• Home
  • »
  • News
  • »
  • national-international
  • »
  • Tirupati: ಕಲಿಯುಗದ ವೈಕುಂಠದಲ್ಲಿ ರಾಶಿ ರಾಶಿ ಸಂಪತ್ತು! ತಿರುಪತಿ ತಿಮ್ಮಪ್ಪನ ಒಟ್ಟು ಆಸ್ತಿ ಎಷ್ಟು ಗೊತ್ತಾ?

Tirupati: ಕಲಿಯುಗದ ವೈಕುಂಠದಲ್ಲಿ ರಾಶಿ ರಾಶಿ ಸಂಪತ್ತು! ತಿರುಪತಿ ತಿಮ್ಮಪ್ಪನ ಒಟ್ಟು ಆಸ್ತಿ ಎಷ್ಟು ಗೊತ್ತಾ?

ತಿರುಪತಿ ತಿರುಮಲ

ತಿರುಪತಿ ತಿರುಮಲ

ಪ್ರತಿ ನಿತ್ಯ ಲಕ್ಷಾಂತರ ಭಕ್ತರಿಂದ ಪೂಜೆಗೊಳ್ಳುವ ತಿಮ್ಮಪ್ಪನು ಚಿನ್ನ, ಬೆಳ್ಳಿ, ವಜ್ರ ವೈಢೂರ್ಯ, ಅಮೂಲ್ಯ ಆಭರಣಗಳಿಂದ ಶೋಭಿಸುತ್ತಾನೆ. ಹಾಗಾದ್ರೆ ತಿಮ್ಮಪ್ಪನ ಖಜಾನೆಯಲ್ಲಿರುವ ಸಂಪತ್ತು ಎಷ್ಟು ಎನ್ನುವ ಮಾಹಿತಿ ಇಲ್ಲಿದೆ ಓದಿ…

  • News18 Kannada
  • Last Updated :
  • Tirupati, India
  • Share this:

ತಿರುಪತಿ: ‘ಕಲಿಯುಗದ ವೈಕುಂಠ’ (Vaikuntha) ಅಂತಾನೇ ಕರೆಯಲ್ಪಡುವ ತಿರುಪತಿಯು ತಿಮ್ಮಪ್ಪನ ಆವಾಸ ಸ್ಥಾನ. ಪದ್ಮಾವತಿ (Padmavathi) ಸಮೇತನಾಗಿ ತಿರುಪತಿಯಲ್ಲಿ ನೆಲೆಗೊಂಡಿರುವ ಸ್ವಾಮಿ ಶ್ರೀನಿವಾಸ ಅತ್ಯಂತ ಶ್ರೀಮಂತ ದೇವರು! ಪ್ರತಿ ನಿತ್ಯ ಲಕ್ಷಾಂತರ ಭಕ್ತರಿಂದ ಪೂಜೆಗೊಳ್ಳುವ ಶ್ರೀವಾರಿಯು ನಗದು ಹಣ, ಚಿನ್ನ, ಬೆಳ್ಳಿ, ವಜ್ರ ವೈಢೂರ್ಯ, ಅಮೂಲ್ಯ ಆಭರಣಗಳಿಂದ ಶೋಭಿಸುತ್ತಾನೆ. ಭಾರತದ ಅತ್ಯಂತ ಶ್ರೀಮಂತ ದೇಗುಲ (Richest Temple in India) ತಿರುಪತಿ ತಿಮ್ಮಪ್ಪನ (Tirupati Timmappa) ಖಜಾನೆ ಮತ್ತಷ್ಟು ತುಂಬುತ್ತಾ ಇದೆ. ಇಲ್ಲಿ ಭಕ್ತರು (Devotees) ಮಳೆ, ಚಳಿ, ಬಿಸಿಲು ಎನ್ನದೇ ಭೇಟಿ (Visit) ನೀಡುತ್ತಲೇ ಇರುತ್ತಾರೆ.


ಹರಕೆ ರೂಪದಲ್ಲಿ ದಾನ ಕೊಡುವ ಭಕ್ತರು


“ನಮ್ಮ ಕಷ್ಟ ಕಳಿಯಪ್ಪಾ ದೇವರೇ” ಅಂತ ಪ್ರಾರ್ಥಿಸಿ (Prayer) ಹರಕೆ ಕಟ್ಟಿಕೊಳ್ಳುತ್ತಾರೆ. ಆ ಪ್ರಾರ್ಥನೆ ಈಡೇರಿದ ಬಳಿಕ ಹರಕೆ ರೂಪದಲ್ಲಿ ಹಣ (Money), ಚಿನ್ನ (Gold), ಬೆಳ್ಳಿ (Silver) ಇತ್ಯಾದಿ ಆಭರಣ (Jewelry) ದೇವರ ಹುಂಡಿಗೆ ಹಾಕಿ, ಪೂಜೆ ಸಲ್ಲಿಸ್ತಾರೆ. ಜೊತೆಗೆ ಕೆಲವರು ಕೂದಲು (Hair) ದಾನ (Donate) ಮಾಡುತ್ತಾರೆ. ಹೀಗೆ ವಿವಿಧ ಮೂಲಗಳಿಂದ ಮೇ ತಿಂಗಳಲ್ಲಿ ತಿಮ್ಮಪ್ಪನ ಖಜಾನೆ ತುಂಬಿ ಹೋಗಿದ್ಯಂತೆ. ಹಾಗಾದ್ರೆ ತಿಮ್ಮಪ್ಪನ ಖಜಾನೆಯಲ್ಲಿರುವ ಸಂಪತ್ತು ಎಷ್ಟು ಎನ್ನುವ ಮಾಹಿತಿ ಇಲ್ಲಿದೆ ಓದಿ…


ತಿರುಪತಿ ತಿಮ್ಮಪ್ಪನ ಆಸ್ತಿ ಬಗ್ಗೆ ಟಿಟಿಡಿ ಶ್ವೇತಪತ್ರ


ತಿರುಪತಿ ತಿಮ್ಮಪ್ಪನ ದೇಗುಲದ ಆಡಳಿತ ನೋಡಿಕೊಳ್ಳುತ್ತಿರುವ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ (TTD) ತಿಮ್ಮಪ್ಪನ ಆಸ್ತಿ ಕುರಿತಂತೆ ಶ್ವೇತಪತ್ರ ಹೊರಡಿಸಿದೆ. ಶ್ರೀವಾರಿಯ ಖಜಾನೆಯಲ್ಲಿ ನಗದು ಹಣ, ಚಿನ್ನ, ವಜ್ರ, ಅಮೂಲ್ಯವಾದ ಮುತ್ತು ರತ್ನ ಇದೆ ಅಂತ ಘೋಷಿಸಿದೆ. ಇತಿಹಾಸದ ಚಕ್ರವರ್ತಿಗಳು, ಜಮೀನ್ದಾರರಿಂದ ಹಿಡಿದು ಇಂದಿನ ಶ್ರೀಮಂತರು, ಸಾಮಾನ್ಯ ಭಕ್ತರು ದಾನ ನೀಡಿರುವ ಬಗ್ಗೆ ಶ್ವೇತಪತ್ರದಲ್ಲಿ ತಿಳಿಸಿದೆ.


ಇದನ್ನೂ ಓದಿ: Tirupati Tirumala: ತಿರುಪತಿ ದೇವಸ್ಥಾನ 12 ಗಂಟೆ ಬಂದ್


ಒಟ್ಟು 10,258.37 ಕೆಜಿ ಚಿನ್ನ!


ವಿವಿಧ ಬ್ಯಾಂಕ್‌ಗಳಲ್ಲಿ ತಿಮ್ಮಪ್ಪನ ಚಿನ್ನದ ಠೇವಣಿ ಒಟ್ಟು 10,258.37 ಕೆ.ಜಿ ಅಂತ ಟಿಟಿಡಿ ಹೇಳಿದೆ. ಈ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 9819.38 ಕೆ.ಜಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 438.99 ಕೆ.ಜಿ ಇಡಲಾಗಿದೆ ಅಂತ ಶ್ವೇತಪತ್ರದಲ್ಲಿ ತಿಳಿಸಲಾಗಿದೆ.


ವಿವಿಧ ಬ್ಯಾಂಕ್‌ಗಳಲ್ಲಿ 15,938 ಕೋಟಿ ರೂಪಾಯಿ ಠೇವಣಿ


ಕಳೆದ ಮೂರು ವರ್ಷಗಳಲ್ಲಿ ತಿರುಪತಿ ದೇಗುಲದ ಠೇವಣಿ ಏರಿಕೆಯಾಗಿದೆ. ತಿರುಪತಿ ತಿಮ್ಮಪ್ಪನ ನಗದು ಠೇವಣಿ ವಿವಿಧ ಬ್ಯಾಂಕ್‌ಗಳಲ್ಲಿ ಇವೆ, ಇದರ ಒಟ್ಟೂ ಮೌಲ್ಯ 15,938 ಕೋಟಿ ರೂಪಾಯಿ ಆಗಿದೆ. ಎಲ್ಲ ಬ್ಯಾಂಕ್‌ಗಳಲ್ಲಿ ರೂ.15,938 ಕೋಟಿ ಠೇವಣಿ, 10,258.37 ಕೆಜಿ ಚಿನ್ನವಿದೆ ಅಂತ ಟಿಟಿಡಿ ಹೇಳಿದೆ.


ಯಾವ ಬ್ಯಾಂಕ್‌ನಲ್ಲಿ ಎಷ್ಟೆಷ್ಟು ಠೇವಣಿ?


ಸೆಪ್ಟೆಂಬರ್ 30/2022 ಬ್ಯಾಂಕ್‌ಗಳಲ್ಲಿನ ಒಟ್ಟು ಠೇವಣಿ 15,938, 68 ಕೋಟಿ, ಈ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5358.11 ಕೋಟಿ, ಯೂನಿಯನ್ ಬ್ಯಾಂಕ್‌ನಲ್ಲಿ 1694.25 ಕೋಟಿ, ಬ್ಯಾಂಕ್ ಆಫ್ ಬರೋಡಾದಲ್ಲಿ 1839.36 ಕೋಟಿ, ಕೆನರಾ ಬ್ಯಾಂಕ್‌ನಲ್ಲಿ 1351 ಕೋಟಿ ರೂಪಾಯಿ, ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ 1006.20 ಕೋಟಿ, ಎಚ್‌ಡಿಎಫ್‌ಸಿಯಲ್ಲಿ 2122.85 ಕೋಟಿ ರೂಪಾಯಿ ಠೇವಣಿ ಇಡಲಾಗಿದೆ.


ಇದನ್ನೂ ಓದಿ: Tirupati: ಬರೋಬ್ಬರಿ 9.2 ಕೋಟಿ ಮೌಲ್ಯದ ಆಸ್ತಿ ದಾನ ಕೊಟ್ಟ ಅಜ್ಜಿ! ಸತ್ತ ಮೇಲೂ ತೀರಿತು ತಿಮ್ಮಪ್ಪನ ಹರಕೆ!


ವಿವಿಧ ಬ್ಯಾಂಕ್‌ಗಳಲ್ಲಿ ಹಣ


ಇನ್ನು ಭಾರತ ಸರ್ಕಾರದ ಬಾಂಡ್‌ಗಳು-555.17 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ 660.43 ಕೋಟಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 306.31 ಕೋಟಿ, ಇಂಡಿಯನ್ ಬ್ಯಾಂಕ್ 101.43 ಕೋಟಿ, ಸಪ್ತಗಿರಿ ಗ್ರಾಮೀಣ ಬ್ಯಾಂಕ್ 99.91 ಕೋಟಿ, ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ 18.54 ಕೋಟಿ, ಐಸಿಐಸಿಐ ಬ್ಯಾಂಕ್ 9.70 ಕೋಟಿ, ಕರೂರ್ ವೈಶ್ಯ ಬ್ಯಾಂಕ್ 4.31 ಕೋಟಿ, ಎಪಿ ರಾಜ್ಯ ಹಣಕಾಸು ನಿಗಮ 4.00 ಕೋಟಿ, ಎಪಿ ರಾಜ್ಯ ಸಹಕಾರಿ ಬ್ಯಾಂಕ್ 1.30 ಕೋಟಿ ಹಾಗೂ ಸೆಂಟ್ರಲ್ ಬ್ಯಾಂಕ್‌ನಲ್ಲಿ 1.28 ಕೋಟಿ ರೂಪಾಯಿ ಇಡಲಾಗಿದೆ ಅಂತ ಶ್ವೇತಪತ್ರದಲ್ಲಿ ತಿಳಿಸಲಾಗಿದೆ.

Published by:Annappa Achari
First published: