ರಸ್ತೆ ಸಂಪರ್ಕವಿಲ್ಲದೆ ಗರ್ಭಿಣಿಯನ್ನು ಬಿದಿರಿನ ಡೋಲಿಯಲ್ಲಿ ಸಾಗಿಸಿದ ಆದಿವಾಸಿ ಜನರು

news18
Updated:September 7, 2018, 3:57 PM IST
ರಸ್ತೆ ಸಂಪರ್ಕವಿಲ್ಲದೆ ಗರ್ಭಿಣಿಯನ್ನು ಬಿದಿರಿನ ಡೋಲಿಯಲ್ಲಿ ಸಾಗಿಸಿದ ಆದಿವಾಸಿ ಜನರು
news18
Updated: September 7, 2018, 3:57 PM IST

ನ್ಯೂಸ್​ 18 ಕನ್ನಡ


ಹೈದ್ರಾಬಾದ್​ (ಸೆ.7): ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ ಗರ್ಭಿಣಿಯನ್ನು ಗ್ರಾಮಸ್ಥರು ಬಿದಿರುಕೋಲಿಗೆ ಸೀರೆ ಕಟ್ಟಿಕೊಂಡು ಏಳು ಕಿ.ಮೀ ಸಾಗಿರುವಂತಹ ಮನಕಲುಕುವ ಘಟನೆ ಆಂಧ್ರಪ್ರದೇಶದ ವಿಝಿನಗರದ ಮಾಸಿಕ ವಲಸ ಚಿಂತಲ ಸಾಲೂರು  ಗ್ರಾಮದಲ್ಲಿ ನಡೆದಿದೆ.,


ಆದಿವಾಸಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರು ಅರಣ್ಯ ಪ್ರದೇಶದಲ್ಲಿ ವಾಸವಿದ್ದ ಕಾರಣ ಆಕೆಯನ್ನು ಕರೆತರಲು ಯಾವುದೇ ವಾಹನ ಬಂದಿಲ್ಲ. ಇದರಿಂದಾಗಿ ಆಕೆಯ ಕುಟುಂಬಸ್ಥರೇ ಆಕೆಯನ್ನು ಡೋಲಿಯ ರೀತಿಯಲ್ಲಿ ಕೋಲಿಗೆ ಕಟ್ಟುಕೊಂಡು ಬಂದಿದ್ದೆ. ಈ ವೇಳೆ ಆಕೆಗೆ ಹೆರಿಗೆ ನೋವು ಹೆಚ್ಚಾಗಿದ್ದು, ಆಕೆಯನ್ನು ಅಲ್ಲಿಯೇ ಕೆಳಗಿಳಿಸಿ  ಆಕೆಗೆ ಹೆರಿಗೆ ಮಾಡಿಲಾಗಿದೆ.


ಈ ಗ್ರಾಮದ ದುಸ್ಥಿತಿಯ ಬಗ್ಗೆ ಯುವಕನೊಬ್ಬ ವಿಡಿಯೋ ಮಾಡಿದ್ದು, ತಮ್ಮ ಜನರ ನೋವಿನ ಬಗ್ಗೆ ತಿಳಿಸಿದ್ದಾನೆ. ಈ ಪ್ರದೇಶದಲ್ಲಿ ಈ ರೀತಿಯ ಅನೇಕ ಘಟನೆಗಳು ನಡೆದಿದ್ದು ಗ್ರಾಮಕ್ಕೆ ರಸ್ತೆ ಇಲ್ಲದಿರುವುದರಿಂದ 12 ಕಿ,ಮೀ ಸಾಗಬೇಕಿದೆ. ಈ ವೇಳೆ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾನೆ.ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಕೇಳಿಕೊಂಡರು. ಯಾವುದೇ ಪ್ರಯೋಜವಾಗಿಲ್ಲ. ಗ್ರಾಮದಲ್ಲಿ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಅವರನ್ನು ಇದೇ ರೀತಿಯಲ್ಲಿ ಕರೆತರುವ ಅನಿವಾರ್ಯ ಪರಿಸ್ತಿತಿ ಬಂದಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ