವಸಂಸ್ಥೆಯ ಮೊದಲ ವೈದ್ಯಕೀಯ ನೆರವು ಸಿರಿಯಾದ ಬಂಡುಕೋರರು ಆಕ್ರಮಿಸಿಕೊಂಡಿರುವ ಪ್ರದೇಶವನ್ನು ತಲುಪಿದೆ. ಆದಾಗ್ಯೂ, ಸಮಯ ಕಳೆದಂತೆ, ಹೆಚ್ಚಿನ ಜನರನ್ನು ಉಳಿಸುವ ಭರವಸೆ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಟರ್ಕಿ-ಸಿರಿಯಾ ಭೂಕಂಪದ ಇತ್ತೀಚೆಗಿನ ಹತ್ತು ಬೆಳವಣಿಗೆಗಳು.


    1. ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಸಿರಿಯಾಕ್ಕೆ ಹೋಗುತ್ತಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ತಾನು ಸಿರಿಯಾಗೆ ತೆರಳುತ್ತಿದ್ದೇನೆ ಎಂದು ಟೆಡ್ರೊಸ್ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸುವ ಕೆಲಸದಲ್ಲಿ WHO ತೊಡಗಿಸಿಕೊಂಡಿದೆ.


    ಇದನ್ನೂ ಓದಿ: Earthquake in Turkey: ಟರ್ಕಿ-ಸಿರಿಯಾದಲ್ಲಿ ಭೂಕಂಪ, ಪರಿಹಾರ ಕಾರ್ಯಕ್ಕೆ ₹10 ಕೋಟಿ ನೆರವು ಘೋಷಿಸಿದ ಕೇರಳ ಸರ್ಕಾರ


    2. ಭೂಕಂಪದ ನಂತರ ಈಗ ಕೊರೆಯುವ ಚಳಿ ಕಾಡಲಾರಂಭಿಸಿದೆ. ಸಾವಿರಾರು ಮಂದಿ ಕಟ್ಟಡದ ಅವಶೇಷಗಳಡಿ ಹೂತುಹೋಗಿದ್ದಾರೆ. ಇವರ ಹುಡುಕಾಟಕ್ಕೆ ಈಗ ಚಳಿ ಅಡ್ಡಿಯಾಗಿದೆ. ಚಳಿಯಿಂದಾಗಿ, ಭೂಕಂಪನ ಸಂತ್ರಸ್ತರ ಜೀವ ಈಗ ಅಪಾಯದಲ್ಲಿದೆ. ಸಾವಿರಾರು ಮಂದಿ ಶೂನ್ಯ ತಾಪಮಾನದಲ್ಲಿ ಯಾವುದೇ ಆಶ್ರಯವಿಲ್ಲದೆ ಬಯಲಿನಲ್ಲಿ ವಾಸಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇವರಿಗೆ ನೀರು ಕೂಡಾ ಸಿಗುತ್ತಿಲ್ಲ.


    3. ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ಸಾವಿನ ಸಂಖ್ಯೆ 2011 ರಲ್ಲಿ ಜಪಾನ್ ಬಳಿ ಸಂಭವಿಸಿದ ಭೂಕಂಪದ ಸಾವಿನ ಸಂಖ್ಯೆಯನ್ನು ಮೀರಿದೆ. ಅಂದಿನ ಭೂಕಂಪದ ಪರಿಣಾಮವಾಗಿ ಸುನಾಮಿ ಸಂಭವಿಸಿ ಬಂದು 18,400 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.


    4. ದಕ್ಷಿಣ ಟರ್ಕಿಯ ಅಂಟಾಕ್ಯಾ ನಗರದ ಆಸ್ಪತ್ರೆಯ ಕಾರ್ ಪಾರ್ಕಿಂಗ್ ಸ್ಥಳದಲ್ಲಿ, ಜನರು ತಮ್ಮ ಸಂಬಂಧಿಕರ ಶವಗಳನ್ನು ಬಾಡಿ ಬ್ಯಾಗ್‌ಗಳಲ್ಲಿ ಹಾಕಿ, ಕಾಣೆಯಾದ ಇತರ ಸಂಬಂಧಿಕರನ್ನು ಹುಡುಕಲು ಪ್ರಾರಂಭಿಸಿದರು. ಇದರಿಂದ ಭೂಕಂಪದಿಂದ ಆಗಿರುವ ಹಾನಿಯನ್ನು ಅಂದಾಜಿಸಬಹುದು.


    Turkey earthquake Here is the Danger zones in India.
    ಟರ್ಕಿ ಮತ್ತು ಸಿರಿಯಾ ಭೂಕಂಪ


    5. ಏತನ್ಮಧ್ಯೆ, ಭೂಕಂಪದ ನಂತರ ಮೊದಲ ಬಾರಿಗೆ, ಸಿರಿಯನ್ ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಸಿರಿಯಾಕ್ಕೆ ಸಹಾಯದ ಬೆಂಗಾವಲು ಪಡೆ ತಲುಪಿದೆ. ಬಾಬ್ ಅಲ್-ಹವಾ ಗಡಿಯಲ್ಲಿನ ಅಧಿಕಾರಿಯೊಬ್ಬರು ಇದು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರು ಸಹಾಯವನ್ನು ತಲುಪಿಸಲು ಟರ್ಕಿ ಮತ್ತು ಸಿರಿಯಾ ನಡುವೆ ಹೊಸ ಟ್ರಾನ್ಸ್-ಬಾರ್ಡರ್ ಮಾನವೀಯ ನೆರವು ಮಾರ್ಗಗಳನ್ನು ತೆರೆಯಲು ಭದ್ರತಾ ಮಂಡಳಿಯನ್ನು ಒತ್ತಾಯಿಸಿದ್ದಾರೆ.


    ಇದನ್ನೂ ಓದಿ:  Turkey Earthquake: ಟರ್ಕಿ ಭೂಕಂಪದಲ್ಲಿ 48 ಗಂಟೆ ಹೋರಾಡಿ ಬದುಕಿದ ಕಂದಮ್ಮ, ಬಾಯಿಯಲ್ಲಿ ಬೆರಳಿಟ್ಟುಕೊಂಡು ಸಾವನ್ನೇ ಗೆದ್ದ 2 ತಿಂಗಳ ಹಸುಳೆ!


    6. ಸುಮಾರು ಒಂದು ದಶಕದ ಹಿಂದೆ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಅನುಮೋದಿಸಿದ ಗಡಿಯಾಚೆಗಿನ ನೆರವು ಕಾರ್ಯಾಚರಣೆಯ ಭಾಗವಾಗಿ ವಾಯುವ್ಯ ಸಿರಿಯಾದ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ವಾಸಿಸುವ ನಾಲ್ಕು ಮಿಲಿಯನ್ ಜನರು ಬಾಬ್ ಅಲ್-ಹವಾ ಕ್ರಾಸಿಂಗ್ ಅನ್ನು ಅವಲಂಬಿಸಬೇಕಾಯಿತು. ಇದು ಒಗ್ಗಟ್ಟು ಪ್ರದರ್ಶಿಸುವ ಸಮಯ, ರಾಜಕೀಯ ಮಾಡುವ ಅಥವಾ ವಿಭಜನೆ ಮಾಡುವ ಸಮಯವಲ್ಲ ಎಂದು ಗುಟೆರಸ್ ಹೇಳಿದ್ದಾರೆ. ಹೀಗಾಗಿ ಬೃಹತ್ ಸಹಾಯದ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ.


    7. ದುರಂತವನ್ನು ಎದುರಿಸಲು ಸರ್ಕಾರದ ಪ್ರಯತ್ನಗಳಲ್ಲಿ ಹಲವು ನ್ಯೂನತೆಗಳಿವೆ ಎಂದು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಬುಧವಾರ ಒಪ್ಪಿಕೊಂಡಿದ್ದಾರೆ. ಸೋಮವಾರದ ಭೂಕಂಪವು 1939 ರ ನಂತರ ಟರ್ಕಿಯಲ್ಲಿ ಸಂಭವಿಸಿದ ಅತಿದೊಡ್ಡ ಭೂಕಂಪವಾಗಿದೆ. ಪೂರ್ವ ಎರ್ಜಿಂಕನ್ ಪ್ರಾಂತ್ಯದಲ್ಲಿ 33,000 ಜನರು ಕೊಲ್ಲಲ್ಪಟ್ಟರು.


    8. ಸೋಮವಾರದ 7.8 ತೀವ್ರತೆಯ ಭೂಕಂಪದಲ್ಲಿ ಟರ್ಕಿಯಲ್ಲಿ 17,674 ಮತ್ತು ಸಿರಿಯಾದಲ್ಲಿ 3,377 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮತ್ತು ವೈದ್ಯಕೀಯ ಕಾರ್ಯಕರ್ತರು ತಿಳಿಸಿದ್ದಾರೆ, ಒಟ್ಟು ಸಾವಿನ ಸಂಖ್ಯೆ 21,051 ಕ್ಕೆ ತಲುಪಿದೆ. ಈ ಸಂಖ್ಯೆಯು ವೇಗವಾಗಿ ಏರುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ದುರಂತವನ್ನು ನಿಭಾಯಿಸುವ ಸರ್ಕಾರದ ವಿಧಾನದ ಬಗ್ಗೆ ಜನರ ಆಕ್ರೋಶ ಭುಗಿಲೆದ್ದಿದೆ.


    9. ಭೂಕಂಪದಲ್ಲಿ ಸಾಯದವರನ್ನು ಚಳಿಯಲ್ಲಿ ಸಾಯಲು ಬಿಡಲಾಗಿದೆ ಎಂದು ಜನರು ಹೇಳಿದ್ದಾರೆ. ಎಲ್ಲಾ ತೊಂದರೆಗಳ ಹೊರತಾಗಿಯೂ, ಸಾವಿರಾರು ಸ್ಥಳೀಯ ಮತ್ತು ವಿದೇಶಿ ಶೋಧಕರು ಬದುಕುಳಿದವರ ಹುಡುಕಾಟವನ್ನು ನಿಲ್ಲಿಸಿಲ್ಲ. ಜೀವಗಳನ್ನು ಉಳಿಸಲು ಮೊದಲ 72 ಗಂಟೆಗಳು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ತಜ್ಞರ ಪ್ರಕಾರ ಯಾವುದೇ ನೈಸರ್ಗಿಕ ವಿಕೋಪದ ಮೊದಲ 24 ಗಂಟೆಗಳಲ್ಲಿ ಸರಾಸರಿ ಬದುಕುಳಿಯುವ ಅನುಪಾತವು 74%, 72 ಗಂಟೆಗಳ ನಂತರ ಅದು 22% ಮತ್ತು ಐದನೇ ದಿನ ಅದು 6% ಆಗಿದೆ.




      • .







    10. ಚೀನಾ ಮತ್ತು ಯುಎಸ್ ಸೇರಿದಂತೆ ಹತ್ತಾರು ದೇಶಗಳು ಟರ್ಕಿ ಮತ್ತು ಸಿರಿಯಾದ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡುವ ವಾಗ್ದಾನ ಮಾಡಿವೆ. ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು ಟರ್ಕಿಗೆ $ 1.78 ಶತಕೋಟಿ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್ ಹೇಳಿದೆ. ಟರ್ಕಿಯಲ್ಲಿ ಅಸ್ತಿತ್ವದಲ್ಲಿರುವ ಎರಡು ಯೋಜನೆಗಳಿಂದ $780 ಮಿಲಿಯನ್ ತಕ್ಷಣದ ಸಹಾಯವನ್ನು ನೀಡುವುದಾಗಿ ವಿಶ್ವ ಬ್ಯಾಂಕ್ ಹೇಳಿದೆ. ಪರಿಹಾರ ಮತ್ತು ಪುನರ್ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ $ 1 ಬಿಲಿಯನ್ ನೀಡಲಾಗುತ್ತದೆ.

    Published by:Precilla Olivia Dias
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು