HOME » NEWS » National-international » TRUMP SILENCED IN TWITTER FACEBOOK BUT WHAT ABOUT NUCLEAR CODES ASKS SOCIAL MEDIA SNVS

ಟ್ರಂಪ್ ಕೈಯಲ್ಲಿದೆ ನ್ಯೂಕ್ಲಿಯಾರ್ ಬಟನ್, ಏನ್ ಮಾಡ್ತೀರಿ? ಇಂಟರ್ನೆಟ್​ನಲ್ಲಿ ಹೀಗೊಂದು ಕೂಗು

ಸೋಷಿಯಲ್ ಮೀಡಿಯಾ ಖಾತೆಗಳನ್ನ ಅಮಾನತುಗೊಳಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಗಾಯಗೊಂಡ ಮೃತದಂತಾಗಿದ್ದಾರೆ. ಇವರ ಕೈಯಲ್ಲಿ ನ್ಯೂಕ್ಲಿಯಾರ್ ಕೋಡ್​ಗಳಿರುವುದು ಸುರಕ್ಷಿತವಲ್ಲ. ಇವರನ್ನು ಅಧ್ಯಕ್ಷ ಸ್ಥಾನದಿಂದ ಕೂಡಲೇ ಕಿತ್ತುಹಾಕಿ ಎಂಬ ಧ್ವನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.

news18
Updated:January 7, 2021, 2:01 PM IST
ಟ್ರಂಪ್ ಕೈಯಲ್ಲಿದೆ ನ್ಯೂಕ್ಲಿಯಾರ್ ಬಟನ್, ಏನ್ ಮಾಡ್ತೀರಿ? ಇಂಟರ್ನೆಟ್​ನಲ್ಲಿ ಹೀಗೊಂದು ಕೂಗು
ಡೊನಾಲ್ಡ್ ಟ್ರಂಪ್
  • News18
  • Last Updated: January 7, 2021, 2:01 PM IST
  • Share this:
ಬೆಂಗಳೂರು: ಸಾಕಷ್ಟು ವಿವಾದ, ಟೀಕೆ, ಅಪಸ್ವರ, ನಿರೀಕ್ಷೆಗಳ ಯಮಭಾರ ಹೊತ್ತು ಅಧಿಕಾರಕ್ಕೇರಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಮ್ಮ ಅಧಿಕಾರದ ಕೊನೆಯ ದಿನದಲ್ಲಿ ಬಹಳ ದೊಡ್ಡ ವಿವಾದ ಮೈಮೇಲೆ ಎಳೆದುಕೊಂಡಿದ್ಧಾರೆ. ಚುನಾವಣೆಯಲ್ಲಿ ಸೋತು ಅಧಿಕಾರ ತ್ಯಜಿಸುವ ಬದಲು ಮೊಂಡುತನ ಪ್ರದರ್ಶನ ಮಾಡುತ್ತಲೇ ಬಂದಿದ್ಧಾರೆ ಎಂಬ ಟೀಕೆ ಇತ್ತೀಚೆಗೆ ಕೇಳಿಬರುತ್ತಲೇ ಇದೆ. ಟ್ರಂಪ್ ಬೆಂಬಲಿಗರ ದೊಡ್ಡ ಗುಂಪು ನಿನ್ನೆ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಯುಎಸ್ ಕ್ಯಾಪಟಲ್ (The Capitol – ಇದು ಅಮೆರಿಕದ ಸಂಸತ್ತು) ಬ್ಯುಲ್ಡಿಂಗ್​ಗೆ ಲಗ್ಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಫೈರಿಂಗ್​ನಲ್ಲಿ ನಾಲ್ಕು ಮಂದಿ ಮೃತ ಪಟ್ಟಿದ್ಧಾರೆ. ಈ ಘಟನೆ ಅಮೆರಿಕದ ಪ್ರಜಾತಂತ್ರ ವ್ಯವಸ್ಥೆ ತಂದಿರುವ ಅಪಾಯ ಎಂದು ಬಣ್ಣಿಸಲಾಗುತ್ತಿದೆ. ಅಮೆರಿಕದ ಸೋಷಿಯಲ್ ಮೀಡಿಯಾ ದೈತ್ಯರಾದ ಟ್ವಿಟ್ಟರ್ ಮತ್ತು ಫೇಸ್​ಬುಕ್ ಎರಡೂ ಸಂಸ್ಥೆಗಳು ಟ್ರಂಪ್ ಅವರ ಖಾತೆಗಳನ್ನ ತಾತ್ಕಾಲಿಕವಾಗಿ ಅಮಾನತುಗೊಳಿಸಿವೆ. ಜನರನ್ನು ಹಿಂಸಾಚಾರಕ್ಕೆ ಪ್ರಚೋದನೆ ಮಾಡಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಯಿತು.

ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ 12 ಗಂಟೆ ಸ್ಥಗಿತಗೊಂಡರೆ, ಫೇಸ್​ಬುಕ್ ಖಾತೆಯನ್ನು 24 ಗಂಟೆ ಕಾಲ ಬಂದ್ ಮಾಡಲಾಗಿದೆ. ಈ ಬೆಳವಣಿಗೆಯು ಸೋಷಿಯಲ್ ಮೀಡಿಯಾದಲ್ಲಿ ಹಲವು ಚರ್ಚೆ ಮತ್ತು ಕುಚೋದ್ಯ, ತಮಾಷೆಗಳಿಗೆ ಎಡೆ ಮಾಡಿಕೊಟ್ಟಿದೆ. ಅಮೆರಿಕ ಅಧ್ಯಕ್ಷರನ್ನು ಸೋಷಿಯಲ್ ಮೀಡಿಯಾದಲ್ಲಿ ಸುಮ್ಮನಿಸಿರಿಸಿಬಿಟ್ಟಿರಿ. ಆದರೆ, ಅವರ ಕೈಯಲ್ಲಿ ನ್ಯೂಕ್ಲಿಯಾರ್ ಬಟನ್​ಗಳಿವೆ. ಅದಕ್ಕೇನು ಮಾಡುತ್ತೀರಿ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

ಟ್ರಂಪ್ ಈಗ ಗಾಯಗೊಂಡ ಮೃಗವಾಗಿದ್ಧಾರೆ. ಏನು ಬೇಕಾದರೂ ಅವರು ಮಾಡಬಹುದು. ಮೊದಲು ನ್ಯೂಕ್ಲಿಯಾರ್ ಕೋಡ್​ಗಳು ಅವರಿಗೆ ಸಿಗದಂತೆ ಮಾಡಬೇಕು ಎಂದು ಹಲವರು ಟ್ವೀಟ್ ಮಾಡಿದ್ಧಾರೆ. ಟ್ರಂಪ್ ಅವರು ಧುತ್ತನೇ ಅಪಾಯಕಾರಿಯಾಗಿ ಪರಿಣಮಿಸಬಹುದು. ಮೊದಲು ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ ಎಂಬ ಸಲಹೆಗಳನ್ನೂ ಹಲವರು ನೀಡಿದ್ಧಾರೆ.
ಇತ್ತೀಚೆಗೆ ನಡೆದ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಸೋಲನುಭವಿಸಿದ್ದರು. ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಗೆಲುವು ಸಾಧಿಸಿದರು. ಆದರೆ, ಚುನಾವಣೆಯಲ್ಲಿ ಸೋತ ಕೂಡಲೇ ಅಧ್ಯಕ್ಷರು ರಾಜೀನಾಮೆ ಕೊಡಬೇಕಂತೇನಿಲ್ಲ. ಇಂತಿಷ್ಟು ದಿನಗಳ ಗಡುವು ಇರುತ್ತದೆ. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮೂಲಕ ನೂತನ ಅಧ್ಯಕ್ಷರ ಪದಗ್ರಹಣ ಆಗುತ್ತದೆ. ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಇದೇ ಜನವರಿ 20ರವರೆಗೆ ಇದೆ. ಅಲ್ಲಿಯವರೆಗೆ ಅವರು ಅಧ್ಯಕ್ಷರಾಗಿ ಉಳಿಯುವ ಅವಕಾಶ ಇದೆ.

ಚುನಾವಣೆಯಲ್ಲಿ ಡೆಮಾಕ್ರಾಟ್ ಪಕ್ಷದವರಿಂದ ಭಾರೀ ವಂಚನೆ ಆಗಿದೆ. ಪೋಲ್ ರಿಗ್ಗಿಂಗ್ ಆಗಿದೆ ಎಂಬ ಆರೋಪಗಳನ್ನ ಡೊನಾಲ್ಡ್ ಟ್ರಂಪ್ ಮಾಡುತ್ತಾ ಬಂದಿದ್ದಾರೆ. ತಾನು ಸೋಲು ಸಾಧ್ಯವೇ ಇರಲಿಲ್ಲ. ಮೋಸದಿಂದ ಬೈಡನ್ ಗೆದ್ದರೆಂಬುದು ಅವರ ಆರೋಪ. ಹೀಗಾಗಿ, ಅಧಿಕಾರ ಬಿಟ್ಟು ಇಳಿಯಲು ಅವರು ಮೀನಮೇಷ ಎಣಿಸುತ್ತಿದ್ದಾರೆನ್ನಲಾಗಿದೆ.
Published by: Vijayasarthy SN
First published: January 7, 2021, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories