Anjanadri Hill: ಮತ್ತೆ ಭುಗಿಲೆದ್ದ ಹನುಮ ಜನ್ಮಭೂಮಿ ವಿವಾದ: ಟಿಟಿಡಿ ಟ್ರಸ್ಟ್‌ನಿಂದ ಮುಂದುವರಿದ ಕ್ಯಾತೆ

ಕಳೆದ ವರ್ಷ ಮೇ ತಿಂಗಳಲ್ಲಿ ಈ ವಿವಾದವನ್ನು ಬಗೆ ಹರಿಸಲು ಚರ್ಚೆ ನಡೆದಿದ್ದರೂ, ಪರಿಹಾರ ಸಿಕ್ಕಿರಲಿಲ್ಲ.

ಅಂಜನಾದ್ರಿ ಬೆಟ್ಟ

ಅಂಜನಾದ್ರಿ ಬೆಟ್ಟ

  • Share this:
ಸುಪ್ರೀಂ ಕೋರ್ಟ್ ನವೆಂಬರ್ 2019ರಲ್ಲಿ ರಾಮ ಜನ್ಮ ಭೂಮಿ (Ram Janma Bhoomi)  ವಿವಾದವನ್ನು ಇಥ್ಯರ್ಥಗೊಳಿಸಿದ ನಂತರ, ಇದೀಗ ಹೊಸ ವಿವಾದವೊಂದು ಭುಗಿಲೆದ್ದಿದೆ. ಈ ವಿವಾದ ರಾಮ ಭಕ್ತ ಹನುಮಂತನ ಜನ್ಮಭೂಮಿಗೆ (Hanuman Birth Place) ಸೇರಿದ್ದು. ಆದರೆ, ಇದು ರಾಮ ಜನ್ಮ ಭೂಮಿಯ ವಿವಾದಂತೆ ಎರಡು ಧರ್ಮಗಳ ನಡುವಿನದ್ದಲ್ಲ, ಬದಲಿಗೆ ಎರಡು ಹಿಂದೂ ಟ್ರಸ್ಟ್‌ಗಳ ನಡುವಿನದ್ದು. ಒಂದು ಟ್ರಸ್ಟ್ ಆಂಧ್ರ ಪ್ರದೇಶದಲ್ಲಿದ್ದರೆ, ಇನ್ನೊಂದು ಟ್ರಸ್ಟ್ ಕರ್ನಾಟಕದಲ್ಲಿದೆ. ರಾಜ್ಯದ ಅಂಜನಾದ್ರಿ ಬೆಟ್ಟವೇ  (Anjanadri Hill) ಹನುಮಂತನ  ಜನ್ಮಸ್ಥಳವಾಗಿದೆ (Hanuman Birth Place). ಆದರೆ, ಈ ವಿಷಯವಾಗಿ ಆಂಧ್ರದ ಟ್ರಸ್ಟ್‌ ಕ್ಯಾತೆ ತೆಗೆಯುತ್ತಿದ್ದು, ತಿರುಮಲ ಬೆಟ್ಟವೇ ಹನುಮಂತನ ಜನ್ಮಸ್ಥಳ ಎಂದು ಕ್ಯಾತೆ ತೆಗೆಯುತ್ತಿದೆ.

ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಮುಂದಾದ ಟಿಟಿಡಿ

ಇದೀಗ ಆ ಟ್ರಸ್ಟ್‌ಗಳಲ್ಲಿ ಒಂದಾಗಿರುವ, ಟಿಟಿಡಿ ಅಥವಾ ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ, ತಿರುಮಲ ಬೆಟ್ಟಗಳಲ್ಲಿನ ದೇಗುಲ ಮತ್ತು ಯಾತ್ರಾಸ್ಥಳವಾಗಿರುವ ಅಂಜನಾದ್ರಿಯಲ್ಲಿನ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು , ಬುಧವಾರ ಸಮಾರಂಭವನ್ನು ಯೋಜಿಸಿದೆ. ಕಳೆದ ಏಪ್ರಿಲ್‍ನಲ್ಲಿ ರಾಮನವಮಿಯಂದು ಈ ಸ್ಥಳ ಹನುಮಂತನ ಜನ್ಮ ಸ್ಥಳವೆಂದು ಔಪಚಾರಿಕವಾಗಿ ಪವಿತ್ರೀಕರಣಗೊಂಡಿತ್ತು.

ಆದರೆ, ಕರ್ನಾಟಕದ ಶ್ರೀ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಇದ್ದನ್ನು ಒಪ್ಪಲು ಸಿದ್ಧವಿಲ್ಲ.

ಹಂಪಿ ಬಳಿಯಿರುವ ಕಿಷ್ಕಿಂದೆ

ಟಿಟಿಡಿ ಕೂಡ ತನ್ನ ಪಟ್ಟು ಬಿಡಲು ಸಿದ್ಧವಿಲ್ಲ,  ಅದು ರಾಮಜನ್ಮಭೂಮಿಗೆ ಸೇರಿದ ಹಲವು ವಿದ್ವಾಂಸರು ಮತ್ತು ಸ್ವಾಮೀಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಸಮಾಲೋಚನೆ ನಡೆಸಲು ತೀರ್ಥಕ್ಷೇತ್ರ ಟ್ರಸ್ಟ್‌ನ ಸಂಸ್ಥಾಪಕ ಸ್ವಾಮಿ ಗೋವಿಂದಾನಂದ ಸರಸ್ವತಿ ಇಂದು ತಿರುಮಲಕ್ಕೆ ಭೇಟಿ ನೀಡಲಿದ್ದಾರೆ.  ವಾಲ್ಮೀಕಿ ರಾಮಾಯಣವು, ಹನುಮಂತನು ಕಿಷ್ಕಿಂಧೆಯ ಅಂಜನಾಹಳ್ಳಿಯಲ್ಲಿ ಜನಿಸಿದನೆಂದು ಹೇಳುತ್ತದೆ. ಆ ಹಳ್ಳಿ ತುಂಗಭದ್ರಾ ನದಿಯ ದಡದಲ್ಲಿರುವ ಹಂಪಿಗೆ ಸಮೀಪವಿದೆ ಎಂದು ನಂಬಲಾಗಿದೆ ಎಂಬುವುದು ತೀರ್ಥಕ್ಷೇತ್ರ ಟ್ರಸ್ಟ್‌ನ ವಾದ.

ಇದನ್ನು ಓದಿ: ಚೀನಾ ಟೆಲಿಕಾಂ ಕಂಪನಿ Huawei ಮೇಲೆ ಐಟಿ ದಾಳಿ; ಬೆಂಗಳೂರು, ದೆಹಲಿ ಕಚೇರಿಯಲ್ಲಿ ಶೋಧ

ಕಳೆದ ವರ್ಷ ಮೇ ತಿಂಗಳಲ್ಲಿ ಈ ವಿವಾದವನ್ನು ಬಗೆ ಹರಿಸಲು ಚರ್ಚೆ ನಡೆದಿದ್ದರೂ, ಪರಿಹಾರ ಸಿಕ್ಕಿರಲಿಲ್ಲ.

8 ಸದಸ್ಯರ ಸಮಿತಿ ರಚನೆ
ಟಿಟಿಡಿಯ ಒಂದು ಸಮಿತಿಯು (ಈ ಸಮಿತಿಯ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಸಂಸ್ಕೃತ ವಿಶ್ವ ವಿದ್ಯಾನಿಲಯದ ಉಪಕುಲಪತಿ ವಿ. ಮುರಳೀಧರ ಶರ್ಮಾ ಕಳೆದ ತಿಂಗಳು ನಿಧನರಾದರು) ಪುರಾಣಗಳು ಮತ್ತು ತಾಮ್ರ ಲೇಖನದಂತಹ ಪ್ರಾಚೀನ ಗ್ರಂಥಗಳು , ಈ ಕಾಲದಲ್ಲಿ ತಿರುಮಲ ಎಂಬ ಹೆಸರಿನಿಂದ ಕರೆಯಲ್ಪಡುತ್ತಿರುವ ಅಂಜನಾದ್ರಿಯನ್ನು ಹನುಮಂತನ ಜನ್ಮ ಸ್ಥಳವೆಂದು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ ಎಂದು ಹೇಳಿದೆ. ಟಿಟಿಡಿಯು ಏಪ್ರಿಲ್‍ನಲ್ಲಿ ಅಂಜನಾದ್ರಿಯ ಹಕ್ಕನ್ನು ಸಾರುವ ಕಿರು ಹೊತ್ತಿಗೆಯೊಂದನ್ನು ಪ್ರಕಟಿಸಿತು. ಅದು ಡಿಸೆಂಬರ್ 2020ರಲ್ಲಿ ರಚಿತವಾದ ಎಂಟು ಸದಸ್ಯರ ಸಮಿತಿಯು ಸಲ್ಲಿಸಿದ ವರದಿಯನ್ನು ಆಧರಿಸಿದೆ.

ಇದನ್ನು ಓದಿ: 'ನನ್ನ ಆದರ್ಶ ನಾಥೂರಾಂ ಗೋಡ್ಸೆ' ಭಾಷಣ ಸ್ಪರ್ಧೆ; ಅಧಿಕಾರಿ ಅಮಾನತು ಮಾಡಿದ Gujarat Government

ತೀರ್ಥ ಕ್ಷೇತ್ರ ಟ್ರಸ್ಟ್ 6 ಪುಟಗಳ ಪತ್ರದೊಂದಿಗೆ ಈ ಕುರಿತು ಟಿಟಿಡಿಯೊಂದಿಗೆ ಪ್ರತಿವಾದಿಸಿತು ಮತ್ತು ಈ ಬಗ್ಗೆ ಚರ್ಚೆ ನಡೆಯಿತು. ತನ್ನ ಹಕ್ಕು, ಹಲವಾರು ವೈದಿಕ ಮತ್ತು ಪುರಾಣ ವಿದ್ವಾಂಸರು ಒಪ್ಪಿಕೊಂಡಿರುವ ಪೌರಾಣಿಕ, ಸಾಹಿತ್ಯಿಕ, ಪುರಾತತ್ವ ಮತ್ತು ಭೌಗೋಳಿಕ ಪುರಾವೆಗಳನ್ನು ಆಧರಿಸಿದೆ , ಆದರೆ ತೀರ್ಥ ಕ್ಷೇತ್ರ ಟ್ರಸ್ಟ್‌ನ ಬಳಿ ಯಾವುದೇ ಪುರಾವೆಗಳು ಇಲ್ಲ ಎಂದು ಟಿಟಿಡಿ ಹೇಳಿದೆ.

ಸಮಾರಂಭದಲ್ಲಿ ಚರ್ಚೆ

“ಮಧ್ಯಪ್ರದೇಶದ ಚಿತ್ರಕೂಟದ ದೃಷ್ಟಿ ವಿಕಲಚೇತನ ಸ್ವಾಮೀಜಿಯೊಬ್ಬರು ಸಾಕ್ಷವೊಂದನ್ನು ಒದಗಿಸಿದ್ದಾರೆ. ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ” ಎಂದು ಟಿಟಿಡಿಯ ಸಿಇಓ ಜವಾಹರ್ ರೆಡ್ಡಿ ತಿಳಿಸಿದ್ದಾರೆ.

ಸಮಾರಂಭದಲ್ಲಿ ಶಾರದಾ ಪೀಠಾಧಿಪತಿ ಸ್ವರೂಪೇಂದ್ರ ಸರಸ್ವತಿ, ಚಿತ್ರಕೂಟದ ತುಳಸಿ ಪೀಠದ ರಾಮ ಭದ್ರಾಚಾರ್ಯ ಮಹಾರಾಜ್, ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸ್ವಾಮಿ ಗೋವಿಂದ್ ದೇವ್ ಗಿರಿ ಮತ್ತು ದೇಶದ ಅನ್ಯ ಭಾಗಗಳ ಸ್ವಾಮೀಜಿಗಳು, ಟಿಟಿಡಿ ಮುಖ್ಯಸ್ಥ ವೈ.ಎಸ್. ಸುಬ್ಬಾ ರೆಡ್ಡಿ ಭಾಗವಹಿಸಲಿದ್ದಾರೆ.
Published by:Seema R
First published: