TTD Bans Plastic: ತಿರುಪತಿ ದರ್ಶನ ಮಾಡಬೇಕೇ? ಜೊತೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯಬೇಡಿ!
ಅಲಿಪಿರಿಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದ ನಂತರವೇ ಭಕ್ತರಿಗೆ ತಿರುಮಲಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ವ್ಯಾಪಾರ ಮಾಲೀಕರಿಗೆ ಬಟ್ಟೆ ಮತ್ತು ಆಟಿಕೆಗಳನ್ನು ಪ್ಯಾಕಿಂಗ್ ಮಾಡಲು ಜೈವಿಕ ವಿಘಟನೀಯ ಚೀಲಗಳನ್ನು ಬಳಸಲು ಸಲಹೆ ನೀಡಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನ (TTD) ತಿರುಮಲದಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದು (Plastic Ban Tirupati) ಜೂನ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಘೋಷಿಸಿದೆ. ತಿರುಮಲದಲ್ಲಿ ಅಂಗಡಿ ಮಾಲೀಕರು ಮತ್ತು ಹೋಟೆಲ್ ಆಡಳಿತ ಮಂಡಳಿಗಳೊಂದಿಗೆ ನಡೆದ ಸಭೆಯಲ್ಲಿ ಟಿಟಿಡಿ ಅಧಿಕಾರಿ ಮಲ್ಲಿಕಾರ್ಜುನ ಅವರು ಜೂನ್ 1ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ನ್ನು ತಿರುಮಲದಲ್ಲಿ ನಿಷೇಧಿಸಲಾಗುವುದು (Plastic Ban Tirumala) ಎಂದು ಘೋಷಿಸಿದರು. ಪ್ಲಾಸ್ಟಿಕ್, ಬಾಟಲಿಗಳು, ಚೀಲಗಳು ಮತ್ತು ಶಾಂಪೂ ಸ್ಯಾಚೆಟ್ಗಳು ಸೇರಿದಂತೆ ಎಲ್ಲ ರೀತಿಯ ಪ್ಲಾಸ್ಟಿಕ್ಗಳನ್ನೂ (TTD Bans Plastic) ಸಹ ತಿರುಮಲದಲ್ಲಿ ನಿಷೇಧಿಸಲಾಗಿದೆ.
ನಿಷೇಧಾಜ್ಞೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಟಿಟಿಡಿಯೊಂದಿಗೆ ಸಹಕರಿಸುವಂತೆ ಅಂಗಡಿ ಮಾಲೀಕರಿಗೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಸೂಚಿಸಿದೆ. ಅಲಿಪಿರಿಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದ ನಂತರವೇ ಭಕ್ತರಿಗೆ ತಿರುಮಲಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಅಲಿಪಿರಿ ಮಾರ್ಗದಲ್ಲಿ ನಡೆಯುವ ಭಕ್ತರು ಮೊದಲು ತಮ್ಮದೇ ಆದ ಗಾಜಿನ ನೀರಿನ ಬಾಟಲಿಯನ್ನು ಕೊಂಡೊಯ್ಯಬಹುದು ಅಥವಾ ಗಾಜಿನ ನೀರಿನ ಬಾಟಲಿಗಳನ್ನು ದಾರಿಯಲ್ಲಿ ಮಾರಾಟ ಮಾಡುತ್ತಾರೆ. ಈ ಬಾಟಲಿಗಳನ್ನು ಬಳಸಿದ ನಂತರ ಅಂಗಡಿಯವರಿಗೆ ಹಿಂತಿರುಗಿಸಬಹುದು.
ಸಾಮೂಹಿಕ ಸ್ವಚ್ಛತಾ ಅಭಿಯಾನ ಅಂಗಡಿಕಾರರು ಮಾರಾಟ ಮಾಡುವ ಉತ್ಪನ್ನಗಳ ಬೆಲೆಯನ್ನು ಪ್ರದರ್ಶಿಸಲು ಸೂಚಿಸಲಾಗಿದೆ. ಟಿಟಿಡಿ ಆರೋಗ್ಯಾಧಿಕಾರಿ ಡಾ.ಶ್ರೀದೇವಿ ಅವರು ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಿ ನೈರ್ಮಲ್ಯ ಸಿಬ್ಬಂದಿಗೆ ಹಸ್ತಾಂತರಿಸುವಂತೆ ವ್ಯಾಪಾರ ಮಾಲೀಕರಿಗೆ ಸೂಚಿಸಿದರು. ಇದಲ್ಲದೆ ಪ್ರತಿ ಮಂಗಳವಾರ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಸಾಮೂಹಿಕ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಟಿಟಿಡಿ ತಿಳಿಸಿದೆ.
ಅಂಗಡಿ ಸೀಲ್ ಆಗುತ್ತೆ ಹುಷಾರ್! ಪ್ಲಾಸ್ಟಿಕ್ ಬಳಕೆಯ ಕುರಿತು ಆರೋಗ್ಯ, ವಿಜಿಲೆನ್ಸ್ ಮತ್ತು ಎಸ್ಟೇಟ್ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಲಿದ್ದಾರೆ. ಪ್ಲಾಸ್ಟಿಕ್ ನಿಷೇಧವನ್ನು ಉಲ್ಲಂಘಿಸುವ ಅಂಗಡಿಗಳನ್ನು ಸೀಲ್ ಮಾಡುವ ಎಚ್ಚರಿಕೆ ನೀಡಿದ್ದಾರೆ ಎಂದು ಟಿಟಿಡಿ ವಿಜಿಲೆನ್ಸ್ ಗಾರ್ಡ್ ಅಧಿಕಾರಿ (ವಿಜಿಒ) ಬಾಲಿ ರೆಡ್ಡಿ ಹೇಳಿದರು. ತಿರುಮಲದಲ್ಲಿ ಈಗಾಗಲೇ ಭಾಗಶಃ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿರುವುದ್ದು ಯಾವುದೇ ಅಂಗಡಿಯಲ್ಲೂ ಪ್ಲಾಸ್ಟಿಕ್ ಬಾಟಲಿಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲಾಗಿತ್ತು.
ವ್ಯಾಪಾರಿಗಳು ಏನು ಮಾಡಬೇಕು? ವ್ಯಾಪಾರ ಮಾಲೀಕರಿಗೆ ಬಟ್ಟೆ ಮತ್ತು ಆಟಿಕೆಗಳನ್ನು ಪ್ಯಾಕಿಂಗ್ ಮಾಡಲು ಜೈವಿಕ ವಿಘಟನೀಯ ಚೀಲಗಳನ್ನು ಬಳಸಲು ಸಲಹೆ ನೀಡಲಾಗಿದೆ ಎಂದು ತಿರುಮಲ ತಿರುಪತಿ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಪ್ಲಾಸ್ಟಿಕ್ ಕವರ್ಗಳಲ್ಲಿ ಪೂಜಾ ಸಾಮಾಗ್ರಿ ನಿಷೇಧ ಮತ್ತೊಂದೆಡೆ ತಿರುಮಲದಂತೆಯೇ ಆಂಧ್ರ ಪ್ರದೇಶ ಇತರ ದೇವಾಲಯಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ದೇವಸ್ಥಾನಗಳಿಗೆ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಜೊತೆಗೆ ಪ್ಲಾಸ್ಟಿಕ್ ಕವರ್ಗಳಲ್ಲಿ ಪೂಜಾ ಸಾಮಾಗ್ರಿಗಳನ್ನು ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.
ದೇವಸ್ಥಾನಕ್ಕೆ ಹೊಂದಿಕೊಂಡಿರುವ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಮತ್ತು ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮಾರಾಟವನ್ನು ನಿಷೇಧಿಸಲಾಗಿದೆ. ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಯಲ್ಲಿ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಜುಲೈ 1 ರಿಂದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ