ಗೋಮತಿ ನದಿತೀರ ಯೋಜನೆ ಅಕ್ರಮ ಪ್ರಕರಣ: ತನಿಖೆ ತೀವ್ರಗೊಳಿಸಿದ ‘ಇಡಿ’; ಅಖಿಲೇಶ್​​ ಯಾದವ್​​​ಗೆ ಸಂಕಷ್ಟ!

ಸಿಎಂ ಯೋಗಿ ಆದಿತ್ಯನಾಥ್​​ ಚುನಾವಣೆ ಹೊತ್ತಲ್ಲಿಯೇ ಪ್ರಕರಣ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಲೋಕಸಭೆ ಚುನಾವಣೆ ಸಮೀಸುತ್ತಿದ್ದಂತೆಯೇ ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ. ನಾನು ಯಾವುದೇ ಅವ್ಯವಹಾರ ನಡೆಸಿಲ್ಲ. ಬೇಕಾದಲ್ಲಿ ಜಾರೀ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಲಿ ಎಂದು ಅಖಿಲೇಶ್​​ ಯಾದವ್​​ ಕಿಡಿಕಾರಿದ್ದಾರೆ.

Ganesh Nachikethu | news18
Updated:January 24, 2019, 5:00 PM IST
ಗೋಮತಿ ನದಿತೀರ ಯೋಜನೆ ಅಕ್ರಮ ಪ್ರಕರಣ: ತನಿಖೆ ತೀವ್ರಗೊಳಿಸಿದ ‘ಇಡಿ’; ಅಖಿಲೇಶ್​​ ಯಾದವ್​​​ಗೆ ಸಂಕಷ್ಟ!
ಅಖಿಲೇಶ್​​ ಯಾದವ್​​
Ganesh Nachikethu | news18
Updated: January 24, 2019, 5:00 PM IST
ನವದೆಹಲಿ(ಜ.24): ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ  ಬಿಎಸ್​ಪಿ ಜೊತೆ ಕೈ ಜೋಡಿಸಿರುವ  ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​​ರಿಗೆ ಸಂಕಷ್ಟ ಎದುರಾಗಿದೆ. 1,500 ಕೋಟಿ ರೂ. ಮೊತ್ತದ ಗೋಮತಿ ನದಿತೀರ ಯೋಜನೆ ಅಕ್ರಮ ಪ್ರಕರಣ ಸಂಬಂಧ ಅಖಿಲೇಶ್​​ ಯಾದವ್​​ರ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವ್ಯವಹಾರ ನಡೆದಿದೆ ಎನ್ನಲಾದ ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್​ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತನಿಖೆ ಶುರು ಮಾಡಿದ್ದು, ಇಂದು ಉತ್ತರಪ್ರದೇಶ, ಹರಿಯಾಣ, ದೆಹಲಿ ಸೇರಿದಂತೆ ರಾಜಸ್ಥಾನದಲ್ಲಿ ಹಲವರ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಕಡತಗಳನ್ನು ಪರಿಶೀಲಿಸಿದ್ಧಾರೆ ಎನ್ನಲಾಗಿದೆ.

ಈ ಹಿಂದೆ ಉತ್ತರಪ್ರದೇಶದ ಸರ್ಕಾರ ಗೋಮತಿ ನದಿಯ ಎರಡೂ ದಡದಲ್ಲಿ ನಾಲೆಯೊಂದನ್ನು ನಿರ್ಮಿಸಿ ನದಿ ನೀರನ್ನು ಬಳಕೆ ಮಾಡಿಕೊಳ್ಳುವ 1,500 ಕೋಟಿ ರೂ. ಮೊತ್ತದ ಯೋಜನೆ ಕೈಗೊಂಡಿತ್ತು. 2016ರಲ್ಲಿ ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಈ ಯೋಜನೆಯ ಕಾಮಗಾರಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಮತ್ತು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಬಳಿಕ ಅಲಹಾಬಾದ್ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅಲೋಕ್ ಸಿಂಗ್ ನೇತೃತ್ವದ ತನಿಖಾ ಆಯೋಗವನ್ನು ನೇಮಿಸಲಾಗಿದ್ದು , ಅವ್ಯವಹಾರ ನಡೆದಿರುವುದನ್ನು ನ್ಯಾಯಮೂರ್ತಿ ದೃಢಪಡಿಸಿದ್ದರು. ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಉತ್ತರ ಪ್ರದೇಶದ ಸರಕಾರದ ಕೋರಿಕೆಯಂತೆ, ನ.24ರಂದು ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಹಲವರ ವಿರುದ್ಧ ಎಫ್​ಐಆರ್​ ಕೂಡ ದಾಖಲಿಸಲಾಗಿತ್ತು.

ನ್ಯಾಯಲಯ ಆದೇಶದಂತೆಯೇ ಪ್ರಕರಣಕ್ಕೆ ಸಂಬಂಧಿಸಿ ಎಂಟು ಇಂಜಿನಿಯರ್​ಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಮಾಜಿ ಮುಖ್ಯ ಇಂಜಿನಿಯರ್​ಗಳಾದ ಗುಲೇಶ್ ಚಂದ್ರ, ಎಸ್.ಎನ್.ಶರ್ಮ ಮತ್ತು ಖಾಸಿಮ್ ಆಲಿ, ಮಾಜಿ ಸೂಪರಿಂಟೆಂಡಿಂಗ್ ಇಂಜಿನಿಯರ್​ಗಳಾದ ಶಿವಮಂಗಲ್ ಯಾದವ್, ಅಖಿಲ್ ರಾಮನ್, ಕಮಲೇಶ್ವರ್ ಸಿಂಗ್, ರೂಪ್ಸಿಂಗ್ ಯಾದವ್ ಮತ್ತು ಎಕ್ಸಿಕ್ಯೂಟಿವ್ ಇಂಜಿಯರ್ ಸುರೇಂದ್ರ ಯಾದವ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು.

ಇದನ್ನು ಓದಿ: ಆಂಧ್ರಪ್ರದೇಶದಲ್ಲಿ ಟಿಡಿಪಿ ಮೈತ್ರಿ ತೊರೆದ ಕಾಂಗ್ರೆಸ್​; ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧಾರ

ಇಷ್ಟು ದಿನ ನೆನೆಗುದಿಗೆ ಬಿದ್ದಿದ್ದ ಪ್ರಕರಣ ಎಸ್ಪಿ-ಬಿಎಸ್ಪಿ ಮೈತ್ರಿಯಿಂದಾಗಿ ಮರುಜೀವ ಪಡೆದುಕೊಂಡಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸುವಂತೆ  ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿಸಿದೆ. ಇದೀಗ ಯೋಜನೆಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರ ಬಯಲಿಗೆ ಎಳೆಯಲು ಇಡಿ ಮುಂದಾಗಿದೆ. ಅಲ್ಲದೇ ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ದಾಳಿ ನಡೆಸಿ ಕಡತಗಳ ಪರಿಶೀಲಿಸಿದೆ. ಅಲ್ಲದೇ ​ಮಾಜಿ ಸಿಎಂ ಅಖಿಲೇಶ್​​​ ಯಾದವ್​​ರ ಮೇಲೆ ಇಡಿ ದಾಳಿ ನಡೆಸುವ ಸಾಧ್ಯತೆಯಿದೆ.

ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಲು ಚುನಾವಣೆ ಹೊತ್ತಲ್ಲಿಯೇ ಪ್ರಕರಣ ತನಿಖೆಗೆ ಆದೇಶ ಹೊರಡಿಸಲಾಗಿದೆ.  ನಾನು ಯಾವುದೇ ಅವ್ಯವಹಾರ ನಡೆಸಿಲ್ಲ. ಬೇಕಾದಲ್ಲಿ ಜಾರೀ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಲಿ ಎಂದು ಅಖಿಲೇಶ್​​ ಯಾದವ್​​ ಕಿಡಿಕಾರಿದ್ದಾರೆ.

First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...