ಅಮೆರಿಕದಲ್ಲಿ ಟಿಕ್​ ಟಾಕ್​ ಬ್ಯಾನ್​ ಮಾಡುವ ಆದೇಶಕ್ಕೆ ಸಹಿ ಹಾಕಿದ ಡೊನಾಲ್ಡ್​ ಟ್ರಂಪ್​

ಬೈಟ್​ ಡಾನ್ಸ್​ ಒಡೆತನದ ಟಿಕ್​ ಟಾಕ್​ ಸಂಸ್ಥೆ ಮಾಹಿತಿಯನ್ನು ಕದ್ದು ಅಲ್ಲಿನ ದೇಶದ ಸರ್ಕಾರಕ್ಕೆ ನೀಡುತ್ತಿದೆ ಎಂಬುದು ಭಾರತದ ವಾದವಾಗಿತ್ತು. ಅಮೆರಿಕ ಕೂಡ ಇದೇ ರೀತಿಯ ವಾದ ಮುಂದಿಟ್ಟು ಟಿಕ್​ ಟಾಕ್​ ಅನ್ನು ಬ್ಯಾನ್ ಮಾಡಿದೆ. 45 ದಿನಗಳಲ್ಲಿ ಈ ಬ್ಯಾನ್​ ಜಾರಿಗೆ ಬರಲಿದೆ.

news18-kannada
Updated:August 7, 2020, 9:52 AM IST
ಅಮೆರಿಕದಲ್ಲಿ ಟಿಕ್​ ಟಾಕ್​ ಬ್ಯಾನ್​ ಮಾಡುವ ಆದೇಶಕ್ಕೆ ಸಹಿ ಹಾಕಿದ ಡೊನಾಲ್ಡ್​ ಟ್ರಂಪ್​
ಡೊನಾಲ್ಡ್​ ಟ್ರಂಪ್
  • Share this:
ನ್ಯೂಯಾರ್ಕ್ (ಆ.7)​: ದೇಶದ ಭದ್ರತೆಗೆ ಅಪಾಯ ವೊಡ್ಡುತ್ತಿದೆ ಎನ್ನುವ ಕಾರಣ ನೀಡಿ ಚೀನಾದ ಟಿಕ್​ ಟಾಕ್​ ಸೇರಿ 59 ಆ್ಯಪ್​​ಗಳನ್ನು ಭಾರತ ಬ್ಯಾನ್​ ಮಾಡಿತ್ತು. ಈ ಬೆನ್ನಲ್ಲೇ ಅಮೆರಿಕ ಕೂಡ ಇದೇ ಮಾರ್ಗ ಅನುಸರಿಸಿದೆ. ಟಿಕ್​ ಟಾಕ್​ ಹಾಗೂ ವಿ ಚ್ಯಾಟ್​ ಆ್ಯಪ್​ಗಳನ್ನು ಬ್ಯಾನ್​ ಮಾಡುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಹಿ ಹಾಕಿದ್ದಾರೆ.

ಭಾರತ ಮೊಟ್ಟ ಮೊದಲ ಬಾರಿ ಟಿಕ್​ ಟಾಕ್​ ಅನ್ನು ಬ್ಯಾನ್​ ಮಾಡಿತ್ತು. ಈ ನಿರ್ಧಾರಕ್ಕೆ ಟ್ರಂಪ್​ ಹಾಗೂ ಅಮೆರಿಕದ ಇತರ ಜನ ಪ್ರತಿನಿಧಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು. ಈಗ ಅಮೆರಿಕ ಕೂಡ ಇದೇ ನಿರ್ಧಾರ ಕೈಗೊಂಡಿದೆ.

ಬೈಟ್​ ಡಾನ್ಸ್​ ಒಡೆತನದ ಟಿಕ್​ ಟಾಕ್​ ಸಂಸ್ಥೆ ಮಾಹಿತಿಯನ್ನು ಕದ್ದು ಅಲ್ಲಿನ ದೇಶದ ಸರ್ಕಾರಕ್ಕೆ ನೀಡುತ್ತಿದೆ ಎಂಬುದು ಭಾರತದ ವಾದವಾಗಿತ್ತು. ಅಮೆರಿಕ ಕೂಡ ಇದೇ ರೀತಿಯ ವಾದ ಮುಂದಿಟ್ಟು ಟಿಕ್​ ಟಾಕ್​ ಅನ್ನು ಬ್ಯಾನ್ ಮಾಡಿದೆ. 45 ದಿನಗಳಲ್ಲಿ ಈ ಆದೇಶ​ ಜಾರಿಗೆ ಬರಲಿದೆ.

ನಮ್ಮ ದೇಶದ ಟಿಕ್​ ಟಾಕ್​ ಬಳಕೆದಾರರ ಮಾಹಿತಿಯನ್ನು ಟಿಕ್​ ಟಾಕ್​ ಕಮ್ಯುನಿಸ್ಟ್​​ ಪಕ್ಷಕ್ಕೆ ನೀಡುತ್ತಿದೆ. ಇದರಿಂದ ನಮ್ಮ ದೇಶದ ಜನರು ಹಾಗೂ ಭದ್ರತಾ ಸಿಬ್ಬಂದಿ ಎಲ್ಲಿಗೆ ತೆರಳುತ್ತಾರೆ, ಏನು ಮಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿಯುತ್ತದೆ ಎಂದು ಟ್ರಂಪ್​ ಹೇಳಿದ್ದಾರೆ,

ಇದನ್ನೂ ಓದಿ: ಫೇಸ್​ಬುಕ್ ಲೈವ್​ ನಂತರ ಭೋಜ್​ಪುರಿ ನಟಿ ಆತ್ಮಹತ್ಯೆ; ಮುಂಬೈನಲ್ಲಿ ಅನುಪಮಾ ಪಾಠಕ್ ಸಾವು

ವಿಶ್ವಾಸಾರ್ಹವಲ್ಲದ ಚೀನೀ ತಂತ್ರಜ್ಞಾನ ಮತ್ತು ಟೆಲಿಕಾಂ ಪೂರೈಕೆದಾರ ವಸ್ತುಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ನಾವು ಅನೇಕ ರಾಷ್ಟ್ರಗಳಿಗೆ ಹುವಾಯಿ ಸಂಸ್ಥೆಯ ಮೊಬೈಲ್​ಗಳನ್ನು ಬಳಕೆ ಮಾಡದಂತೆ ಕೋರಿದ್ದೇವೆ. ಹುವಾಯಿ ಮೊಬೈಲ್​ ಬಳಕೆ ಮಾಡುವುದು ಭದ್ರತಾ ದೃಷ್ಟಿಯಿಂದ ತುಂಬಾನೇ ಅಪಾಯಕಾರಿ. ಈ ಸಂಸ್ಥೆ ಚೀನಾ ಸರ್ಕಾರ ಹಾಗೂ ಅಲ್ಲಿಯ ಸೇನೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅವುಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತವೆ ಎಂದು ಈ ಮೊದಲು ಟ್ರಂಪ್​ ಆರೋಪಿಸಿದ್ದರು.
Published by: Rajesh Duggumane
First published: August 7, 2020, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading