’ಯುವ ಜನರಿಗೆ ಉದ್ಯೋಗ ನೀಡುವ ಶಕ್ತಿ ಮೋದಿಗಿಲ್ಲ’; ಉದ್ಯೋಗ ಒದಗಿಸಿ ಅಭಿಯಾನ ಆರಂಭಿಸಿದ ರಾಹುಲ್ ಗಾಂಧಿ

ಭಾರತದಲ್ಲಿ ನಿರುದ್ಯೋಗವು ಜೂನ್‌ನಲ್ಲಿ ಶೇಕಡಾ 11 ರಷ್ಟಿತ್ತು. ಇದು ಹಿಂದಿನ ತಿಂಗಳು ಶೇ.23.5 ರಷ್ಟಿತ್ತು. ಖಾಸಗಿ ಸಂಸ್ಥೆ ಸಿಎಮ್‌ಐಇ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜೂನ್ ತಿಂಗಳಲ್ಲಿ 46 ಕೋಟಿಗೂ ಹೆಚ್ಚು ಜನರು ಉದ್ಯೋಗವನ್ನು ಹುಡುಕುತ್ತಿದ್ದಾರೆ.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

  • Share this:
ನವ ದೆಹಲಿ (ಆಗಸ್ಟ್‌ 09); ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ದೇಶದ ಕೋಟ್ಯಾಂತರ ಯುವ ಜನರು ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ, ದೇಶದ ಆರ್ಥಿಕ ರಚನೆಯನ್ನೇ ಬಿಜೆಪಿ ಸರ್ಕಾರ ನಾಶಪಡಿಸಿದೆ ಎಂದು ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ತಮ್ಮ ಟ್ವೀಟ್‌ ಖಾತೆಯಲ್ಲಿ 90 ಸೆಕೆಂಡ್‌ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ “ರೊಜ್‌ಗಾರ್‌ ದೊ" (ಉದ್ಯೋಗವನ್ನು ಒದಗಿಸಿ) ಅಭಿಯಾನವನ್ನು ಆರಂಭಿಸಿರುವ ರಾಹುಲ್ ಗಾಂಧಿ, “ಉದ್ಯೋಗವಿಲ್ಲದ ಯುವಜನರು ಮತ್ತುಇತರರು ದನಿ ಎತ್ತಿ ಸರ್ಕಾರವನ್ನು ಜಾಗೃತಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

"ನರೇಂದ್ರ ಮೋದಿ ಪ್ರಧಾನಿಯಾದಾಗ ಈ ದೇಶದ ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಈ ಮೂಲಕ ಯುವ ಜನರಲ್ಲಿ ದೊಡ್ಡ ಕನಸೊಂದನ್ನು ಮೂಡಿಸಿದ್ದರು. ಆದರೆ, ವಾಸ್ತವದಲ್ಲಿ ಮೋದಿ ಅವರ ನೀತಿಯಿಂದಾಗಿ 14 ಕೋಟಿ ಜನ ಇದೀಗ ಉದ್ಯೋಗ ರಹಿತರಾಗಿದ್ದಾರೆ.ನೋಟು ರದ್ದತಿ, ಜಿ ಎಸ್ ಟಿ ಮತ್ತು ತಯಾರಿಯಿಲ್ಲದ ಕೊರೋನಾ ಲಾಕ್‌ಡೌನ್ ನಂತಹ ಅವೈಜ್ಞಾನಿಕ ನೀತಿಗಳಿಂದಾಗಿ ಸರ್ಕಾರವು ಭಾರತದ ಆರ್ಥಿಕ ರಚನೆಯನ್ನು ನಾಶಪಡಿಸಿದೆ. ಈಗ ಭಾರತವು ತನ್ನ ಯುವಜನರಿಗೆ ಉದ್ಯೋಗಗಳನ್ನು ನೀಡಲು ಸಾಧ್ಯವಿಲ್ಲ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

“ನಿರುದ್ಯೋಗದ ಸಮಸ್ಯೆಯನ್ನು ಕೈಗೆತ್ತಿಕೊಂಡಿರುವ ತಮ್ಮ ಪಕ್ಷದ ಯುವ ವಿಭಾಗವಾದ ಭಾರತೀಯ ಯುವ ಕಾಂಗ್ರೆಸ್ “ರೋಜ್‌ಗಾರ್ ದೋ” ಚಳವಳಿಯ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ನಡೆಸುತ್ತದೆ” ಎಂದು ಅವರು ತಿಳಿಸಿದ್ದಾರೆ.ಇದೇ ರೀತಿಯ ವೀಡಿಯೊವನ್ನು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಸಹ ಪೋಸ್ಟ್ ಮಾಡಿ, “ಉದ್ಯೋಗ ಪಡೆಯುವುದು ಯುವಕರ ಹಕ್ಕು. ಆ ಮೂಲಕ ಅವರು ಮತ್ತು ದೇಶ ಎರಡೂ ಪ್ರಗತಿ ಹೊಂದಬಹುದು” ಎಂದಿದ್ದಾರೆ.

ಸಿಎಮ್‌ಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ)ಯ ಅಂದಾಜಿನ ಪ್ರಕಾರ, ಮೊದಲ ಲಾಕ್‌ಡೌನ್ ಮಾಡಿದ ಒಂದು ತಿಂಗಳ ನಂತರ, ಏಪ್ರಿಲ್‌ ತಿಂಗಳಿನಲ್ಲಿ ಮಾತ್ರ ಸುಮಾರು 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ಭಾರತದಲ್ಲಿ ನಿರುದ್ಯೋಗವು ಜೂನ್‌ನಲ್ಲಿ ಶೇಕಡಾ 11 ರಷ್ಟಿತ್ತು. ಇದು ಹಿಂದಿನ ತಿಂಗಳು ಶೇ.23.5 ರಷ್ಟಿತ್ತು. ಖಾಸಗಿ ಸಂಸ್ಥೆ ಸಿಎಮ್‌ಐಇ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜೂನ್ ತಿಂಗಳಲ್ಲಿ 46 ಕೋಟಿಗೂ ಹೆಚ್ಚು ಜನರು ಉದ್ಯೋಗವನ್ನು ಹುಡುಕುತ್ತಿದ್ದಾರೆ.

ಇದನ್ನೂ ಓದಿ : Coronavirus Karnataka Updates: ಕರ್ನಾಟಕದಲ್ಲಿ ಒಂದೇ ದಿನ 5,985 ಕೇಸ್​, 107 ಮಂದಿ ಬಲಿ

ಕೊರೋನಾ ವೈರಸ್ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸುವ ಬಗ್ಗೆ ‘ಕೇಂದ್ರ ಸರ್ಕಾರದ ಆರ್ಥಿಕತೆಯ ನಿರ್ವಹಣೆಯು ಲಕ್ಷಾಂತರ ಕುಟುಂಬಗಳನ್ನು ನಾಶಪಡಿಸುವ ದುರಂತ’ ಎಂದು ರಾಹುಲ್ ಗಾಂಧಿಯವರು ಟೀಕಿಸಿದ್ದಾರೆ.

ಸಮೀಕ್ಷೆಗಳು ಸರ್ಕಾರದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಅನ್ನು ಟೀಕಿಸಿವೆ. ಇದು ಬಡವರಿಗೆ ನೇರ ಹಣಕಾಸಿನ ಬೆಂಬಲವನ್ನು ಒಳಗೊಂಡಿಲ್ಲ ಎಂದು ರಾಹುಲ್ ಗಾಂಧಿ ಪದೇ ಪದೇ ಒತ್ತಿ ಹೇಳಿದ್ದಾರೆ.
Published by:MAshok Kumar
First published: