ಜಾಗತಿಕ ತಾಪಮಾನ ಸಮ್ಮೇಳನಕ್ಕೆ ಆಗಮಿಸಿ, ಕೆಲವೇ ನಿಮಿಷಗಳಲ್ಲಿ ಹೊರಟುಹೋದ ಅಮೆರಿಕ ಅಧ್ಯಕ್ಷ ಟ್ರಂಪ್​!

ಜಾಗತಿಕ ತಾಪಮಾನ ತಡೆಗಟ್ಟುವಿಕೆ ಕ್ರಮಗಳ ಕುರಿತು ಹನ್ನೆರಡಕ್ಕೂ ಹೆಚ್ಚು ಜಾಗತಿಕ ನಾಯಕರುಗಳು ಈ ಸಮ್ಮೇಳನದಲ್ಲಿ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.

news18-kannada
Updated:September 23, 2019, 10:21 PM IST
ಜಾಗತಿಕ ತಾಪಮಾನ ಸಮ್ಮೇಳನಕ್ಕೆ ಆಗಮಿಸಿ, ಕೆಲವೇ ನಿಮಿಷಗಳಲ್ಲಿ ಹೊರಟುಹೋದ ಅಮೆರಿಕ ಅಧ್ಯಕ್ಷ ಟ್ರಂಪ್​!
ಡೊನಾಲ್ಡ್​ ಟ್ರಂಪ್​
  • Share this:
ಯುನೈಟೆಡ್​ ನೇಷನ್ಸ್: ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳದಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕೆಲವು ನಿಮಿಷಗಳ ಕಾಲ ಭಾಗವಹಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಆಲಿಸಿದರು. ಈ ಸಮ್ಮೇಳನಕ್ಕೆ ಟ್ರಂಪ್​ ಅವರು ಆಗಮಿಸುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು.

ಸುಮಾರು ಹತ್ತು ನಿಮಿಷಗಳ ಕಾಲ ಭಾಷಣ ಕೇಳಿದ ಟ್ರಂಪ್​ ಆ ಬಳಿಕ ತಮ್ಮ ಧಾರ್ಮಿಕ ಸ್ವಾತಂತ್ರ ಕಾರ್ಯಕ್ರಮಕ್ಕೆ ತೆರಳಿದರು. ಈ ವೇಳೆ ಟ್ರಂಪ್ ಅವರು ಜರ್ಮನಿಯ ಚಾನ್ಸಲರ್​ ಅಂಜೆಲಾ ಮಾರ್ಕೆಲ್​ ಅವರ ಭಾಷಣಕ್ಕೂ ಹಾಜರಿದ್ದರು. ಆದರೆ, ಈ ಬಗ್ಗೆ ಏನನ್ನು ಹೇಳದೆ ಅವರು ಹೊರಟುಹೋದರು.

ಇದನ್ನು ಓದಿ: ಜಾಗತಿಕ ತಾಪಮಾನ ಬದಲಾವಣೆಗೆ ಮಾತಿಗಿಂತ ಕಾರ್ಯದ ಅಗತ್ಯವಿದೆ; ಪ್ರಧಾನಿ ನರೇಂದ್ರ ಮೋದಿ

ಜಾಗತಿಕ ತಾಪಮಾನ ಏರಿಕೆಗೆ ಮಾನವ ನಿರ್ಮಿತ ಕಾರಣಗಳ ಬಗ್ಗೆ ಅಗಾಧವಾದ ವೈಜ್ಞಾನಿಕ ಒಮ್ಮತದ ಬಗ್ಗೆ ಟ್ರಂಪ್ ಇದೇ ವೇಳೆ​ ಮತ್ತೆ ಅನುಮಾನ ವ್ಯಕ್ತಪಡಿಸಿದರು. ಇದೇ ವಿಚಾರವಾಗಿ ಟ್ರಂಪ್​ 2016ರ ಪ್ಯಾರಿಸ್​ ತಾಪಮಾನ ಒಪ್ಪಂದದಿಂದ ಹಿಂದೆ ಸರಿದಿದ್ದರು.
ಜಾಗತಿಕ ತಾಪಮಾನ ತಡೆಗಟ್ಟುವಿಕೆ ಕ್ರಮಗಳ ಕುರಿತು ಹನ್ನೆರಡಕ್ಕೂ ಹೆಚ್ಚು ಜಾಗತಿಕ ನಾಯಕರುಗಳು ಈ ಸಮ್ಮೇಳನದಲ್ಲಿ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.


First published: September 23, 2019, 10:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading