ಬಾರ್ಕ್ ಮಾಜಿ ಸಿಇಒ ಟಿಆರ್​ಪಿ ಹಗರಣದ ಮಾಸ್ಟರ್​ಮೈಂಡ್; ಸಿಎನ್​ಎನ್​-ನ್ಯೂಸ್ 18 ಸೇರಿ ಇತರೆ ಚಾನಲ್​ಗಳ ಟಿಆರ್​ಪಿ ಕುಗ್ಗಿಸಿದ್ದ ಆರೋಪಿ

ವರದಿಯ ಪ್ರಕಾರ, ಸುಮಾರು 44 ವಾರಗಳ ಡೇಟಾವನ್ನು ವಿವರವಾಗಿ ವಿಶ್ಲೇಷಿಸಲಾಗಿದೆ ಎಂದು ತಿಳಿಸಿದ ಸಿಂಗ್, ವಿಶೇಷವಾಗಿ ಇಂಗ್ಲಿಷ್ ಮತ್ತು ತೆಲುಗು ಸುದ್ದಿಗಳ ಪ್ರಕಾರದಲ್ಲಿ, ಮೂರು ವಿಧಾನಗಳ ಬಳಕೆಯಲ್ಲಿ ಟಿಆರ್​ಪಿ ತಿರುಚಲಾಗಿದೆ ಎಂದು ತಿಳಿಸಿದರು.

ಬಾರ್ಕ್​ನ ಮಾಜಿ ಸಿಇಒ ಪಾರ್ಥೊ ದಾಸ​ಗುಪ್ತಾ.

ಬಾರ್ಕ್​ನ ಮಾಜಿ ಸಿಇಒ ಪಾರ್ಥೊ ದಾಸ​ಗುಪ್ತಾ.

 • Share this:
  ನವದೆಹಲಿ; ಕೆಲವೊಂದು ಟಿವಿ ಚಾನೆಲ್​ಗಳಿಗೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್​ಪಿ) ತಿರುಚಿದ ಪ್ರಕರಣದ ಮಾಸ್ಟರ್​ಮೈಂಡ್ ಬಾರ್ಕ್​ನ ಮಾಜಿ ಸಿಇಒ ಪಾರ್ಥೊ ದಾಸ​ಗುಪ್ತಾ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಸಿಎನ್‌ಎನ್-ನ್ಯೂಸ್ 18 ಸೇರಿದಂತೆ ತನ್ನ ಪ್ರತಿಸ್ಪರ್ಧಿಗಳ ರೇಟಿಂಗ್‌ಗಳನ್ನು ಕಡಿಮೆಗೊಳಿಸುವ ಮೂಲಕ ಒಂದು ನ್ಯೂಸ್ ಚಾನೆಲ್‌ನ ರೇಟಿಂಗ್ ಅನ್ನುಬಾರ್ಕ್ ಮಾಜಿ ಸಿಎಒ ದಾಸಗುಪ್ತಾ ಹೆಚ್ಚಿಸಿದ್ದರು ಎಂದು ಆರೋಪಿಸಿದ್ದಾರೆ.

  ಪುಣೆ ಜಿಲ್ಲೆಯ ರಾಜಗಲ್​ ಪೊಲೀಸ್ ಠಾಣೆಯ ಅಪರಾಧ ಗುಪ್ತಚರ ವಿಭಾಗದ ಪೊಲೀಸರು ದಾಸ​ಗುಪ್ತಾ ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ 15ನೇ ಆರೋಪಿಯಾಗಿ ಬಂಧಿತರಾಗಿರುವ ದಾಸ​ಗುಪ್ತಾ ಅವರನ್ನು ಇಂದು ಮುಂಬೈ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. ದಾಸ​ಗುಪ್ತಾ 2013ರಿಂದ 2019ರವರೆಗೆ ಬಾರ್ಕ್​ ಸಿಇಒ ಆಗಿದ್ದರು. ಡಿಸೆಂಬರ್ 28ರವರೆಗೆ ಕಸ್ಟಡಿ ಅವಧಿಯಲ್ಲಿರಲಿದ್ದಾರೆ.

  ಇದನ್ನು ಓದಿ: ಹಿಂದೂ ಗೆಳತಿಯೊಂದಿಗೆ ನಡೆದು ಹೋಗುತ್ತಿದ್ದ ಮುಸ್ಲಿಂ ಬಾಲಕನ ಮೇಲೆ ಲವ್ ಜಿಹಾದ್ ಪ್ರಕರಣ ದಾಖಲಿಸಿ ಬಂಧನ

  ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್, ಫೋರೆನ್ಸಿಕ್ ಆಡಿಟ್ ವರದಿಯಲ್ಲಿ ಕೆಲವು ಉನ್ನತ ಅಧಿಕಾರಿಗಳ ನಡುವಿನ ಕೆಲವು ಇ-ಮೇಲ್​ಗಳು ಮತ್ತು ಚಾಟ್‌ಗಳನ್ನು ಉಲ್ಲೇಖಿಸಿದರು. ಕೆಲವು ಮಾಜಿ ಉನ್ನತ ಅಧಿಕಾರಿಗಳ ನಡುವಿನ ಚಾಟ್​ನ ಆಯ್ದ ಭಾಗವನ್ನು ಕಮಿಷನರ್ ಹಂಚಿಕೊಂಡಿದ್ದಾರೆ. "ದಯವಿಟ್ಟು ವಾರದ ಮಟ್ಟಿಗೆ ಇಂಗ್ಲಿಷ್ ನ್ಯೂಸ್ ಚಾನೆಲ್ ಅಪ್ಡೇಡ್​ ಕೆಳಗೆ ಮಾಡಿ, ಟೈಮ್ಸ್ ನೌ, ಸಿಎನ್ಎನ್-ನ್ಯೂಸ್ 18 ಅನ್ನು ಬದಲಾಯಿಸಲಾಗುತ್ತದೆ." ಚಾಟ್​ ಅನ್ನು ಪೊಲೀಸ್ ಕಮಿಷನರ್ ಎಲ್ಲರ ಮುಂದೆ ಪ್ರಸ್ತುತಪಡಿಸಿದರು.  ವರದಿಯ ಪ್ರಕಾರ, ಸುಮಾರು 44 ವಾರಗಳ ಡೇಟಾವನ್ನು ವಿವರವಾಗಿ ವಿಶ್ಲೇಷಿಸಲಾಗಿದೆ ಎಂದು ತಿಳಿಸಿದ ಸಿಂಗ್, ವಿಶೇಷವಾಗಿ ಇಂಗ್ಲಿಷ್ ಮತ್ತು ತೆಲುಗು ಸುದ್ದಿಗಳ ಪ್ರಕಾರದಲ್ಲಿ, ಮೂರು ವಿಧಾನಗಳ ಬಳಕೆಯಲ್ಲಿ ಟಿಆರ್​ಪಿ ತಿರುಚಲಾಗಿದೆ ಎಂದು ತಿಳಿಸಿದರು.

  Published by:HR Ramesh
  First published: