ಟ್ರಾಫಿಕ್ ಕಾನ್ಸ್ಟೇಬಲ್ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ ಟಿಆರ್ಎಸ್ ನಾಯಕಿ ಬಂಧನ
ಸ್ಥಳಕ್ಕೆ ಬಂದ ಬೇಗಂ ಏಕಾಏಕಿ ಕಾನ್ಸ್ಟೇಬಲ್ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಇತರೆ ನಾಲ್ವರು ಹಲ್ಲೆ ಮಾಡಿದ್ದಾರೆ. ಈ ವೇಳೆ ಆಕೆ, ನಾನು ಮೌಲಾ ಅಲಿ ನಗರ ವಿಭಾಗದ ವಾರ್ಡ್ ಸದಸ್ಯೆ ಎಂದು ಹೇಳಿದ್ದಾರೆ. ನಂತರ ಪೊಲೀಸ್ ಇಲಾಖೆ ನೀಡಿದ್ದ ಕ್ಯಾಮರಾವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
- News18
- Last Updated: July 19, 2019, 10:44 PM IST
ಹೈದರಾಬಾದ್: ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ದಾಖಲು ಮಾಡಿಕೊಂಡ ಸಂಚಾರಿ ಕಾನ್ಸ್ಟೇಬಲ್ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ ಟಿಆರ್ಎಸ್ನ ಸ್ಥಳೀಯ ಮಹಿಳಾ ನಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮೌಲಾ ಅಲಿ ಮಹಿಳಾ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷೆ ಹಾಗೂ ವಾರ್ಡ್ ಸದಸ್ಯೆ ಸೈಯದ್ ಮೊಹಮೊದ್ ಬೇಗಂ ಅವರೇ ಟ್ರಾಫಿಕ್ ಕಾನ್ಸ್ಟೇಬಲ್ ಮೊದ್ ಮುಜಾಫರ್ ಅವರ ಮೇಲೆ ಹಲ್ಲೆ ಮಾಡಿದವರು. ಇವರೊಂದಿಗೆ ಪತಿ ಮತ್ತು ಮೂವರು ಕುಟುಂಬ ಸದಸ್ಯರು ಈ ವೇಳೆ ಜೊತೆಗಿದ್ದರು.
ಮೋಟಾರ್ಸೈಕಲ್ನಲ್ಲಿ ಮೂರು ಜನರು ಸಂಚಾರಿ ನಿಯಮ ಉಲ್ಲಂಘಿಸಿ ಬರುತ್ತಿರುವುದನ್ನು ಕ್ಯಾಮರಾದಲ್ಲಿ ದಾಖಲಿಸುತ್ತಿದ್ದೆ. ಇದನ್ನು ಕಂಡು ಆ ಬೈಕ್ ಸವಾರರು ಕ್ಯಾಮರಾ ರೆಕಾರ್ಡ್ ಮಾಡುತ್ತಿದ್ದ ನನ್ನ ಬಳಿ ಬಂದು ಅವರನ್ನು ನಿಂದಿಸಿ, ಹೋದರು. ಆದಾದ 15 ನಿಮಿಷಗಳ ಬಳಿಕ ಅವರು ತಮ್ಮ ಕುಟುಂಬ ಸದಸ್ಯದಾದ ಬೇಗಂ ಮತ್ತು ಅವರ ಗಂಡನನ್ನು ಕರೆತಂದಿದ್ದಾರೆ ಎಂದು ಮುಜಾಫ್ಪರ್ ಹೇಳಿದ್ದಾರೆ.ಇದನ್ನು ಓದಿ: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಾಧ್ಯವೇ ಇಲ್ಲ; ನ್ಯೂಸ್ 18ಗೆ ಉನ್ನತ ಮೂಲಗಳಿಂದ ಮಾಹಿತಿ
ಕಾನ್ಸ್ಟೇಬಲ್ ನೀಡಿದ ದೂರಿನ ಮೇಲೆ ಸರ್ಕಾರಿ ಅಧಿಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆಧಾರದ ಮೇಲೆ ಬೇಗಂ ವಿರುದ್ಧ ದೂರು ದಾಖಲಾಗಿದೆ. ಆನಂತರ ಆರೋಪಿತರನ್ನು ಬಂಧಿಸಲಾಗಿದೆ.

Loading...
Loading...