Self Gift: ಪ್ರೇಮಿಗಳ ದಿನದ ಅದ್ಭುತ ಗಿಫ್ಟ್, ಇದು ನಿಜಕ್ಕೂ ವಿಶೇಷ

ತ್ರಿಪುರಾದ ಸಬ್ರೂಮ್‌ನ ಸುಮನ್ ದೇಬ್ ನಾಥ್ ಅವರು ಚಂದ್ರನ ಮೇಲೆ ಭೂಮಿಯನ್ನು ಉಡುಗೊರೆಯಾಗಿ ಕೊಂಡುಕೊಂಡಿದ್ದಾರೆ. ಭೂಮಿಯ ನೈಸರ್ಗಿಕ ಉಪಗ್ರಹದಲ್ಲಿ ಭೂ ವ್ಯವಹಾರಗಳ ಬಗ್ಗೆ ಸುಮನ್ ತಿಳಿದಿದ್ದರೂ, ಬಾಲಿವುಡ್ ತಾರೆಗಳಿಂದ ಪ್ರೇರಿತರಾಗಿ ಚಂದ್ರನ ಮೇಲೆ ಜಾಗವನ್ನು ಸ್ವಾಧೀನಪಡಿಸಿಕೊಂಡರು.

ಚಂದ್ರ

ಚಂದ್ರ

  • Share this:

ಪ್ರೇಮಿಗಳ ದಿನದಂದು ತನ್ನ ಗರ್ಲ್‌ಫ್ರೆಂಡ್‌ಗೆ, ತನ್ನ ವ್ಯಾಲೆಂಟೈನ್‌ಗೆ ಉಡುಗೊರೆ (Gift) ನೀಡುವುದು ಮಾಮೂಲಿ. ಆದರೆ, ಇಲ್ಲೊಬ್ಬ ಯುವಕ ಫೆಬ್ರವರಿ 14ರಂದು ತನಗೆ ತಾನೇ ಉಡುಗೊರೆ ತೆಗೆದುಕೊಂಡಿದ್ದಾನೆ. ಅದೂ ಒಂದು ಎಕರೆ ಜಾಗವನ್ನು. ಇನ್ನು, 1 ಎಕರೆ ಜಾಗ ಅಂದ್ರೆ ಆತ ಎಷ್ಟು ಲಕ್ಷ ಅಥವಾ ಎಷ್ಟು ಕೋಟಿ ಕೊಟ್ಟಿರಬಹುದು ಅಂತೀರಾ.. ಇಲ್ಲ ಆತ ಕೆಲವೇ ಸಾವಿರಾರು ರೂ. ಅನ್ನು ನೀಡಿದ್ದಾನೆ. ಅಷ್ಟು ಕಡಿಮೆ ಬೆಲೆಗೆ ಎಲ್ರೀ ಜಾಗ ಸಿಗುತ್ತೆ ಅಂತೀರಾ.. ವಿವರ ಇಲ್ಲಿದೆ ನೋಡಿ. ಪ್ರೇಮಿಗಳ ದಿನದಂದು, ತ್ರಿಪುರಾದ (Tripura) ಸಬ್ರೂಮ್‌ನ ಸುಮನ್ ದೇಬ್ ನಾಥ್ ಅವರು ಚಂದ್ರನ ಮೇಲೆ ಭೂಮಿಯನ್ನು ಉಡುಗೊರೆಯಾಗಿ ಕೊಂಡುಕೊಂಡಿದ್ದಾರೆ. ಭೂಮಿಯ ನೈಸರ್ಗಿಕ ಉಪಗ್ರಹದಲ್ಲಿ ಭೂ ವ್ಯವಹಾರಗಳ ಬಗ್ಗೆ ಸುಮನ್ ತಿಳಿದಿದ್ದರೂ, ಬಾಲಿವುಡ್ (Bollywood) ತಾರೆಗಳಿಂದ ಪ್ರೇರಿತರಾಗಿ ಚಂದ್ರನ ಮೇಲೆ ಜಾಗವನ್ನು ಸ್ವಾಧೀನಪಡಿಸಿಕೊಂಡರು.


 “ಬಾಲಿವುಡ್ ತಾರೆಯರು ಚಂದ್ರನ ಮೇಲೆ ತಮ್ಮ ಭೂಮಿಯನ್ನು ಹೊಂದಿದ್ದಾರೆ. ನಾನು ಅವರಿಂದ ಸ್ಫೂರ್ತಿ ಪಡೆದಿದ್ದೆ. ಆದರೆ, ಜಾಗ ಕೊಂಡುಕೊಳ್ಳಲು ಬೆಲೆಗಳು ವಿಪರೀತವಾಗಿರುತ್ತವೆ ಮತ್ತು ನನ್ನ ವ್ಯಾಪ್ತಿಯಿಂದ ಹೊರಗಿರುತ್ತವೆ ಎಂದು ನಾನು ನಂಬಿದ್ದರಿಂದ ಆಯ್ಕೆಗಳನ್ನು ಅನ್ವೇಷಿಸುವುದನ್ನು ನಾನು ತಡೆಹಿಡಿದುಕೊಂಡಿದ್ದೆ.


ಬರೀ ಆರು ಸಾವಿರಕ್ಕೆ ಸಿಕ್ತು 1 ಎಕರೆ ಜಾಗ

ಬಳಿಕ, ಚಂದ್ರನಲ್ಲಿ ಜಾಗ ಕೊಂಡುಕೊಳ್ಳಲು ಬೆಲೆ ಎಷ್ಟಿರಬಹುದು ಎಂದು ನಾನು ನೆಟ್‌ನಲ್ಲಿ ಆಯ್ಕೆಗಳನ್ನು ಹುಡುಕಿದೆ. ಬೆಲೆಗಳು ನಾನು ನಿರೀಕ್ಷಿಸಿದಷ್ಟು ಹೆಚ್ಚಿಲ್ಲ ಎಂದು ಅರಿತುಕೊಂಡೆ. ನಾನು ಒಂದು ಎಕರೆ ಚಂದ್ರನ ಮೇಲೆ ಜಾಗ ತೆಗೆದುಕೊಳ್ಳಲು ಶಿಪ್ಪಿಂಗ್ ಮತ್ತು ಪಿಡಿಎಫ್ ಶುಲ್ಕವನ್ನು (PDF Fees) ಒಳಗೊಂಡಂತೆ 6,000 ರೂ. ಖರ್ಚು ಮಾಡಬೇಕಾಯಿತಷ್ಟೇ ಎಂದು ಯುವಕ ಹೇಳಿದ್ದಾರೆ.


 ತ್ರಿಪುರಾದಲ್ಲಿ ಮೊದಲ ವ್ಯಕ್ತಿ


ಚಂದ್ರನಲ್ಲಿ ಜಾಗದ ಬಗ್ಗೆ ವ್ಯವಹರಿಸಲು ಇಂಟರ್‌ನ್ಯಾಷನಲ್‌ ಲೂನಾರ್‌ ಸೊಸೈಟಿ (Lunar Society) ಇದೆ. ನಾನು ಅವರಿಂದ ಜಾಗ ಖರೀದಿಸಿದೆ. ನನ್ನ ರಾಜ್ಯದ ಯಾರೊಬ್ಬರೂ ಇದನ್ನು ಮೊದಲು ಮಾಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ನನಗೆ ಸಂತೋಷವಾಗಿದೆ. ಇದು ಚಂದ್ರನ ಮೇಲೆ ಅನುಭವವಾಗಿದೆ” ಎಂದು ಸುಮನ್ ದೇಬ್ ನಾಥ್ ಹಂಚಿಕೊಂಡಿದ್ದಾರೆ.


 ನೋಂದಣಿಯೂ ಆಯಿತು


"ಈ ಒಪ್ಪಂದದಲ್ಲಿ, ಭೂಮಿಯ ಮೇಲಿನ ಬೆಲೆಗಳಿಗಿಂತ ಚಂದ್ರನ ಮೇಲಿನ ಜಾಗದ ಬೆಲೆಗಳು ಅಗ್ಗವಾಗಿವೆ ಎಂದು ನಾನು ಅರಿತುಕೊಂಡೆ" ಎಂದೂ ಯುವ ಶಿಕ್ಷಕ ಹೇಳಿಕೊಂಡಿದ್ದಾರೆ. ಖಾಸಗಿ ಅಕಾಡೆಮಿಯಲ್ಲಿ ಗಣಿತ ಮತ್ತು ಬೋಧನೆಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಸುಮನ್ ದೇಬನಾಥ್ ಅವರು ಚಂದ್ರನ ಮೇಲಿನ ತಮ್ಮ ಜಾಗದ ನೋಂದಣಿಯನ್ನು ಮಾಡಿಸಿದ್ದಾರೆ ಮತ್ತು ಅದರ ಹಾರ್ಡ್‌ಕಾಪಿ ಶೀಘ್ರದಲ್ಲೇ ಅವರನ್ನು ತಲುಪಲಿದೆ ಎಂದೂ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Oxygen on Moon: ಚಂದ್ರನ ಮೇಲ್ಮೈಯಲ್ಲಿ 800 ಕೋಟಿ ಮನುಷ್ಯರು 1 ಲಕ್ಷ ವರ್ಷ ಬದುಕುವಷ್ಟು ಆಮ್ಲಜನಕ ಇದೆ, ಭೂಮಿಗೆ ತರೋದು ಹೇಗೆ?

 ಚಂದ್ರನ ಮೇಲಿನ ಜಾಗ ಪ್ಲಾಟ್​ಗಳಾಗಿ ವಿಂಗಡಿಕೆ


“ಚಂದ್ರನ ಮೇಲಿನ ಭೂಮಿಯನ್ನು ಪ್ಲಾಟ್‌ಗಳಾಗಿ ವಿಂಗಡಿಸಲಾಗಿದೆ ಮತ್ತು ನಾನು ಹುಡುಕಿದಾಗ ಸೀಮಿತ ಪ್ಲಾಟ್‌ಗಳು ಉಳಿದಿವೆ. ಮನೆ ನಿರ್ಮಿಸಿ ಚಂದ್ರನ ಮೇಲೆ ಉಳಿಯುವ ಯೋಜನೆ ಇಲ್ಲ. ಆದರೂ, ಚಂದ್ರನ ಮೇಲೆ ಭೂಮಿಯನ್ನು ಹೊಂದಲು ಸಂತೋಷವಾಗಿದೆ ಮತ್ತು ನನ್ನ ಹೆತ್ತವರು ಸಹ ಸಂತೋಷವಾಗಿದ್ದಾರೆ” ಎಂದು ಸುಮನ್ ಹೇಳಿದರು.


 ಸುಶಾಂತ್​​ ಕೂಡಾ ಚಂದ್ರನ ಮೇಲೆ ಜಾಗ ಖರೀದಿಸಿದ


ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಭೂಮಿಯ ಉಪಗ್ರಹ ಚಂದ್ರನಲ್ಲಿ ತುಂಡು ಭಾಗವನ್ನು ಖರೀದಿಸಿದ ಮೊದಲ ಬಾಲಿವುಡ್ ತಾರೆಯಾಗಿದ್ದು, ಮೇರ್ ಮಸ್ಕೋವಿಯೆನ್ಸ್ ಅಥವಾ "ಸೀ ಆಫ್ ಮಸ್ಕೋವಿ" ಎಂಬ ಪ್ರದೇಶದಲ್ಲಿ ಖರೀದಿಸಿದ್ದರು.


ಇದನ್ನೂ ಓದಿ: NASA On Wobble Moon: 2030ಕ್ಕೆ ಭೂಮಿಯಲ್ಲಿ ಭಾರೀ ಪ್ರವಾಹ ಸಂಭವಿಸಲಿದೆ; ಇದೇ ಪ್ರಳಯವಾ? ನಾಸಾ ಆತಂಕ !

 ನಟ ಸುಶಾಂತ್‌ ಮೀಡ್ 14" LX600 ಎಂಬ ಸುಧಾರಿತ ದೂರದರ್ಶಕವನ್ನು ಸಹ ಹೊಂದಿದ್ದರು. ಇದು ಭೂಮಿಯ ಮೇಲಿನ ಅವರ ಮನೆಯಿಂದ ಚಂದ್ರನ ಮೇಲಿರುವ ತಮ್ಮ ಜಾಗದ ಮೇಲೆ ಕಣ್ಣಿಡಲು ಸಹಾಯ ಮಾಡಿತು ಎಂದೂ ತಿಳಿದುಬಂದಿದೆ.


 ಶಾರೂಖ್​ಗೆ ಚಂದ್ರನ ಮೇಲೆ ಜಾಗ ಗಿಫ್ಟ್ ಕೊಟ್ಟಿದ್ದ ಅಭಿಮಾನಿ


ಅವರು ಇಂಟರ್‌ನ್ಯಾಷನಲ್‌ ಲೂನಾರ್ ಲ್ಯಾಂಡ್ಸ್ ರಿಜಿಸ್ಟ್ರಿಯಿಂದ ಚಂದ್ರನ ಮೇಲಿನ ಆಸ್ತಿಯನ್ನು ಖರೀದಿಸಿದ್ದರು. ಹೀಗೆ ಮಾಡಿದ ಮೊದಲ ಬಾಲಿವುಡ್‌ ನಟ ಎನಿಸಿಕೊಂಡಿದ್ದರು ಸುಶಾಂತ್. ಆದರೂ, ಅದಕ್ಕೂ ಮೊದಲೇ ನಟ ಶಾರುಖ್ ಖಾನ್ ಅವರಿಗೆ ಅಭಿಮಾನಿಯೊಬ್ಬರು ಚಂದ್ರನ ಮೇಲೆ ತುಂಡು ಜಾಗವನ್ನು ಉಡುಗೊರೆಯಾಗಿ ನೀಡಿದ್ದರು ಎಂದೂ ತಿಳಿದುಬಂದಿದೆ.



Published by:Divya D
First published: