ತ್ರಿಪುರ (ಸೆಪ್ಟೆಂಬರ್ 08); ದೇಶದಾದ್ಯಂತ ಇತ್ತೀಚೆಗೆ ಆರ್ಎಸ್ಎಸ್ ಮತ್ತು ಬಿಜೆಪಿ ಮುಖಂಡರ ಮೇಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಅಲ್ಲಲ್ಲಿ ಸದ್ದು ಮಾಡುತ್ತಲೇ ಇದೆ. ಈ ನಡುವೆ ಇದೀಗ ತ್ರಿಪುರದ ಆರ್ಎಸ್ಎಸ್ ಮುಖಂಡರೊ ಬ್ಬರು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅಪಹರಣ ಪ್ರಕರಣದಲ್ಲೂ ಸಿಲುಕಿ ಜೈಲು ಪಾಲಾಗಿರುವ ಘಟನೆ ನಡೆದಿದೆ. 9ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖಂಡ ತಾಪನ್ ದೇಬ್ನಾಥ್ ಸೇರಿದಂತೆ ಐವರನ್ನು ತ್ರಿಪುರ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಸೆಪಹಿಜಾಲ ಜಿಲ್ಲೆಯ ಬಿಷಾಲ್ ಘರ್‌ನ ಚಿರಿಲಾಮ್ ನಿಂದ ಅಪರಿಸಲಾಗಿದೆ ಎಂದು ತಿಳಿದುಬಂದಿದೆ.
16 ವರ್ಷಗಳ ಮುಸ್ಲಿಂ ಬಾಲಕಿಯನ್ನು ಬಿಷಾಲ್ ಘರ್ ಭಾಗದ ಚಂಡದ್ತಿಲ್ನ 23 ವರ್ಷದ ಯುವಕ ಸುಮನ್ ಸರ್ಕಾರ್ ಅಪರಿಸಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಕಾರ್ ಅವರನ್ನು ಬಂಧಿಸಿದ ಬಳಿಕ ಇಲ್ಲಿನ ಆಗರ್ತಲ ಪ್ರಾಂತ್ಯದ ಇಂದ್ರನಗರ ನಿವಾಸಿ, ಆರ್.ಎಸ್.ಎಸ್. ಮುಖಂಡ ತಾಪೇನ್ ದೇಬ್ನಾಥ್ ಅವರನ್ನು ಬಂಧಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸುಮನ್ ಸರ್ಕಾರ್ ಎಂಬಾತ ಅಪಹರಿಸಿದ ಬಾಲಕಿಯನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿ ವಿವಾಹವಾಗಿದ್ದಾನೆ ಎಂದು ವರದಿಯಾಗಿದೆ. ಘಟನೆಯಲ್ಲಿ ದೇಬ್ನಾಥ್ ಮತ್ತು ಚಂದ್ರಶೇಖರ್ ಕಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯಪಾತ್ರ ವಹಿಸಿದ ಐವರನ್ನು ಬಂಧಿಸಲಾಗಿದ್ದು, ಯುವಕ ಹಾಗೂ ಬಾಲಕಿ ಪತ್ತೆಯಾಗಿಲ್ಲ ಎಂದು ಸೆಪಹಿಜಾಲ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಬೆಂಡು ಚಕ್ರಭರ್ತಿ ತಿಳಿಸಿದ್ದಾರೆ.
ಬಾಲಕಿ ಅಪಹರಣವಾದ ಒಂದು ದಿನದ ಬಳಿಕ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮವನ್ನು ಮೊದಲು ಕೈಗೊಂಡಿರಲಿಲ್ಲ. ನಂತರ ಹೈಕೋರ್ಟ್‌ನಲ್ಲಿ ದೂರ ದಾಖಲಿಸಿದ್ದರು. ಸೆಪ್ಟೆಂಬರ್ 2ರೊಳಗೆ ಬಾಲಕಿಯನ್ನು ಪತ್ತೆಹಚ್ಚಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು.
ಆದರೆ ನಿಗದಿತ ಅವಧಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಸೋತಿದ್ದರು. ತ್ರಿಪುರ ಹೈಕೋರ್ಟ್ ಹೆಬಿಯಸ್ ಕಾರ್ಪಸ್ ರಿಟ್ ನೋಂದಾಯಿಸಿತು. ಸೆ.7ರೊಳಗೆ ಬಾಲಕಿಯನ್ನು ಪತ್ತೆ ಹಚ್ಚುವಂತೆ ಕೋರ್ಟ್ ಸೂಚಿಸಿತ್ತು. ಪೊಲೀಸರು ಎಲ್ಲ ರೀತಿಯ ಪ್ರಯತ್ನ ಮಾಡಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಬಿಜೆಪಿಯಲ್ಲಿ ನಿಲ್ಲದ ಒಳಬೇಗುದಿ; ವಿಪಕ್ಷ ನಾಯಕನ ಮೇಲೆ ಸ್ವಪಕ್ಷೀಯರಿಂದಲೇ ಭ್ರಷ್ಟಾಚಾರ ಆರೋಪ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿ ನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ