ತಾಜ್ ಮಹಲ್ ಹಾಗೂ ಪ್ರೇಮಕಥೆ ತಿಳಿದು ಭಾವುಕರಾದ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ

ಡೊನಾಲ್ಡ್ ಟ್ರಂಪ್ ತಾಜ್ ಮಹಲ್​ಗೆ ಭೇಟಿ ನೀಡಿದ ಮೂರನೇ ಅಮೆರಿಕನ್ ಅಧ್ಯಕ್ಷರೆನಿಸಿದ್ಧಾರೆ. ಈ ಮೊದಲು 1959ರಲ್ಲಿ ಡ್ವೈಟ್ ಡೇವಿಡ್ ಏಸೆನ್​ಹೋವರ್ 1959ರಲ್ಲಿ ಹಾಗೂ ಬಿಲ್ ಕ್ಲಿಂಟನ್ 2000ರಲ್ಲಿ ತಾಜ್ ಮಹಲ್​ಗೆ ಬಂದಿದ್ದರು.

ತಾಜ್ ಮಹಲ್ ಎದುರು ಡೊನಾಲ್ಡ್ ಟ್ರಂಪ್ ದಂಪತಿ

ತಾಜ್ ಮಹಲ್ ಎದುರು ಡೊನಾಲ್ಡ್ ಟ್ರಂಪ್ ದಂಪತಿ

  • News18
  • Last Updated :
  • Share this:
ಆಗ್ರಾ: ವಿಶ್ವದ ಅತ್ಯಂತ ಅಚ್ಚರಿಯ ಕಟ್ಟಡಳಗಳಲ್ಲೊಂದೆನಿಸಿದ ತಾಜ್ ಮಹಲ್​ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಕುಟುಂಬ ನಿನ್ನೆ ಭೇಟಿ ಕೊಟ್ಟಿತ್ತು. ತಾಜ್ ಮಹಲ್​ನ ಭವ್ಯತೆ ಹಾಗೂ ಅದರ ಹಿಂದಿನ ಪ್ರೇಮಕಥೆಗೆ ಟ್ರಂಪ್ ಬೆಕ್ಕಸ ಬೆರಗಾದರು. ಟ್ರಂಪ್​ಗೆ ಮಾರ್ಗದರ್ಶಕರಾಗಿ ಹೋಗಿದ್ದ ನಿತಿನ್ ಕುಮಾರ್ ಅವರು ಆ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

“ತಾಜ್ ಮಹಲ್​ನ ಇತಿಹಾಸವನ್ನು ತಿಳಿಸಿದೆ. ತಾಜ್ ಮಹಲ್ ಕಟ್ಟಿದ್ದರ ಹಿಂದಿನ ಕಥೆಯನ್ನೂ ಹೇಳಿದೆ. ಮೊಘಲ್ ದೊರೆ ಶಹಜಾನ್ ಮತ್ತು ಅವರ ಹೆಂಡತಿ ಮುಮ್ತಾಜ್ ಅವರ ಕಥೆ ಕೇಳಿ ಟ್ರಂಪ್ ಭಾವುಕಗೊಂಡರು. ಶಹಜಾನ್​ರನ್ನು ಅವರ ಮಗ ಔರಂಗಜೇಬನೇ ಗೃಹ ಬಂಧನದಲ್ಲಿಟ್ಟಿದ್ದು; ಅವರು ಸತ್ತಾಗ ಮುಮ್ತಾಜ್ ಗೋರಿ ಪಕ್ಕದಲ್ಲೇ ಸಮಾಧಿ ಮಾಡಿದ್ದು ಈ ಕಥೆ ಟ್ರಂಪ್ ಅವರನ್ನು ಮೂಕವಿಸ್ಮಿತರನ್ನಾಗಿಸಿತು” ಎಂದು ನಿತಿನ್ ಕುಮಾರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಜಯಲಲಿತಾ ಜನ್ಮದಿನದಂದು ಹುಟ್ಟಿದ ಮಕ್ಕಳಿಗೆ ತಮಿಳುನಾಡು ಸರ್ಕಾರದಿಂದ ಚಿನ್ನದ ಉಂಗುರ ಗಿಫ್ಟ್

ಟ್ರಂಪ್ ಜೊತೆ ಬಂದಿದ್ದ ಮೆಲಾನಿಯಾ ಟ್ರಂಪ್ ಅವರು ಶಹಜಾನ್, ಮುಜ್ತಾಜ್ ಗೋರಿಯ ಪ್ರತಿಕೃತಿಗಳ ಬಗ್ಗೆ ಕುತೂಹಲಪಟ್ಟರು. ಮಣ್ಣಿನಿಂದ ಶುದ್ಧಗೊಳಿಸುವ ಪ್ರಕ್ರಿಯೆ ಅವರಿಗೆ ಹೆಚ್ಚು ಕುತೂಹಲ ಮೂಡಿಸಿತು. ಆ ಬಗ್ಗೆ ಮೆಲಾನಿಯಾ ಟ್ರಂಪ್ ಹೆಚ್ಚು ವಿವರ ಕೇಳಿ ತಿಳಿದುಕೊಂಡರು.

“ಭಾರತೀಯ ಸಂಸ್ಕೃತಿಯ ಸಿರಿತನ ಹಾಗೂ ವೈವಿಧ್ಯಮಯ ಸೌಂದರ್ಯಕ್ಕೆ ಕಾಲಾತೀತವಾಗಿ ತಾಜ್ ಮಹಲ್ ಪ್ರೇರಣಾದಾಯಕವಾಗಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ತಾಜ್ ಮಹಲ್​ನ ವಿಸಿಟರ್ಸ್ ಬುಕ್​ನಲ್ಲಿ ಬರೆದು ಸಹಿ ಹಾಕಿದ್ದಾರೆ.

ಟ್ರಂಪ್ ದಂಪತಿಗೆ ತಾಜ್ ಮಹಲ್ ತೋರಿಸಿದ ನಿತಿನ್ ಕುಮಾರ್ ಅವರು ಇಲ್ಲಿ ಗೈಡ್ ಆಗಿ ಖ್ಯಾತರಾಗಿದ್ಧಾರೆ. ವಿಶೇಷ ಅತಿಥಿಗಳು ಬಂದರೆ ಇವರೇ ಹೆಚ್ಚಾಗಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಾರೆ. ಇವರ ವಿವರಣೆಯ ರೀತಿಗೆ ಮೆಚ್ಚಿ ಅನೇಕ ಗಣ್ಯರು ಕೊನೆಯಲ್ಲಿ ಇವರ ಜೊತೆ ಸೆಲ್ಫಿ ತೆಗೆಸಿಕೊಳ್ಳುವುದುಂಟು.

ಇದನ್ನೂ ಓದಿ: ಮ್ಯೂಸಿಕ್, ಮೂವಿ ಮೀರಿಸಿ ಗೇಮಿಂಗ್ ಬೆಳೆಯಲಿದೆ: ಮೈಕ್ರೋಸಾಫ್ಟ್ ಸಿಇಒ ಜೊತೆ ಸಂವಾದದಲ್ಲಿ ಅಂಬಾನಿ ಅನಿಸಿಕೆ

ಡೊನಾಲ್ಡ್ ಟ್ರಂಪ್ ತಾಜ್ ಮಹಲ್​ಗೆ ಭೇಟಿ ನೀಡಿದ ಮೂರನೇ ಅಮೆರಿಕನ್ ಅಧ್ಯಕ್ಷರೆನಿಸಿದ್ಧಾರೆ. ಈ ಮೊದಲು 1959ರಲ್ಲಿ ಡ್ವೈಟ್ ಡೇವಿಡ್ ಏಸೆನ್​ಹೋವರ್ 1959ರಲ್ಲಿ ಹಾಗೂ ಬಿಲ್ ಕ್ಲಿಂಟನ್ 2000ರಲ್ಲಿ ತಾಜ್ ಮಹಲ್​ಗೆ ಬಂದಿದ್ದರು.

17ನೇ ಶತಮಾನದಲ್ಲಿ ತಾಜ್ ಮಹಲ್ ಕಟ್ಟಿಸಲಾಗಿದೆ. 1631ರಲ್ಲಿ ಅವರ ಹೆಂಡತಿ ಮುಮ್ತಾಜ್ ಸತ್ತಾ ಪ್ರೇಮದ ಕುರುಹಾಗಿ ತಾಜ್ ಮಹಲ್ ಕಟ್ಟಿಸಿದರೆನ್ನಲಾಗಿದೆ. ಇದರ ನಿರ್ಮಾಣಕ್ಕೆ ಬರೋಬ್ಬರಿ 20 ವರ್ಷ ತಗುಲಿತ್ತು. ಇಲ್ಲಿಯೇ ಮುಮ್ತಾಜ್ ಸಮಾಧಿ ಇದೆ. ಶಾಹಜಹಾನ್ ನಿಧನವಾದಾಗ ಅವರನ್ನೂ ಮುಮ್ತಾಜ್ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: