ಟ್ರಾಫಿಕ್​ ನಿಯಮ ಉಲ್ಲಂಘನೆ; ಒಡಿಶಾದ ಲಾರಿ ಚಾಲಕನಿಗೆ ಬಿದ್ದ ದಂಡ ಬರೋಬ್ಬರಿ 86,500 ರೂ.

ನಾಗಪುರ ರಿಜಿಸ್ಟ್ರೇಷನ್​ ಲಾರಿ​​ ಚಾಲಕ ಅಶೋಕ್​ ಯಾದವ್ ಪೊಲೀಸರಿಗೆ ಈಗಾಗಲೇ​​ 70 ಸಾವಿರ ದಂಡ ಕಟ್ಟಿದ್ದಾರೆ. ಟ್ರಕ್​ಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನೀಡದಿದ್ದ ಕಾರಣಕ್ಕೆ ಇಷ್ಟು ದೊಡ್ಡ ಮೊತ್ತದ ದಂಡ ಬಿದ್ದಿದೆ ಎನ್ನಲಾಗಿದೆ.

Latha CG | news18
Updated:September 9, 2019, 12:09 PM IST
ಟ್ರಾಫಿಕ್​ ನಿಯಮ ಉಲ್ಲಂಘನೆ; ಒಡಿಶಾದ ಲಾರಿ ಚಾಲಕನಿಗೆ ಬಿದ್ದ ದಂಡ ಬರೋಬ್ಬರಿ 86,500 ರೂ.
ಸಾಂದರ್ಭಿಕ ಚಿತ್ರ
  • News18
  • Last Updated: September 9, 2019, 12:09 PM IST
  • Share this:
ಒಡಿಶಾ(ಸೆ.09): ಕೇಂದ್ರ ಸರ್ಕಾರದ ಹೊಸ ಟ್ರಾಫಿಕ್​ ನಿಯಮಗಳು ವಾಹನ ಚಾಲಕರಿಗೆ ಬರೆ ಎಳೆಯುತ್ತಿವೆ. ನಿಯಮ ಉಲ್ಲಂಘನೆ ಮಾಡಿದರೆ ಸಾವಿರಾರು ರೂಪಾಯಿ ದಂಡ ಬೀಳುತ್ತಿದೆ. ಇದರಿಂದ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆ. ಒಡಿಶಾದ ಲಾರಿ ​ ಚಾಲಕನಿಗೆ ಟ್ರಾಫಿಕ್​ ನಿಯಮ ಉಲ್ಲಂಘನೆ ಅಡಿಯಲ್ಲಿ  ಪೊಲೀಸರು ಬರೋಬ್ಬರಿ 86,500 ರೂ. ದಂಡ ವಿಧಿಸಿದ್ದಾರೆ.

ನಾಗಪುರ ರಿಜಿಸ್ಟ್ರೇಷನ್​ ಲಾರಿ​​ ಚಾಲಕ ಅಶೋಕ್​ ಯಾದವ್ ಪೊಲೀಸರಿಗೆ ಈಗಾಗಲೇ​​ 70 ಸಾವಿರ ದಂಡ ಕಟ್ಟಿದ್ದಾರೆ. ಟ್ರಕ್​ಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನೀಡದಿದ್ದ ಕಾರಣಕ್ಕೆ ಇಷ್ಟು ದೊಡ್ಡ ಮೊತ್ತದ ದಂಡ ಬಿದ್ದಿದೆ ಎನ್ನಲಾಗಿದೆ.


  • ಸಾರಿಗೆ ಇಲಾಖೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಲಾರಿ​ ಚಾಲಕನಿಗೆ ಸಾಮಾನ್ಯ ಅಪರಾಧದ 500 ರೂ ಸೇರಿ, ಒಟ್ಟು 86,500 ರೂ. ದಂಡ ವಿಧಿಸಲಾಗಿದೆ.

  • ಅನಧಿಕೃತ ವ್ಯಕ್ತಿ ವಾಹನ ಚಲಾಯಿಸಲು ಅವಕಾಶ ನೀಡಿದ್ದಕ್ಕೆ 5000 ರೂ.,

  • ಸರಿಯಾದ ಚಾಲನಾ ಪರವಾನಗಿ(ಡ್ರೈವಿಂಗ್​ ಲೈಸೆನ್ಸ್​​) ಇಲ್ಲದೆ ವಾಹನ ಚಲಾಯಿಸಿದ ಕಾರಣಕ್ಕೆ 5000 ದಂಡ,

  • ಟ್ರಕ್​ನಲ್ಲಿ ಓವರ್​ ಲೋಡ್​​ ಸರಕು-ಸಾಮಾಗ್ರಿ ಕೊಂಡೊಯ್ಯುತ್ತಿದ್ದ ಕಾರಣಕ್ಕೆ 56 ಸಾವಿರ ರೂ. ದಂಡ(ಒಟ್ಟು 42 ಟನ್​ಗಳು- ಹೆಚ್ಚುವರಿ 18 ಟನ್​ಗಳ ಸಾಗಾಟ​),
  • ವಾಹನದ  ಅಳತೆ ಮೀರಿದ ಸರಕು ಸಾಗಾಟಕ್ಕೆ 20 ಸಾವಿರ ದಂಡ ವಿಧಿಸಲಾಗಿದೆ.


ಒಡಿಶಾ ರಾಜ್ಯದಲ್ಲಿ ಸಂಚಾರಿ ನಿಯಮ ಪಾಲಿಸದ ಆಡಳಿತರೂಢ ಪಕ್ಷದ ಶಾಸಕನಿಗೆ 500 ರೂ ದಂಡ ವಿಧಿಸಿದ ಪೊಲೀಸ್ ಇಲಾಖೆ!

ಒಟ್ಟು ದಂಡದ ಮೊತ್ತ 86 ಸಾವಿರ ಆಗಿದ್ದು, ಟ್ರಕ್​ ಚಾಲಕ 70 ಸಾವಿರ ದಂಡ ಕಟ್ಟಿದ್ದಾನೆ. ಲಾರಿಯು ಛತ್ತೀಸ್​ಗಢದ ಅನುಗುಲ್​ ಜಿಲ್ಲೆಯ ತಾಲ್ಚೆರ್​ ಮಾರ್ಗವಾಗಿ ಹೋಗುತ್ತಿದ್ದಾಗ ಸಂಬ್ಲಾಪುರದಲ್ಲಿ ಆಗಸ್ಟ್​ 3ರಂದು ವಾಹನಕ್ಕೆ ಸಂಬಂಧಪಟ್ಟ ದಾಖಲಾತಿ ಪರಿಶೀಲನೆ ಮಾಡಲಾಯಿತು.

First published: September 9, 2019, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading