ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಜಯ: 2021ರ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದ ದೀದಿ

ಖಾರಾಪುರ ಸದಾರ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಪ್ರದೀಪ್​​​ ಸರ್ಕಾರ್​​ ಬಿಜೆಪಿ ಅಭ್ಯರ್ಥಿ ಪ್ರೇಮ್​ ಚಂದ್ರಾ ಜಾರನ್ನು 20,788 ಮತಗಳ ಮೂಲಕ ಸೋಲಿಸಿದ್ಧಾರೆ. ಈ ಕ್ಷೇತ್ರದಲ್ಲಿ ಸೋಲು ಬಿಜೆಪಿ ಹೈಕಮಾಂಡ್​​ಗೆ ಭಾರೀ ಶಾಕ್​​ ನೀಡಿದೆ.

news18-kannada
Updated:November 28, 2019, 4:33 PM IST
ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಜಯ: 2021ರ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದ ದೀದಿ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
  • Share this:
ನವದೆಹಲಿ(ನ.28): ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಭಾರೀ ಹಿನ್ನಡೆ ಅನುಭವಿಸಿದ್ದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಈಗ ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಪಶ್ಚಿಮ ಬಂಗಾಳದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲ್ಲಿ ಟಿಎಂಸಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದೆ. ಈ ಮೂಲಕ ಮೂರಕ್ಕೆ ಮೂರು ಕ್ಷೇತ್ರಗಳನ್ನು ಟಿಎಂಸಿ ಗೆಲುವಿನ ಬಾವುಟ ಹಾರಿಸಿದೆ. ಈ ಪೈಕಿ ಕಳೆದ 30 ವರ್ಷಗಳಲ್ಲೇ ಬಿಜೆಪಿ ಪ್ರಾಬಲ್ಯದ ಖಾರಾಪುರ ಸದಾರ್​ ಮತ್ತು ಕಲೈಗಂಜ್ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿರಲಿಲ್ಲ. ಆದರೀಗ ಮೂರು ದಶಕಗಳ ನಂತರ ಟಿಎಂಸಿ ಮೊದಲ ಬಾರಿಗೆ ತನ್ನ ಗೆಲುವನ್ನು ಬಿಜೆಪಿ ಪ್ರಾಬಲ್ಯ ಕ್ಷೇತ್ರಗಳಲ್ಲೂ ಸಾಧಿಸಿದೆ. ಟಿಎಂಸಿಯ ಈ ಗೆಲುವು ಮುಂದೆ 2021ರಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ಅಧಿಕಾರ ಹಿಡಿಯಲಿದ್ದೇವೆ ಎಂಬ ಮುನ್ಸೂಚನೆ ನೀಡಿದೆ ಎನ್ನಬಹುದು.

ಪಶ್ಚಿಮ ಬಂಗಾಳದ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ಸಿಎಂ ಮಮತಾ ಬ್ಯಾನರ್ಜಿಯವರು ನ್ಯೂಸ್​​-18ಗೆ ಪ್ರತಿಕ್ರಿಯಿಸಿದರು. ತೃಣಮೂಲ ಕಾಂಗ್ರೆಸ್​ಗೆ ಮತ ನೀಡಿ ಗೆಲ್ಲಿಸಿದ ಜನತೆಗೆ ನಾನು ಚಿರಋಣಿ. ಉಪಚುನಾವಣೆಯಲ್ಲಿ ಸೋಲಿಸುವ ಮೂಲಕ ಜನ ಬಿಜೆಪಿ ದುರಂಹಕಾರಕ್ಕೆ ತಕ್ಕ ಉತ್ತರ ನೀಡಿದ್ಧಾರೆ. ಮುಂದಿನ ಚುನಾವಣೆಯಲ್ಲೂ ನಾವೇ ಗೆಲ್ಲಲಿದ್ದೇವೆ ಎಂದರು. ಹಾಗೆಯೇ ಕಾಂಗ್ರೆಸ್​​ ಮತ್ತು ಸಿಪಿಐ(ಎಂ) ಪಕ್ಷವೂ ಪಕ್ಷ ಬಲವರ್ಧನೆಗೆ ಒತ್ತು ನೀಡದೆ, ಬಿಜೆಪಿಗೆ ಬೆಂಬಲ ನೀಡುತ್ತಿವೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಕಲೈಗಂಜ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ತಪಾನ್​​​​ ದೇಬ್​​​ ಸಿನ್ಹಾ ಬಿಜೆಪಿ ಅಭ್ಯರ್ಥಿ ಕಮಲ ಚಂದ್ರಾ ಸರ್ಕಾರ್​​ರನ್ನು 2,304 ಮತಗಳ ಮೂಲಕ ಸೋಲಿಸಿದ್ದಾರೆ. ಕಾಂಗ್ರೆಸ್​ ಶಾಸಕ ಪ್ರಮಥನಾಥ್​ ರೇ ಈ ವರ್ಷದ ಪ್ರಾರಂಭದಲ್ಲೇ ಸಾವನ್ನಪ್ಪಿದ್ದ ಬಳಿಕ ಈ ಕ್ಷೇತ್ರ ತೆರವಾಗಿತ್ತು. ಬಳಿಕ ಕಾಂಗ್ರೆಸ್​ನಿಂದ ಪ್ರಥಮನಾಥ್​​​ ಮಗಳು ಧೃತಶ್ರೀ ಅವರನ್ನು ಕಣಕ್ಕಿಳಿದಿದ್ದರು. ಆದರೆ, ಧೃತಶ್ರೀ ಮೂರನೇ ಸ್ಥಾನಕ್ಕಿಳಿದಿದ್ದಾರೆ.

ಇದನ್ನೂ ಓದಿ: ಪ.ಬಂಗಾಳ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಟಿಎಂಸಿ ಮೇಲುಗೈ; ಬಿಜೆಪಿಗೆ ಮುಖಭಂಗ

ನಾನು ತನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ. ನಾವು ಎನ್​​ಆರ್​ಸಿ ಜಾರಿಗೆ ತೀರ್ಮಾನಿಸಿದ್ದೇವೆ ಎಂದು ಅಲ್ಪಸಂಖ್ಯಾತರು ಟಿಎಂಸಿಗೆ ಮತ ಹಾಕಿದ್ದಾರೆ. ರಾಜ್​​ಬೋನ್ಶಿ ಸಮುದಾಯ ಯಾರಿಗೆ ಮತ ನೀಡಿದೆ ಎಂಬುದರ ಬಗ್ಗೆ ಮಾತಾಡುವದಿಲ್ಲ. ಆದರೆ, ಒಂದಂತು ಸ್ಪಷ್ಟ ಎನ್​​ಆರ್​ಸಿ ನೀತಿಗೆ ಹೆದರಿ ನಮ್ಮನ್ನು ಸೋಲಿಸಿದ್ದಾರೆ. ನಾನು ಸೋಲಲು ಎನ್​​ಆರ್​ಸಿ ನೀತಿಯೇ ಕಾರಣ ಎಂದು ಬಿಜೆಪಿ ಅಭ್ಯರ್ಥಿ ಕಮಲ ಚಂದ್ರಾ ಸರ್ಕಾರ್​​​ ಸೋಲೊಪ್ಪಿಕೊಂಡಿದ್ದಾರೆ.

ಖಾರಾಪುರ ಸದಾರ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಪ್ರದೀಪ್​​​ ಸರ್ಕಾರ್​​ ಬಿಜೆಪಿ ಅಭ್ಯರ್ಥಿ ಪ್ರೇಮ್​ ಚಂದ್ರಾ ಜಾರನ್ನು 20,788 ಮತಗಳ ಮೂಲಕ ಸೋಲಿಸಿದ್ಧಾರೆ. ಈ ಕ್ಷೇತ್ರದಲ್ಲಿ ಸೋಲು ಬಿಜೆಪಿ ಹೈಕಮಾಂಡ್​​ಗೆ ಭಾರೀ ಶಾಕ್​​ ನೀಡಿದೆ. ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​​​ ಘೋಷ್​​ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಕಾರಣ ಕ್ಷೇತ್ರ ತೆರವಾಗಿತ್ತು.

ಹಾಗೆಯೇ ಕರೀಂಪುರದಲ್ಲಿ ತೃಣಮೂಲ ಕಾಂಗ್ರೆಸ್​ನಿಂದ ಬೀಮಲೆಂಡು ಸಿನ್ಹಾ ಗೆಲುವು ಸಾಧಿಸಿದ್ಧಾರೆ. ಬಿಜೆಪಿ ಅಭ್ಯರ್ಥಿ ಜೈಪ್ರಕಾಶ್​​​ ಮಜುಮ್​​ದಾರ್​​​​ ವಿರುದ್ಧ ಗೆಲುವು ದಾಖಲಿಸಿದ್ದಾರೆ. ಈ ಕ್ಷೇತ್ರವೂ ಟಿಎಂಸಿ ಮೋಹೌ ಎಂಬುವರು ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ್ದರಿಂದ ತೆರವಾಗಿತ್ತು. ಆದರೀಗ, ಮತ್ತೆ ಟಿಸಿಎಂ ಅಭ್ಯರ್ಥಿಯೇ ಭರ್ಜರಿ ಜಯಗಳಿಸಿದ್ಧಾರೆ.ಇದನ್ನೂ ಓದಿ: ಐಎನ್​​ಎಕ್ಸ್​​ ಹಗರಣ: ಪಿ. ಚಿದಂಬರಂಗೆ ಜಾಮೀನು ನೀಡದಂತೆ ಸುಪ್ರೀಂಕೋರ್ಟ್​ಗೆ ಇಡಿ ಮನವಿ

ನಮಗೆ ಕರೀಂಪುರ ಗೆಲ್ಲುವುದು ಸವಾಲಾಗಿರಲಿಲ್ಲ. ಖಾರಾಪುರ ಸದಾರ್​​ ಮತ್ತು ಕಲೈಗಂಜ್ ಕ್ಷೇತ್ರಗಳು ಗೆಲ್ಲುವುದು ಭಾರೀ ತಲೆನೋವಾಗಿ ಪರಿಣಿಮಿಸಿತ್ತು. ಇದೀಗ ಈ ಎರಡು ಕ್ಷೇತ್ರಗಳಲ್ಲೂ ನಮ್ಮ ಪಕ್ಷವೇ ಗೆದ್ದಿರುವುದು ಮುಂದಿನ 2021 ಚುನಾವಣೆ ಗೆಲುವಿನ ಮುನ್ಸೂಚನೆ ಎಂದು ಟಿಸಿಎಂ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
First published: November 28, 2019, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading