ಪಲ್ಟಿಯಾದ ಕಂಟೇನರ್​ ಟ್ರಕ್​​ನಿಂದ ಟಿವಿ, ಮೊಬೈಲ್​, ಕಂಪ್ಯೂಟರ್​​ಗಳನ್ನು ದೋಚಿದ ಜನರು...!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟ್ರಕ್​ನಲ್ಲಿದ್ದ ಸುಮಾರು 70 ಲಕ್ಷ ಮೌಲ್ಯದ ವಸ್ತಗಳನ್ನು ಜನರು ಲೂಟಿ ಮಾಡಿದ್ದು, ನಾವು ಶೇ.40ರಷ್ಟು ವಸ್ತುಗಳನ್ನು ಮಾತ್ರ ವಾಪಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

 • Share this:

  ನವದೆಹಲಿ(ಜೂ.16): ಏನಾದರೂ ಬಿಟ್ಟಿಯಾಗಿ ಸಿಕ್ಕರೆ, ಜನರು ಯಾಕೆ ಬೇಡ ಅಂತಾರೆ. ಸಿಕ್ಕಿದ್ದೇ ಚಾನ್ಸ್ ಅಂತ ಬಾಚಿಕೊಳ್ಳುತ್ತಾರೆ. ಇಂತಹದ್ದೇ ಒಂದು ಘಟನೆ ಮಹಾರಾಷ್ಟ್ರದ ಉಸ್ಮಾನಾಬಾದ್​​ನಲ್ಲಿ ನಡೆದಿದೆ. ಕಂಟೇನರ್​ ಟ್ರಕ್​ವೊಂದು ಚಾಲಕನ ನಿಯಂತ್ರಣ ತಪ್ಪಿ​ ಪಲ್ಟಿ ಹೊಡೆದಿದ್ದು, ಅದರಲ್ಲಿದ್ದ ಸುಮಾರು 70 ಲಕ್ಷ ಮೌಲ್ಯದ ವಸ್ತುಗಳನ್ನು ಗ್ರಾಮಸ್ಥರು ಹಾಗೂ ದಾರಿಹೋಕರು ಲೂಟಿ ಹೊಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪಲ್ಟಿಯಾದ ಟ್ರಕ್​ ಮೊಬೈಲ್​ ಫೋನ್​ಗಳು, ಕಂಪ್ಯೂಟರ್​ಗಳು, ಎಲ್​ಇಡಿ ಟಿವಿಗಳು, ಬೊಂಬೆಗಳು ಹಾಗೂ ಎಲೆಕ್ಟ್ರಾನಿಕ್​​ ಉತ್ಪನ್ನಗಳನ್ನು ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ. ಟ್ರಕ್​ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕೂಡಲೇ, ಅಲ್ಲಿಗೆ ಧಾವಿಸಿದ ಜನರು ಟ್ರಕ್​ನಲ್ಲಿದ್ದ ಟಿವಿ, ಮೊಬೈಲ್​​, ಕಂಪ್ಯೂಟರ್​​​​​ಗಳನ್ನು ಕದ್ದುಕೊಂಡು ಹೋಗಿದ್ದಾರೆ.


  ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕೂಂಬಿಂಗ್​​​ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಟ್ರಕ್​ನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿರುವ ಜನರು ವಾಪಸ್​ ತಂದುಕೊಡಿ ಎಂದು ಹೇಳಿದ್ದರು. ಪೊಲೀಸ್ ತಂಡಗಳು ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದು, ಜನರು ತಾವು ತೆಗೆದುಕೊಂಡು ಹೋಗಿರುವ ವಸ್ತುಗಳನ್ನು ಹಿಂಪಡೆಯಲು ಹರಸಾಹಸಪಟ್ಟರು.


  ಇದನ್ನೂ ಓದಿ:Helmet: ಹೆಲ್ಮೆಟ್​ ಆಯ್ಕೆ ಮಾಡುವಾಗ ಈ ವಿಷಯಗಳು ನೆನಪಿರಲಿ; ಯಾವ ಹೆಲ್ಮೆಟ್​ ಸುರಕ್ಷಿತ? ಇಲ್ಲಿದೆ ಮಾಹಿತಿ


  ವಾಶಿ ತಹಶಿಲ್​​ನ ತೆರ್ಕೆಡಾದ ಲಕ್ಷ್ಮಿ ಪಾರ್ದಿ ಪೆಡಿ ಬಳಿ ಸೋಲಾಪುರ-ರಂಗಾಬಾದ್​ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ 3 ಗಂಟೆಯಲ್ಲಿ ಈ ಘಟನೆ ನಡೆದಿದೆ. ಟ್ರಕ್​ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕೂಡಲೇ, ಅಲ್ಲಿಗೆ ಧಾವಿಸಿದ ಜನರು ಟ್ರಕ್​ನಲ್ಲಿದ್ದ ಟಿವಿ, ಮೊಬೈಲ್​​, ಕಂಪ್ಯೂಟರ್​​​​​ಗಳನ್ನು ಕದ್ದುಕೊಂಡು ಹೋಗಿದ್ದಾರೆ. ಇನ್ನೂ ಕೆಲವರು ಕಂಟೇನರ್​​ನ ಬಾಗಿಲು ತೆರೆಯಲು ಯತ್ನಿಸಿದರು. ಸ್ಥಳೀಯ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಜನರು ಕದ್ದೊಯ್ದಿರುವ ವಸ್ತುಗಳನ್ನು ಮರಳಿ ಪಡೆಯಲು ಯತ್ನಿಸಿದರು.


  ಪೊಲೀಸರು ಕೂಂಬಿಂಗ್​ ಕಾರ್ಯಾಚರಣೆಯನ್ನು ಆರಂಭಿಸಿದರು. ಪೊಲೀಸರ ಮನವಿ ಬಳಿಕ ಕೆಲವು ಜನರು ಮಾತ್ರ  ತಾವು ತೆಗೆದುಕೊಂಡು ಹೋಗಿದ್ದ ವಸ್ತುಗಳನ್ನು ವಾಪಸ್ ತಂದುಕೊಟ್ಟರು. ಆದರೆ ಇನ್ನೂ ಕೆಲವರು ತಂದುಕೊಡಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.


  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ..!


  ಟ್ರಕ್​ನಲ್ಲಿದ್ದ ಸುಮಾರು 70 ಲಕ್ಷ ಮೌಲ್ಯದ ವಸ್ತಗಳನ್ನು ಜನರು ಲೂಟಿ ಮಾಡಿದ್ದು, ನಾವು ಶೇ.40ರಷ್ಟು ವಸ್ತುಗಳನ್ನು ಮಾತ್ರ ವಾಪಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಪೊಲೀಸರ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಜನರಿಂದ ಲೂಟಿಯಾಗಿರುವ ವಸ್ತುಗಳನ್ನು ಪಡೆಯುಲು ಯತ್ನಿಸುತ್ತಿದ್ದೇವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮೋತಿಚಂದ್ ರಾಥೋಡ್ ಹೇಳಿದ್ದಾರೆ.


  ​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

  Published by:Latha CG
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು