ನನ್ನ ತಂಟೆಗೆ ಬಂದರೆ ಇಡೀ ಜಗತ್ತಿನ ಹಣಕಾಸು ವ್ಯವಸ್ಥೆ ಕುಸಿದೀತು: ಅಮೆರಿಕಾ ಅಧ್ಯಕ್ಷ ಟ್ರಂಪ್​ ಎಚ್ಚರಿಕೆ


Updated:August 23, 2018, 5:33 PM IST
ನನ್ನ ತಂಟೆಗೆ ಬಂದರೆ ಇಡೀ ಜಗತ್ತಿನ ಹಣಕಾಸು ವ್ಯವಸ್ಥೆ ಕುಸಿದೀತು: ಅಮೆರಿಕಾ ಅಧ್ಯಕ್ಷ ಟ್ರಂಪ್​ ಎಚ್ಚರಿಕೆ

Updated: August 23, 2018, 5:33 PM IST
ವಾಷಿಂಗ್ಟನ್​: ನನ್ನ ತಂಟೆಗೆ ಬಂದರೆ ಅಮೆರಿಕಾದ ಆರ್ಥಿಕ ವ್ಯವಸ್ಥೆ ಕುಸಿದು ಬೀಳುತ್ತದೆ, ಜತೆಗೆ ಜಗತ್ತಿನ ಅರ್ಥ ವ್ಯವಸ್ಥೆಯೂ ಬುಡಮೇಲಾಗುತ್ತದೆ ಎಂಬ ಮಾತನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಲು ಯತ್ನ ನಡೆದರೆ ಅಮೆರಿಕಾ ದೇಶವೇ ಬಡತನದಲ್ಲಿ ಮುಳಗಲಿದೆ ಎಂದು ಟ್ರಂಪ್​ ಹೇಳಿದ್ದಾರೆ.

ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್​, "ನನ್ನನ್ನು ಯಾವುದೇ ಕ್ಷಣದಲ್ಲಿ ಅಮೆರಿಕಾ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದರೆ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿಯುವ ಸಾಧ್ಯತೆಯಿದೆ. ಅಮೆರಿಕಾದ ಪ್ರತೀ ಪ್ರಜೆಯೂ ಬಡವರಾಗುತ್ತಾರೆ. ಇದು ಸಾಧ್ಯವಾಗುತ್ತದೆ ಎಂದರೆ ನೀವು ನಂಬದೇ ಇರಬಹುದು ಆದರೆ ಈ ಯೋಚನೆ ನನ್ನಲ್ಲಿದೆ," ಎಂದಿದ್ದಾರೆ. ಫಾಕ್ಸ್​ ಮತ್ತು ಫ್ರೆಂಡ್ಸ್​ ಸಂದರ್ಶನ ಕಾರ್ಯಕ್ರಮದಲ್ಲಿ ಟ್ರಂಪ್​ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಅಮೆರಿಕಾದ ಮಾಜಿ ಅಟಾರ್ನಿ ಮೈಕೆಲ್​ ಕೋಹೆನ್​ ಇತ್ತೀಚೆಗಷ್ಟೇ ಟ್ರಂಪ್​ ವಿರುದ್ಧ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಚುನಾವಣಾ ಅಭಿಯಾನದ ಕಾನೂನುಗಳನ್ನು ಮುರಿಯುವಂತೆ ಟ್ರಂಪ್​ ಸೂಚನೆ ನೀಡಿದ್ದರು ಎಂದು ಪ್ರಮಾಣಿಸಿ ಕೋಹೆನ್​ ನುಡಿದಿದ್ದರು.

ಕೋಹೆನ್​ಗೆ ಈ ರೀತಿ ಸೂಚನೆ ನೀಡಿದ ನಂತರ ಟ್ರಂಪ್​, ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆಗಳನ್ನು ಅಮೆರಿಕಾದ ಜನತೆಗೆ ನೀಡುತ್ತ ಬಂದಿದ್ದರು. ಹಿಲರಿ ಕ್ಲಿಂಟನ್​ರನ್ನು ಗೆಲ್ಲಿಸಿದರೆ ಅಮೆರಿಕಾದ ಭವಿಷ್ಯ ಡೋಲಾಯಮಾನವಾಗಲಿದೆ ಎಂದೂ ಟ್ರಂಪ್​ ಹೇಳಿದ್ದರು.

ಸಂದರ್ಶನದಲ್ಲಿ ಮುಂದುವರಿದು ಮಾತನಾಡಿದ ಟ್ರಂಪ್​, "ದೇಶಕ್ಕಾಗಿ ಅದ್ಭುತ ಕೆಲಸಗಳನ್ನು ಮಾಡಿದ ನನ್ನನ್ನು ಹೇಗೆ ಪದಚ್ಯುತಿ ಗೊಳಿಸಲು ಮುಂದಾಗುತ್ತಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ," ಎಂದರು.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...