ಸಂಸತ್ತಿನಲ್ಲಿ ಚಾಕೊಲೇಟ್ ತಿಂದು ಕ್ಷಮೆಯಾಚಿಸಿದ ಪ್ರಧಾನಿ..!

ತತ್​ಕ್ಷಣವೇ ಸಂಸದರ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ ಜಸ್ಟಿನ್​ ಟ್ರುಡೋ ಅವರು ನಾನು ತಿಂದಿದ್ದು ಚಾಕಲೋಟ್​, ಅದಕ್ಕಾಗಿ ನಾನು ಸಂಸತ್​ನ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದರು.

zahir | news18
Updated:March 25, 2019, 3:34 PM IST
ಸಂಸತ್ತಿನಲ್ಲಿ ಚಾಕೊಲೇಟ್ ತಿಂದು ಕ್ಷಮೆಯಾಚಿಸಿದ ಪ್ರಧಾನಿ..!
ತತ್​ಕ್ಷಣವೇ ಸಂಸದರ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ ಜಸ್ಟಿನ್​ ಟ್ರುಡೋ ಅವರು ನಾನು ತಿಂದಿದ್ದು ಚಾಕಲೋಟ್​, ಅದಕ್ಕಾಗಿ ನಾನು ಸಂಸತ್​ನ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದರು.
  • News18
  • Last Updated: March 25, 2019, 3:34 PM IST
  • Share this:
ಕೆನಡಾ ಸಂಸತ್​ ಭವನದಲ್ಲಿ ಚಾಕೊಲೇಟ್​ ತಿಂದಿದ್ದಕ್ಕಾಗಿ ಅಲ್ಲಿನ ಪ್ರಧಾನಿ  ಜಸ್ಟಿನ್​ ಟ್ರುಡೋ  ಕ್ಷಮೆ ಯಾಚಿಸಿರುವ ಘಟನೆ ನಡೆದಿದೆ. ಇತ್ತೀಚೆಗೆ ಪ್ರಧಾನಿ ಜಸ್ಟಿನ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಂಸತ್​ನಲ್ಲಿ ತಡರಾತ್ರಿಯವರೆಗೆ ಚರ್ಚೆ ನಡೆಯಿತು. ಅಲ್ಲದೆ ಈ ವೇಳೆ ಸಂಸತ್ತಿನಲ್ಲಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆದರೆ ಮತ್ತೊಂದೆಡೆ ಜಸ್ಟಿನ್​ ಟ್ರುಡೋ ಅವರು ಚಾಕೊಲೇಟ್ ತಿನ್ನುತ್ತಾ ಕೂತಿದ್ದರು.

ಪ್ರಧಾನಿ ಚಾಕೊಲೇಟ್​ ತಿನ್ನುವುದನ್ನು ವಿರೋಧ ಪಕ್ಷದ ಸಂಸದ ಸ್ಕಾಟ್​ ರೀಡ್​ ಗಮನಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಂಸತ್​ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಆಕ್ಷೇಪ​ ವ್ಯಕ್ತಪಡಿಸಿದ ಸಂಸದ ಸ್ಕಾಟ್​ 'ಪ್ರಧಾನಿಗಳು ತಮ್ಮ ಭ್ರಷ್ಟಾಚಾರ ಪ್ರಕರಣದಿಂದ ಸಂಸತ್​ ಭವನವನ್ನು ಕೊಳಕಾಗಿಸಿದ್ದಾರೆ. ಈಗ ಅವರು ಆಹಾರವನ್ನು ಸೇವಿಸುವ ಮೂಲಕ ಸಂಸತ್​ ಅನ್ನು ಕೊಳಕಾಗಿಸುವುದು ಬೇಡ ಎಂದು ತಿಳಿಸಿದ್ದರು.


ತತ್​ಕ್ಷಣವೇ ಸಂಸದರ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ ಜಸ್ಟಿನ್​ ಟ್ರುಡೋ ಅವರು ನಾನು ತಿಂದಿದ್ದು ಚಾಕಲೋಟ್​, ಅದಕ್ಕಾಗಿ ನಾನು ಸಂಸತ್​ನ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದರು. ಕೆನಡಾ ಸಂಸತ್ತಿನಲ್ಲಿ ಆಹಾರಗಳನ್ನು ಸೇವಿಸಲು ಅವಕಾಶವಿಲ್ಲ. ಸಂಸತ್ ಇರುವುದು ಗಂಭೀರ ಚರ್ಚೆ ಹಾಗೂ ದೇಶದ ಘನತೆಯನ್ನು ಎತ್ತಿ ಹಿಡಿಯಲು ಎಂಬುದು ಅಲ್ಲಿನ ನಿಯಮ. ಇದರ ಹೊರತಾಗಿಯು ಸಂಸತ್ ಸದಸ್ಯರು ನೀರನ್ನು ಮಾತ್ರ ಸೇವಿಸಲು ಅವಕಾಶ ನೀಡಲಾಗಿದೆ.

ಈ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಭಾರತದ ಟ್ವಿಟ್ಟಿಗರು ಕೂಡ ನಮ್ಮ ದೇಶದ ಸಂಸತ್ ಅಧಿವೇಶನ ಮತ್ತು ನಾಯಕರನ್ನು ಚಟುವಟಿಕೆಗಳನ್ನು ಹೆಸರಿಸಿ ಸಖತ್ ಟ್ರೋಲ್ ಮಾಡುತ್ತಿದ್ದಾರೆ.

 
First published:March 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading