ತಿರುಪತಿ ದೇಗುಲದ 44 ಮಂದಿ ಹಿಂದೂಯೇತರ ನೌಕರರಿಗೆ ಶೋಕಾಸ್ ನೋಟಿಸ್ ಕಳುಹಿಸಿದ ಟಿಟಿಡಿ


Updated:January 31, 2018, 7:53 PM IST
ತಿರುಪತಿ ದೇಗುಲದ 44 ಮಂದಿ ಹಿಂದೂಯೇತರ ನೌಕರರಿಗೆ ಶೋಕಾಸ್ ನೋಟಿಸ್ ಕಳುಹಿಸಿದ ಟಿಟಿಡಿ
ತಿರುಪತಿ ತಿರುಮಲ ದೇವಸ್ಥಾನ

Updated: January 31, 2018, 7:53 PM IST
ತಿರುಪತಿ(ಜ.31): ಚರ್ಚ್​ಗೆ ಭೇಟಿ ನೀಡಿದ್ದ ತಿರುಪತಿ ದೇವಸ್ಥಾನದ 44 ಹಿಂದೂಯೇತರ ನೌಕರರಿಗೆ ಟಿಟಿಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಹಿಂದೂಯೇತರರಾದ ನಿಮ್ಮನ್ನ ನೇಮಕ ಮಾಡಿಕೊಂಡಿರುವುದು ನಮ್ಮ ದೇವಸ್ಥಾನದ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ನಿಮ್ಮ ನೇಮಕಾತಿಯನ್ನ ರದ್ದುಮಾಡಬಾರದೇಕೆ..? ಎಂದು ಶೋಕಾಸ್ ನೋಟಿಸ್​​ನಲ್ಲಿ ಕೇಳಲಾಗಿದ್ದು, 3 ವಾರಗಳಲ್ಲಿ ವಿವರಣೆ ನೀಡುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಸರನ್ನೇಳಲು ಇಚ್ಚಿಸದ ನೌಕರನೊಬ್ಬ, `ನನ್ನ ಕುಟುಂಬ ಪೂರ್ತಿ ನನ್ನ ಉದ್ಯೋಗದ ಮೇಲೆ ಅವಲಂಬಿತವಾಗಿದೆ. ಏಕಾಏಕಿ ಕೆಲಸದಿಂದ ತೆಗೆದರೆ ಜೀವನ ಸಾಗಿಸುವುದು ಹೇಗೆ..? ನನ್ನ ಪೂರ್ಣ ಕುಟುಂಬ ಕಳೆದ ಕೆಲ ವರ್ಷಗಳಿಂದ ಹಿಂದೂ ಧರ್ಮವನ್ನ ಪಾಲನೆ ಮಾಡುತ್ತಿದೆ ಎಂದು ಹೇಳಿದ್ದಾರೆ.

`ನಿಮ್ಮ ವೃತ್ತಿ ದಾಖಲೆಗಳ ಪರಿಶೀಲನೆ ವೇಳೆ ನೀವು ಕ್ರಿಶ್ಚಿಯನ್ ಧರ್ಮದವರೆಮದು ತಿಳಿದು ಬಂದಿದೆ. ಇದು ನಮ್ಮ ದೇವಸ್ಥಾನದ ನಿಯಮಗಳಿಗೆ ವಿರುದ್ಧವಾಗಿದೆ. ನಿಮ್ಮನ್ನ ದೇವಸ್ಥಾನದಲ್ಲಿ ನೇಮಕ ಮಾಡಿಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ. ನಿಮ್ಮ ವಿರುದ್ಧ ಟಟಿಡಿ ಶಿಸ್ತುಕ್ರಮ ಜರುಗಿಸಬಾರದೇಕೆ..? ಎಂಬ ಬಗ್ಗೆ 3 ವಾರಗಳಲ್ಲಿ ವಿವರಣೆ ನೀಡುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಟಿಟಿಡಿ ಮಹಿಳಾ ಅಧಿಕಾರಿಯೊಬ್ಬರು ದೇವಸ್ಥಾನಕ್ಕೆ ಸೇರಿದ ಕಾರಿನಲ್ಲೇ ಚರ್ಚ್​ಗೆ ತೆರಳಿ ಪ್ರಾರ್ಥನೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಿರುಪತಿ ದೇಗುಲದಲ್ಲಿ ಹಿಂದೂಯೇತರರು ಕೆಲಸ ಮಾಡುತ್ತಿರುವ ಬಗ್ಗೆ ಆಕ್ಷೇಪ ಕೇಳಿಬಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ನೌಕರ, ನಾನು ಹಿಂದೂ ಎಂಬುದನ್ನ ಸಾಬೀತುಪಡಿಸುವುದಕ್ಕೆ ನನ್ನ ಬಳಿ ದಾಖಲೆಗಳಿವೆ. ಹಿಂದೂ ಧಾರ್ಮಿಕ ವಿಧಿವಿಧಾನದಲ್ಲೇ ನನ್ನ ಮಕ್ಕಳ ಕಾರ್ಯಕ್ರಮಗಳನ್ನ ಮಾಡುತ್ತಿದ್ದೇನೆ. ನನ್ನಲ್ಲಿರುವ ಮಾಹಿತಿಗಳನ್ನ ಆಧರಿಸಿ ನೋಟಿಸ್​ಗೆ ರಿಪ್ಲೆ ನೀಡುವುದಾಗಿ ತಿಳಿಸಿದ್ದಾರೆ.

ಈ ಮಧ್ಯೆ, ಕೆಲಸದಿಂದ ವಜಾ ಮಾಡಿದರೂ ರಾಜ್ಯ ಸರ್ಕಾರದ ಬೇರೆ ಇಲಾಖೆಗಳಿಗೆ ನಿಯೋಜಿಸುವುದಾಗಿ ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ನೌಕರರಿಗೆ ಭರವಸೆ ನೀಡಿದೆ.
First published:January 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...