ತ್ರಿಪುರಾ: ಕಮ್ಯುನಿಸ್ಟ್, ಕಾಂಗ್ರೆಸ್​ನ ಭದ್ರಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಸಜ್ಜು

news18
Updated:February 13, 2018, 8:15 PM IST
ತ್ರಿಪುರಾ: ಕಮ್ಯುನಿಸ್ಟ್, ಕಾಂಗ್ರೆಸ್​ನ ಭದ್ರಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಸಜ್ಜು
news18
Updated: February 13, 2018, 8:15 PM IST
- ನ್ಯೂಸ್ 18 ಕನ್ನಡ

ನವದೆಹಲಿ(ಫೆ. 13): ಈಶಾನ್ಯ ರಾಜ್ಯ ತ್ರಿಪುರಾಗೆ ಚುನಾವಣಾ ಕಳೆ ಮೆತ್ತಿಕೊಂಡಿದೆ. ಫೆಬ್ರವರಿ 18ರಂದು ಇಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಕೇಸರಿಪಡೆಯ ಬಲವರ್ಧನೆ ಆಗುವುದರೊಂದಿಗೆ ತ್ರಿಪುರಾಗೆ ಹೊಸ ರಾಜಕೀಯ ಕಳೆ ಬಂದಿದೆ. ಹಿಂದಿನ ಚುನಾವಣೆಗಳಿಗೂ ಈ ಬಾರಿಯ ಚುನಾವಣೆಗೂ ದೊಡ್ಡ ವ್ಯತ್ಯಾಸವಿದೆ. ಹಿಂದೆಲ್ಲಾ ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್  ನಡುವೆ ಮಾತ್ರ ಫೈಟ್ ಇರುತ್ತಿತ್ತು. ಈಗ ಬಿಜೆಪಿಯು ಸಹ ಅಖಾಡಕ್ಕೆ ಇಳಿದಿದೆ. ಬಿಜೆಪಿ ಬೇರು ಬಿಡಲು ಸಕಲ ರೀತಿಯ ಪ್ರಯತ್ನ ಮಾಡಿದೆ.

ಬಿಜೆಪಿ ರಣತಂತ್ರ:
ತ್ರಿಪುರಾದಲ್ಲಿ ಬೇರು ಬಿಡಲು ಬಿಜೆಪಿಯು ಆಪರೇಷನ್ ಕಮಲಕ್ಕೆ ಮೊರೆಹೋಗಿದೆ. ಬೇರೆ ಪಕ್ಷಗಳ ಪ್ರಮುಖರನ್ನು ತನ್ನ ಪಕ್ಷಕ್ಕೆ ಸೆಳೆದುಕೊಂಡು ಚುನಾವಣಾ ಕಣಕ್ಕಿಳಿಸಿದೆ. ಈಗಾಗಲೇ ಕಾಂಗ್ರೆಸ್ಸಿನಿಂದ 11 ಮಂದಿಯನ್ನು ಸೆಳೆದು ಟಿಕೆಟ್ ಕೊಟ್ಟಿದೆ.

60 ಕ್ಷೇತ್ರಗಳ ತ್ರಿಪುರಾ ವಿಧಾಸನಭೆ ಚುನಾವಣೆಗೆ 2013ರಲ್ಲಿ 249 ಅಭ್ಯರ್ಥಿಗಳಿದ್ದರು. ಈ ಬಾರಿಯ ಚನಾವಣೆಯಲ್ಲಿ ಒಟ್ಟು 297 ಅಭ್ಯರ್ಥಿಗಳಿದ್ದಾರೆ.

2013 ರ ಚುನಾವಣೆಯಲ್ಲಿ ಸ್ಪರ್ಧಿಸಿದ 249 ಅಭ್ಯರ್ಥಿಗಳಲ್ಲಿ ಕನಿಷ್ಠ 14 ಮಂದಿ 2018ರಲ್ಲಿ ಪಕ್ಷಗಳನ್ನು ಬದಲಾಯಿಸಿಕೊಂಡಿದ್ದಾರೆ. ಇವರ ಪೈಕಿ 11 ಕಾಂಗ್ರೆಸ್ ನಾಯಕರು ಬಿಜೆಪಿಗೆ ಪಕ್ಷಾಂತರಗೊಂಡು ಬಿಜೆಪಿ ಟಿಕೆಟ್​​ನಲ್ಲಿ ಈ ಬಾರಿ ಸ್ಪರ್ಧಿಸುತ್ತಿದ್ದಾರೆ.

 
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ