HOME » NEWS » National-international » TSUNAMI WARNING ISSUED AFTER 7 POINT 8 MAGNITUDE QUAKE STRIKES OFF RUSSIA RMD

ಕೊರೋನಾ ಭೀತಿ ನಡುವೆಯೇ ರಷ್ಯಾಕ್ಕೆ ಅಪ್ಪಳಿಸಲು ಸಜ್ಜಾದ ಸುನಾಮಿ?; ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಎಚ್ಚರಿಕೆ

ರಷ್ಯಾದ ಕುರಿಲ್​ ದ್ವೀಪ ಭಾಗದಲ್ಲಿ ಬುಧವಾರ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ ಇದರ ತೀವ್ರತೆ 7.8 ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.  

news18-kannada
Updated:March 25, 2020, 11:07 AM IST
ಕೊರೋನಾ ಭೀತಿ ನಡುವೆಯೇ ರಷ್ಯಾಕ್ಕೆ ಅಪ್ಪಳಿಸಲು ಸಜ್ಜಾದ ಸುನಾಮಿ?; ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
  • Share this:
ಸೆವೆರೋ (ಮಾ.25): ವಿಶ್ವದೆಲ್ಲೆಡೆ ಕೊರೋನಾ ಭೀತಿ ಹೆಚ್ಚುತ್ತಿದೆ. ಇದಕ್ಕೆ ರಷ್ಯಾ ಕೂಡ ಹೊರತಾಗಿಲ್ಲ. ಈಗಾಗಲೇ ರಷ್ಯಾದಲ್ಲಿ 495 ಕೊರೋನಾ ಪ್ರಕರಣ ದೃಢಪಟ್ಟಿದ್ದು, ಒಂದು ಸಾವು ಸಂಭವಿಸಿದೆ. ಈ ಮಧ್ಯೆ ರಷ್ಯಾಗೆ ಸುನಾಮಿ ಕಂಟಕ ಎದುರಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಷ್ಯಾದ ಕುರಿಲ್​ ದ್ವೀಪ ಭಾಗದಲ್ಲಿ ಬುಧವಾರ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ ಇದರ ತೀವ್ರತೆ 7.8 ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.

ಸಾಗರದಾಳದಲ್ಲಿ ಭೂಕಂಪ ಸಂಭವಿಸುವುದರಿಂದ ಸುನಾಮಿಗಳು ಕಾಣಿಸಿಕೊಳ್ಳುತ್ತವೆ. ಇಂದು ದ್ವೀಪ ಭಾಗದಲ್ಲಿ ಭೂಕಂಪ ಸಂಭವಿಸಿರುವುದರಿಂದ ಸುನಾಮಿ ಏಳಬಹುದು ಎಂದು ತಜ್ಞರು ಹೇಳಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸಕಲ ಸಿದ್ಧತೆ ನಡೆಸಿಕೊಳ್ಳುವಂತೆಯೂ ಸೂಚಿಸಲಾಗಿದೆ.

ಸದ್ಯ, ಇಲ್ಲಿನ ಸಮುದ್ರ ಅಲೆಗಳಲ್ಲಿ ಕೊಂಚ ಬದಲಾವಣೆ ಕಂಡಿದೆ. ಆದರೆ, ಸುನಾಮಿ ಕಾಣಿಸಿಕೊಳ್ಳುವ ಯಾವುದೆ ಸಾಧ್ಯತೆ ಇಲ್ಲ ಎಂದು ಜಪಾನ್​ ಹವಾಮಾನ ಇಲಾಖೆ ಹೇಳಿದೆ.

ಈಗಾಗಲೇ ವಿಶ್ವಾದ್ಯಂತ 18,931 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ಈ ನಡುವೆ ಸುನಾಮಿ ಅಪ್ಪಳಿಸಿದರೆ ರಷ್ಯಾ ಸಂಕಷ್ಟಕ್ಕೆ ಸಿಲುಕಲಿದೆ.
First published: March 25, 2020, 11:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories