• Home
  • »
  • News
  • »
  • national-international
  • »
  • Queen Cleopatra: ಈಜಿಪ್ಟಿನ ದೇವಾಲಯದ ಕೆಳಗೆ ಸುರಂಗ ಪತ್ತೆ, ಕ್ಲಿಯೋಪಾತ್ರಳ ಸಮಾಧಿಯ ಮಹತ್ವದ ಸುಳಿವು!

Queen Cleopatra: ಈಜಿಪ್ಟಿನ ದೇವಾಲಯದ ಕೆಳಗೆ ಸುರಂಗ ಪತ್ತೆ, ಕ್ಲಿಯೋಪಾತ್ರಳ ಸಮಾಧಿಯ ಮಹತ್ವದ ಸುಳಿವು!

ಪತ್ತೆಯಾದ ಸುರಂಗ

ಪತ್ತೆಯಾದ ಸುರಂಗ

ಪ್ರಾಚೀನ ಈಜಿಪ್ಟ್ ರಾಜಧಾನಿ ಅಲೆಕ್ಸಾಂಡ್ರಿಯಾದ ಬಳಿ ಇರುವ ದೇವಾಲಯದೊಳಗೆ ಕ್ಲಿಯೋಪಾತ್ರ ಮತ್ತು ಅವಳ ಪ್ರೇಮಿ ಮಾರ್ಕ್ ಆಂಟೋನಿಯನ್ನು ಸಮಾಧಿ ಮಾಡಲಾಗಿದೆ ಎಂದು ಡಾ. ಕ್ಯಾಥ್ಲೀನ್ ಮಾರ್ಟಿನೆಜ್ ನಂಬಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಪುರಾತತ್ವಶಾಸ್ತ್ರಜ್ಞರು ಈಜಿಪ್ಟ್‌ನ ಅತ್ಯಂತ ಹಳೆಯ ಟಪೋಸಿರಿಸ್ ಮ್ಯಾಗ್ನಾ ದೇವಾಲಯದ (Taposiris Magna Temple) ಕೆಳಗೆ ಸುರಂಗವನ್ನು (Tunnel)  ಪತ್ತೆಹಚ್ಚಿದ್ದಾರೆ. ಇದು 51 ರಿಂದ 30 B.C.E ವರೆಗೆ ಟಾಲೆಮಿಕ್ ಈಜಿಪ್ಟ್‌ನ ಕೊನೆಯ ಫೇರೋ, ಪ್ರಸಿದ್ಧ ರಾಣಿ ಕ್ಲಿಯೋಪಾತ್ರದ (Famous Queen Cleopatra) ಕಳೆದುಹೋದ ಸಮಾಧಿ ಪತ್ತೆ ಹಚ್ಚುವಿಕೆಗೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಡಾ. ಕ್ಯಾಥ್ಲೀನ್ ಮಾರ್ಟಿನೆಜ್ ನೇತೃತ್ವದ ಸ್ಯಾನ್ ಡೊಮಿಂಗೊ ​​ವಿಶ್ವವಿದ್ಯಾನಿಲಯದ ಈಜಿಪ್ಟಿನ ಡೊಮಿನಿಕನ್ ಪುರಾತತ್ತ್ವ ಶಾಸ್ತ್ರದ ಮಿಷನ್ ಈ ಉತ್ಖನವನ್ನು ನಡೆಸಿದೆ.


ಭೂಪ್ರದೇಶದ ಪ್ರದೇಶದಲ್ಲಿನ ಕಾರ್ಯಾಚರಣೆಯ ಸಮಯದಲ್ಲಿ ನೆಲದಿಂದ ಸುಮಾರು 13 ಮೀಟರ್ ಆಳದಲ್ಲಿ ಬಂಡೆಯಲ್ಲಿ ಕೆತ್ತಿದ ಸುರಂಗವನ್ನು ಪತ್ತೆಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ. ಈಜಿಪ್ಟ್‌ನ ಪುರಾತನ ಟಪೋಸಿರಿಸ್ ಮ್ಯಾಗ್ನಾ ದೇವಾಲಯದ ಕೆಳಗೆ ಇರುವ ಗ್ರೀಕೋ-ರೋಮನ್ ರಾಕ್-ಕಟ್ ಸುರಂಗವು 2,000 ಕ್ಕಿಂತಲೂ ಹಿಂದಿನದು ಎಂದು ಪುರಾತತ್ತ್ವಜ್ಞರು ಹೇಳಿದ್ದಾರೆ. ಈ ಮೂಲಕ ಸುರಂಗವು ಬಹುಶಃ ಕ್ಲಿಯೋಪಾತ್ರಳ ಸಮಾಧಿಗೆ ದಾರಿ ಮಾಡಿಕೊಡಬಹುದು ಎಂದು ಹೇಳಲಾಗುತ್ತಿದೆ.


ಜ್ಯಾಮಿತಿಯ ಪವಾಡ
ಈಜಿಪ್ಟ್‌ನ ಪ್ರವಾಸೋದ್ಯಮ ಮತ್ತು ಪುರಾತನ ಸಚಿವಾಲಯವು ಕಳೆದ ವಾರ ಈ ಶೋಧವನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ ಸುರಂಗವು ಆರು ಅಡಿ ಎತ್ತರದಲ್ಲಿದೆ. ಸುಮಾರು ಒಂದು ಮೈಲಿವರೆಗೆ ವ್ಯಾಪಿಸಿದೆ. ಇದನ್ನು ಪುರಾತತ್ತ್ವಜ್ಞರು "ಜ್ಯಾಮಿತಿಯ ಪವಾಡ" ಎಂದು ಕರೆದಿದ್ದಾರೆ. ಪುರಾತತ್ವಶಾಸ್ತ್ರಜ್ಞರು ಪತ್ತೆಯಾದ ಈ ಸುರಂಗವು ಪ್ರಾಚೀನ ಕಾಲದ ಇಂಜಿನಿಯರಿಂಗ್ ಅದ್ಭುತಗಳೆಂದು ಪರಿಗಣಿಸಲಾದ ಸಮೋಸ್‌ನ ಗ್ರೀಕ್ ದ್ವೀಪದಲ್ಲಿರುವ ಯುಪಾಲಿನೋಸ್ ಸುರಂಗವನ್ನು ಹೋಲುತ್ತದೆ ಎಂದಿದ್ದಾರೆ.


ಕ್ಲಿಯೋಪಾತ್ರಳ ಸಮಾಧಿ ಪತ್ತೆ ಮೂಡಿದ ಆಶಾಕಿರಣ
ಪ್ರಾಚೀನ ಈಜಿಪ್ಟ್ ರಾಜಧಾನಿ ಅಲೆಕ್ಸಾಂಡ್ರಿಯಾದ ಬಳಿ ಇರುವ ದೇವಾಲಯದೊಳಗೆ ಕ್ಲಿಯೋಪಾತ್ರ ಮತ್ತು ಅವಳ ಪ್ರೇಮಿ ಮಾರ್ಕ್ ಆಂಟೋನಿಯನ್ನು ಸಮಾಧಿ ಮಾಡಲಾಗಿದೆ ಎಂದು ಡಾ. ಕ್ಯಾಥ್ಲೀನ್ ಮಾರ್ಟಿನೆಜ್ ನಂಬಿದ್ದಾರೆ. ಕ್ಲಿಯೋಪಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ರೋಮನ್ ಜನರಲ್ ಮಾರ್ಕ್ ಆಂಟೋನಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ ಮತ್ತು ಇಬ್ಬರನ್ನು ಒಟ್ಟಿಗೆ ಸಮಾಧಿ ಮಾಡಲಾಗಿದೆ ಎಂದು ರೋಮನ್‌ ಪುರಾಣಗಳು ಹೇಳಿವೆ.


ಬ್ರಿಟಿಷ್ ಪತ್ರಿಕೆ ದಿ ಟೆಲಿಗ್ರಾಫ್ ಪ್ರಕಾರ ಡಾ. ಕ್ಯಾಥ್ಲೀನ್ ಮಾರ್ಟಿನೆಜ್ ಅವರು ಸಮಾಧಿ ಸ್ಥಳದ ಬಗ್ಗೆ ಅವರ ಸಿದ್ಧಾಂತವು ನಿಜವಾಗಿದ್ದರೆ ಅದು "21 ನೇ ಶತಮಾನದ ಅತ್ಯಂತ ಪ್ರಮುಖ ಆವಿಷ್ಕಾರ" ಎಂದು ವರದಿ ಮಾಡಿದೆ.


10 ವರ್ಷಗಳಿಂದ ನಡೆಯುತ್ತಿರುವ ಅಧ್ಯಯನ
"ಕ್ಲಿಯೋಪಾತ್ರಳ ಐತಿಹಾಸಿಕ ಪಾತ್ರದ 10 ವರ್ಷಗಳ ಅಧ್ಯಯನದ ಪರಿಣಾಮವಾಗಿ, ಈ ದೇವಾಲಯದ ಅವಶೇಷಗಳನ್ನು ನೋಡಲು ನಾನು ಈಜಿಪ್ಟ್‌ಗೆ ಬಂದಿದ್ದೆ. ಈ ಅವಶೇಷಗಳು ಕ್ಲಿಯೋಪಾತ್ರದ ಕಳೆದುಹೋದ ಸಮಾಧಿಯಾಗುವ ಸಾಧ್ಯತೆಯಿದೆ ಎಂದು ಖಚಿತಪಡಿಸಿಕೊಳ್ಳಲು ನಾನು ಇಲ್ಲಿ ಉತ್ಖನಕ್ಕೆ ಇಳಿದೆ" ಎಂದು ಕ್ಯಾಥ್ಲೀನ್ ಮಾರ್ಟಿನೆಜ್ ವಿಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Pakistan: ಪಾಕ್‌ ಸೇನೆಗೆ ಹೊಸ ಸಾರಥಿ: ಲೆಫ್ಟಿನೆಂಟ್ ಜನರಲ್ ಅಸೀಮ್ ಮುನೀರ್ ನೂತನ ಸೇನಾ ಮುಖ್ಯಸ್ಥರಾಗಿ ನೇಮಕ


"ಇಲ್ಲಿ ಅಧ್ಯಯನ ಮಾಡುವ ವೇಳೆ ಕ್ಲಿಯೋಪಾತ್ರಳ ಸಮಾಧಿಗೆ ಇದು ಪರಿಪೂರ್ಣ ಸ್ಥಳವೆಂದು ನಾನು ಅರಿತುಕೊಂಡೆ. ಈಜಿಪ್ಟ್‌ನ ಕೊನೆಯ ರಾಣಿಯ ಸಮಾಧಿಯನ್ನು ಪತ್ತೆಹಚ್ಚುವುದು ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ ಎಂದಿದ್ದಾರೆ.


ಸಮಾಧಿ ಸ್ಥಳದ ಹುಡುಕಾಟ
ಕ್ರಿ.ಪೂ. 30 ರಿಂದ ಮಾರ್ಕ್ ಆಂಟೋನಿ ಮತ್ತು ಕ್ಲಿಯೋಪಾತ್ರ VII ರ ಸಮಾಧಿ ಸ್ಥಳ ರಹಸ್ಯವಾಗಿದ್ದು, ಇದುವರೆಗೂ ಕಳೆದುಹೋದ ಸಮಾಧಿಯು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದ ಬಳಿ ಎಲ್ಲೂ ಪತ್ತೆಯಾಗಿಲ್ಲ. ಕಳೆದ 14 ವರ್ಷಗಳಿಂದ ಕ್ಯಾಥ್ಲೀನ್ ಮಾರ್ಟಿನೆಜ್ ಮತ್ತು ಅವರ ತಂಡವು ನಡೆಸಿದ ಉತ್ಖನನಗಳು ಈಜಿಪ್ಟಿನ ಗಣ್ಯರ 27 ಸಮಾಧಿಗಳಲ್ಲಿ ಹತ್ತು ಮಮ್ಮಿಗಳನ್ನು ಪತ್ತೆ ಹಚ್ಚಿವೆ. ಕ್ಲಿಯೋಪಾತ್ರಳ ಚಿತ್ರಗಳನ್ನು ಹೊಂದಿರುವ ನಾಣ್ಯಗಳು ಮತ್ತು ಅವಳನ್ನು ಮತ್ತು ಆಂಟೋನಿಯನ್ನು ಅಪ್ಪಿಕೊಳ್ಳುತ್ತಿರುವ ಕೆತ್ತನೆಗಳನ್ನು ಅವರಿಗೆ ಲಭಿಸಿವೆ. ಆದರೆ ಸಮಾಧಿ ಸ್ಥಳದ ಹುಡುಕಾಟ ಮಾತ್ರ ಇನ್ನೂ ನಡೆಯುತ್ತಿದೆ.


ಇದನ್ನೂ ಓದಿ: Air India: ಬಿಳಿ ಕೂದಲಿರೋ ಪುರುಷರು ಫುಲ್ ಬಾಲ್ಡ್ ಮಾಡ್ಕೊಳ್ಳಿ, ಮಹಿಳೆಯರು ಬಳೆ ಕಡಿಮೆ ಹಾಕಿ! ಏರ್ ಇಂಡಿಯಾ ಸಿಬ್ಬಂದಿಗೆ ಹೊಸ ರೂಲ್ಸ್


ಲೈವ್ ಸೈನ್ಸ್ ಪ್ರಕಾರ, ಕ್ಲಿಯೋಪಾತ್ರ ಸುಮಾರು 300 ವರ್ಷಗಳ ಕಾಲ ಪ್ರಾಚೀನ ಈಜಿಪ್ಟ್ ಅನ್ನು ಆಳಿದ ಟಾಲೆಮಿಸ್ ಎಂದು ಕರೆಯಲ್ಪಡುವ ಆಡಳಿತಗಾರರ ಸರಣಿಯಲ್ಲಿ ಕೊನೆಯವರು. ಅವಳು ಈಜಿಪ್ಟ್, ಸೈಪ್ರಸ್, ಆಧುನಿಕ ಲಿಬಿಯಾದ ಭಾಗ ಮತ್ತು ಮಧ್ಯಪ್ರಾಚ್ಯದ ಇತರ ಪ್ರದೇಶಗಳನ್ನು ಒಳಗೊಂಡ ಸಾಮ್ರಾಜ್ಯದಲ್ಲಿ ದಕ್ಷತೆಯಿಂದ ಆಳ್ವಿಕೆ ನಡೆಸಿದ್ದರು.

Published by:ಗುರುಗಣೇಶ ಡಬ್ಗುಳಿ
First published: