viralಮನುಷ್ಯನಿಗೆ ತಿಳಿಯದ ಅನೇಕ ರಹಸ್ಯಗಳು ನಿಸರ್ಗದಲ್ಲಿರುತ್ತವೆ. ಅದನ್ನು ಬಿಡಿಸೋಕೆ ಯಾರ್ಯಾರೋ ಎಷ್ಟೆಷ್ಟೋ ಕಷ್ಟ ಪಟ್ಟರೂ ಇಂದಿಗೂ ಅದು ಕಗ್ಗಂಟಾಗಿಯೇ ಉಳಿದಿರುತ್ತವೆ. ಭಾರತದಲ್ಲಿ ಅನೇಕ ನಿಗೂಢ ದೇವಾಲಯಗಳಿವೆ (Temples). ಅವುಗಳ ರಹಸ್ಯವನ್ನು ಇಲ್ಲಿಯವರೆಗೆ ಬಹಿರಂಗಗೊಂಡಿಲ್ಲ. ಅಂಥ ಒಂದು ನಿಗೂಢಗಳಲ್ಲಿ ಒಂದು ಈ ಉನಕೋಟಿ ದೇವಾಲಯ (Unakoti Temple). ಸುಮಾರು 7ನೇ-8ನೇ ಶತಮಾನದಷ್ಟು ಹಳೆಯ ಇತಿಹಾಸ ಹೊಂದಿರುವ ಈ ಉನಕೋಟಿ ಒಂದು ನಿಗೂಢ ಸ್ಥಳವಾಗಿದೆ. ಇಲ್ಲಿನ ದೊಡ್ಡ ಕಲ್ಲು ಮತ್ತು ಕಲ್ಲಿನ ಕೆತ್ತನೆಯ ಶಿಲ್ಪಗಳು (large stone and rock-cut sculptures )ನಿಮ್ಮನ್ನು ಅಚ್ಚರಿಗೊಳಿಸುತ್ತವೆ. ಇಲ್ಲಿ ಗಣೇಶ, ದುರ್ಗಾ ಸೇರಿದಂತೆ ಹಲವಾರು ದೇವತೆಗಳ ಮೂರ್ತಿಗಳಿವೆ.
ಬೃಹತ್ ಕಲ್ಲಿನಲ್ಲಿ ಕೆತ್ತಲಾದ ಭಗವಾನ್ ಶಿವನ ಮೂರ್ತಿಯನ್ನು ಉನಕೋಟೀಶ್ವರ ಕಾಲ ಭೈರವ ಎಂದು ಕರೆಯಲಾಗುತ್ತದೆ. ಇದು 30 ಅಡಿ ಎತ್ತರ ಮತ್ತು 10 ಅಡಿ ಎತ್ತರದ ಶಿರಸ್ತ್ರಾಣವಾಗಿದೆ. ಈ ತಾಣವು ಶೈವ ತೀರ್ಥಯಾತ್ರೆಗೆ ನೆಲೆಯಾಗಿದೆ.
ಎಲ್ಲಿದೆ ಈ ನಿಗೂಢ ದೇವಾಲಯ?
ಈ ದೇವಾಲಯವು ತ್ರಿಪುರಾ ರಾಜ್ಯದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ಸುಮಾರು 145 ಕಿ.ಮೀ ದೂರದಲ್ಲಿದೆ ಉನಕೋಟಿ. ಈ ದೇವಾಲಯವು ಭಾರತದ ಅತಿದೊಡ್ಡ ನಿಗೂಢ ದೇವಾಲಯಗಳಲ್ಲಿ ಒಂದೆನಿಸಿದೆ.
ಅಂಥದ್ದೇನಿದೆ ರಹಸ್ಯ ?
ಈ ನಿಗೂಢ ದೇವಾಲಯಗಳಲ್ಲಿ ಒಂದಾಗಿರುವ ಈ ಉನಕೋಟಿ ದೇವಾಲಯದಲ್ಲಿ ಇರೋದು ಒಂದಲ್ಲ… ಎರಡಲ್ಲ.. ಬರೋಬ್ಬರಿ 99 ಲಕ್ಷದ 99 ಸಾವಿರದ 999 ಶಿಲಾ ವಿಗ್ರಹಗಳಿವೆ.
ಅನೇಕ ವಿದ್ವಾಂಸರು, ತಜ್ಞರು ಈ ದೇವಾಲಯದ ರಹಸ್ಯವನ್ನು ಬಿಡಸೋಕೆ ಪ್ರಯತ್ನಿಸಿದರು. ಆದ್ರೆ ಅವರ್ಯಾರೂ ಯಶಸ್ವಿಯಾಗಲಿಲ್ಲ. ಏಕೆಂದರೆ ಈ ದೇವಾಲಯದ 99 ಲಕ್ಷ 99 ಸಾವಿರದ 999 ವಿಗ್ರಹಗಳನ್ನು ಮಾಡಿದವರು ಯಾರು? ಈ ವಿಗ್ರಹಗಳನ್ನು ಯಾವಾಗ ಕೆತ್ತಲಾಯಿತು? ಯಾಕಾಗಿ ನಿರ್ಮಿಸಲಾಯತು ಅನ್ನೋದಕ್ಕೆ ಇವತ್ತಿಗೂ ನಿಖರವಾದ ಉತ್ತರ ಸಿಕ್ಕಿಲ್ಲ.
ಪುರಾಣಗಳು ಏನು ಹೇಳುತ್ತವೆ?
ನಮ್ಮ ದೇಶದಲ್ಲಿರುವ ಪ್ರತಿ ದೇವಾಲಯಕ್ಕೂ ತನ್ನದೇ ಆದ ಇತಿಹಾಸವಿರುತ್ತದೆ. ಅದಕ್ಕೊಂದು ಪುರಾಣ ಕಥೆಯಿರುತ್ತದೆ. ಹಾಗೆಯೇ ಈ ನಿಗೂಢ ದೇವಾಲಯ ಉನಕೋಟಿಗೂ ಒಂದು ಪುರಾಣ ಇತಿಹಾಸವಿದೆ.
ಇದನ್ನೂ ಓದಿ: Children: ಪೋಷಕರೇ ಗಮನಿಸಿ, ಮಕ್ಕಳಲ್ಲಿ ಹೆಚ್ಚಾಗ್ತಿದೆ ಲೈಂಗಿಕ ಆಸಕ್ತಿ; ಕೊರೊನಾ ನಂತರ ಕೆಟ್ಟ ಚಟಕ್ಕೆ ಬಿದ್ದ ವಿದ್ಯಾರ್ಥಿಗಳು
ಆ ಪ್ರಕಾರ, ಒಮ್ಮೆ ಶಿವನು ಒಂದು ಕೋಟಿ ದೇವತೆಗಳೊಂದಿಗೆ ಎಲ್ಲೋ ಹೋಗುತ್ತಿದ್ದನಂತೆ. ಮಾರ್ಗಮಧ್ಯೆ ಈ ದೇವಾಲಯಗಳಲ್ಲಿ ದೇವತೆಗಳೆಲ್ಲ ನಿದ್ರಿಸಿದರಂತೆ. ಭಗವಾನ್ ಶಿವನು ಬೆಳಗ್ಗೆ ಎದ್ದಾಗ, ಎಲ್ಲಾ ದೇವತೆಗಳು ಇನ್ನೂ ಮಲಗಿಯೇ ಇದ್ದರಂತೆ. ಆಗ ಕೋಪಗೊಂಡ ಶಿವನು ಆ ದೇವತೆಗಳಿಗೆ ಶಾಪ ನೀಡಿದ್ದಕ್ಕೆ ಆ ಎಲ್ಲಾ ದೇವತೆಗಳೂ ಕಲ್ಲಾದರು ಎನ್ನಲಾಗುತ್ತದೆ. ಇದು 99 ಲಕ್ಷದ 99 ಸಾವಿರದ 999 ವಿಗ್ರಹಗಳ ಸೃಷ್ಟಿಗೆ ಕಾರಣವಾಯ್ತು ಎನ್ನಲಾಗಿದೆ. ಅಂದಹಾಗೆ ಉನಕೋಟಿ ಅಂದರೆ ಕೋಟಿಗೆ ಒಂದು ಕಡಿಮೆ ಎಂದರ್ಥ.
ಇನ್ನು ಈ ವಿಗ್ರಹಗಳ ಬಗ್ಗೆ ಇನ್ನೊಂದು ಕಥೆ ಪ್ರಚಲಿತದಲ್ಲಿದೆ. ಕಲು ಎಂಬ ಕುಶಲಕರ್ಮಿ ಇದ್ದನಂತೆ. ಆತ ಭಗವಾನ್ ಶಂಕರ ಮತ್ತು ತಾಯಿ ಪಾರ್ವತಿಯೊಂದಿಗೆ ಕೈಲಾಸ ಪರ್ವತಕ್ಕೆ ಹೋಗಲು ಬಯಸಿದ್ದನಂತೆ. ಆದರೆ ಅದು ಸಾಧ್ಯವಾಗುವಂಥ ಆಸೆಯಾಗಿರಲಿಲ್ಲ. ಕುಶಲಕರ್ಮಿಯ ಒತ್ತಾಯದ ಮೇರೆಗೆ ಭಗವಾನ್ ಶಂಕರರು ಒಂದು ಷರತ್ತನ್ನ ವಿಧಿಸ್ತಾರಂತೆ. ನೀನು ಒಂದೇ ರಾತ್ರಿಯಲ್ಲಿ ಒಂದು ಕೋಟಿ ದೇವತೆಗಳ ವಿಗ್ರಹಗಳನ್ನು ಮಾಡಿದರೆ, ಆತನನ್ನು ಕರೆದುಕೊಂಡು ಹೋಗುವುದಾಗಿ ಹೇಳುತ್ತಾರೆ.
ಇದನ್ನೂ ಓದಿ: Court Order: ತಲೆ ತಲಾಂತರದಿಂದ ಪೂಜಿಸಿದ ಈ ವಿಗ್ರಹ ಹಿಂದೂ ದೇವರಲ್ಲ! ಹೈಕೋರ್ಟ್ನಿಂದ ಖಡಕ್ ಆದೇಶ
ಕೈಲಾಸ ಪರ್ವತಕ್ಕೆ ಹೋಗುವ ಆಸೆಯಿಂದ ಆ ಕುಶಲಕರ್ಮಿಯು ರಾತ್ರಿಯಿಡಿ ಕುಳಿತು ವಿಗ್ರಹಗಳನ್ನು ಕೆತ್ತುತ್ತಾನೆ. ಆದ್ರೆ ಒಂದು ಕೋಟಿಗೆ ಒಂದೇ ಒಂದು ವಿಹ್ರಹವು ಕಡಿಮೆಯಿರುತ್ತದೆ. ಹಾಗಾಗಿ ಆತ ಕೈಲಾಸ ಪರ್ವತಕ್ಕೆ ಹೋಗಲು ಸಾಧ್ಯವಾಗಲೇ ಇಲ್ಲ. ಈ ಕಾರಣದಿಂದಲೇ ಇದಕ್ಕೆ ಉನಕೋಟಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಒಟ್ಟಾರೆ, ಪುರಾಣ ಕಥೆ ಏನೇ ಇರಲಿ. ಇದೊಂದು ನಮ್ಮ ದೇಶದ ಅತ್ಯದ್ಭುತ ಸ್ಥಳಗಳಲ್ಲಿ ಒಂದು ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ