• Home
  • »
  • News
  • »
  • national-international
  • »
  • Dental Deformity: ಹಲ್ಲು ಓರೆ ಅಂತ ಕೆಲಸ ಕೊಡದ ಸರ್ಕಾರಿ ಇಲಾಖೆ, ಠಾಣೆ ಮೆಟ್ಟಿಲೇರಿದ ನೊಂದ ಯುವಕ!

Dental Deformity: ಹಲ್ಲು ಓರೆ ಅಂತ ಕೆಲಸ ಕೊಡದ ಸರ್ಕಾರಿ ಇಲಾಖೆ, ಠಾಣೆ ಮೆಟ್ಟಿಲೇರಿದ ನೊಂದ ಯುವಕ!

ಸಂತ್ರಸ್ತ ಯುವಕ

ಸಂತ್ರಸ್ತ ಯುವಕ

ಕೇರಳ ಸಾರ್ವಜನಿಕ ಸೇವಾ ಆಯೋಗ ಬುಡಕಟ್ಟು ಸಮುದಾಯದ ಯುವಜನರಿಗೆ ವಿಶೇಷ ನಿಯಮದಡಿಯಲ್ಲಿ ಸರ್ಕಾರಿ ಹುದ್ದೆಯ ನೇಮಕಾತಿಗೆ ಪರೀಕ್ಷೆಗಳನ್ನು ಆಯೋಜಿಸಿತ್ತು. ಈ ಪರೀಕ್ಷೆಯನ್ನು ಫಾರೆಸ್ಟ್‌ ಬೀಟ್‌ ಆಫೀಸರ್‌ ಹುದ್ದೆಗೆ ಅಟ್ಟಪಾಡಿಯ ನಿವಾಸಿ ಮುತ್ತು ಅವರು ಬರೆದಿದ್ದರು. ಅಲ್ಲದೇ ದೈಹಿಕ ಪರೀಕ್ಷೆಯಲ್ಲೂ ಪಾಲ್ಗೊಂಡು, ಎರಡು ಪರೀಕ್ಷೆಯಲ್ಲಿ ತೇರ್ಗಡೆಯಾಗಿದರು. ನಂತರ ಹುದ್ದೆಗಾಗಿ ಕಾಯುತ್ತಿದ್ದ ಮುತ್ತ ಅವರಿಗೆ ತಮ್ಮ ಹಲ್ಲಿನಿಂದಲೇ ಕಂಟಕ ಎದುರಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Kerala, India
  • Share this:

ತಿರುವನಂತಪುರಂ: ಹಲ್ಲು ಓರೆ ಅಂತ ಕೆಲಸ ಕೊಡದ ಸರ್ಕಾರಿ ಇಲಾಖೆ, ಠಾಣೆ ಮೆಟ್ಟಿಲೇರಿದ ನೊಂದ ಯುವಕ!ತಿರುವನಂತಪುರಂ: ಭಾರತದಲ್ಲಿ (India) ನಿರುದ್ಯೋಗ (Unemployment) ಸಮಸ್ಯೆ ಹೊಸದೇನಲ್ಲ. ಅನೇಕ ಮಂದಿ ಉದ್ಯೋಗ ಸಿಗದೇ ಒದ್ದಾಡುತ್ತಿದ್ದಾರೆ. ಕೆಲ ಮಂದಿ ಕಷ್ಟಪಡದೇ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಇನ್ನೂ ಕೆಲ ಮಂದಿ ಎಷ್ಟೇ ಪ್ರಯತ್ನಿಸಿದರೂ ಕೆಲಸ ಸಿಗದೇ ಪರದಾಡುತ್ತಿರುತ್ತಾರೆ. ಅದರಲ್ಲಿಯೂ ಜನ ಸರ್ಕಾರಿ ಕೆಲಸಕ್ಕಾಗಿ (Government Job) ಮುಗಿ ಬೀಳುತ್ತಾರೆ. ಅದೆಷ್ಟೋ ಪರೀಕ್ಷೆಗಳನ್ನು ಬರೆಯುತ್ತಾರೆ. ಆದರೆ ಸರ್ಕಾರಿ ಕೆಲಸ ಸಿಗುವುದು ಅದೃಷ್ಟ ಇದ್ದವರಿಗೆ ಮಾತ್ರ. ಇನ್ನೂ ಎಲ್ಲಾ ಪರೀಕ್ಷೆಗಳನ್ನು (Exam) ಬರೆದು ಹುದ್ದೆಗೆ ಅರ್ಹರಾಗಿರುವ ಎಷ್ಟೋ ಮಂದಿಗೆ ಕೊನೆ ಕ್ಷಣದಲ್ಲಿ ಕೆಲಸ ಸಿಗುವುದಿಲ್ಲ. ಯಾವುದೋ ಒಂದು ಕಾರಣದಿಂದ ಕೆಲಸ ಕಳೆದುಕೊಳ್ಳುತ್ತಾರೆ. ಸದ್ಯ ಅಂತಹದ್ದೆ ಒಂದು ಪ್ರಕರಣ ಕೇರಳದಲ್ಲಿ (Kerala) ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈ ವ್ಯಕ್ತಿಗೆ ಕೆಲಸ ಸಿಗದೇ ಇರಲು ಕಾರಣವೇನಿರಬಹುದು ಅಂತ ಕೇಳಿದ್ರೆ ನೀವು ಕೂಡ ಸಾಕ್ ಆಗ್ತೀರಾ. ಹೌದು ಹಲ್ಲು (Teeth) ಓರೆಯಾಗಿದೆ, ಹಿಂದೆ ಮುಂದೆ ಇದೆ ಎಂಬ ಕಾರಣಕ್ಕೆ ಯುವಕನೋರ್ವನನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ಘಟನೆ ಕೇರಳದ ಪಾಲಕ್ಕಾಡ್ (Palakkad) ಜಿಲ್ಲೆಯ ಅಟ್ಟಪಾಡಿ ತಾಲೂಕಿನಲ್ಲಿ ನಡೆದಿದೆ.


ಫಾರೆಸ್ಟ್‌ ಬೀಟ್‌ ಆಫೀಸರ್‌ ಹುದ್ದೆಗೆ ಪರೀಕ್ಷೆ ಬರೆದಿದ್ದ ಯುವಕ


ಇತ್ತೀಚೆಗೆ ಕೇರಳ ಸಾರ್ವಜನಿಕ ಸೇವಾ ಆಯೋಗ ಬುಡಕಟ್ಟು ಸಮುದಾಯದ ಯುವಜನರಿಗೆ ವಿಶೇಷ ನಿಯಮದಡಿಯಲ್ಲಿ ಸರ್ಕಾರಿ ಹುದ್ದೆಯ ನೇಮಕಾತಿಗೆ ಪರೀಕ್ಷೆಗಳನ್ನು ಆಯೋಜಿಸಿತ್ತು. ಈ ಪರೀಕ್ಷೆಯನ್ನು ಫಾರೆಸ್ಟ್‌ ಬೀಟ್‌ ಆಫೀಸರ್‌ ಹುದ್ದೆಗೆ ಅಟ್ಟಪಾಡಿಯ ನಿವಾಸಿ ಮುತ್ತು ಅವರು ಬರೆದಿದ್ದರು. ಅಲ್ಲದೇ ದೈಹಿಕ ಪರೀಕ್ಷೆಯಲ್ಲೂ ಪಾಲ್ಗೊಂಡು, ಎರಡು ಪರೀಕ್ಷೆಯಲ್ಲಿ ತೇರ್ಗಡೆಯಾಗಿದರು. ನಂತರ ಹುದ್ದೆಗಾಗಿ ಕಾಯುತ್ತಿದ್ದ ಮುತ್ತ ಅವರಿಗೆ ತಮ್ಮ ಹಲ್ಲಿನಿಂದಲೇ ಕಂಟಕ ಎದುರಾಗಿದೆ.


NCERT Recruitment 2023 apply for 4 principal posts in mysuru.
ಸಾಂದರ್ಭಿಕ ಚಿತ್ರ


ಹಲ್ಲುಗಳು ಓರೆಕೋರೆಯಾಗಿರುವುದಕ್ಕೆ ಮೆಡಿಕಲ್ ಸರ್ಟಿಫಿಕೇಟ್ ರಿಜೆಕ್ಟ್


ಬುಡಕಟ್ಟು ಸಮುದಾಯಕ್ಕಿರುವ ವಿಶೇಷ ನಿಯಮದಡಿ ಮುತ್ತು ಅವರ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಹುದ್ದೆಗಾಗಿ ಕಾಯುತ್ತಿದ್ದ ಮುತ್ತ ಅವರಿಗೆ ಯಾವುದೇ ಸಂದೇಶ ಬರಲಿಲ್ಲ. ಇದರಿಂದ ವಿಚಲಿತರಾದ ಮುತ್ತು ಈ ಬಗ್ಗೆ ಅಧಿಕಾರಿಯೊಬ್ಬರ ಬಳಿ ವಿಚಾರಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಕೇರಳ ಸಾರ್ವಜನಿಕ ಸೇವಾ ಆಯೋಗ ನಿಮ್ಮ ಹುದ್ದೆಯ ಅರ್ಜಿಯನ್ನು ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಮುತ್ತು ಕಾರಣ ಕೇಳಿದಾಗ, ನಿಮ್ಮ ಹಲ್ಲುಗಳನ್ನು ಓರೆಕೋರೆಯಾಗಿ ಮುಂದೆ ಬಂದಿರುವುದಕ್ಕೆ ವೈದ್ಯಕೀಯ ಪ್ರಮಾಣ ಪತ್ರ ತಿರಸ್ಕೃತಗೊಂಡಿದೆ ಎಂದು ತಿಳಿಸಿದ್ದಾರೆ.

ಕೆಲಸ ನೀಡಲು ನಿರಾಕರಿಸಿದ್ದಕ್ಕೆ ಎಸ್/‌ ಟಿ ಆಯೋಗ ಸುಮೋಟೋ ಪ್ರಕರಣ


ಹಲ್ಲು ಓರೆಯಾಗಿದೆ ಎಂಬ ಸಣ್ಣ ಕಾರಣಕ್ಕೆ ಮುತ್ತು ಅವರಿಗೆ ಕೆಲಸ ನೀಡಲು ನಿರಾಕರಿಸಿರುವುದರಿಂದ ಇದೀಗ ಈ ಬಗ್ಗೆ ಕೇರಳ ಎಸ್/‌ ಟಿ ಆಯೋಗ ಸುಮೋಟೋ ಪ್ರಕರಣ ದಾಖಲಿಸಿದೆ. ಚಿಕ್ಕ ವಯಸ್ಸಿನಲ್ಲಿ ಆದ ಸಣ್ಣ ಅನಾಹುತದಿಂದ ಮುತ್ತು ಹಲ್ಲು ಹೀಗಾಗಿದೆ. ಆದರೆ ಇದನ್ನೇ ಕಾರಣ ಮಾಡಿಕೊಂಡು ಕೆಲಸ ನೀಡಲು ನಿರಾಕರಿಸಿರುವುದಕ್ಕೆ ಎಸ್/‌ ಟಿ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ:Business Idea: ಪೇಪರ್‌ ಪ್ಲೇಟ್‌ ತಯಾರಿಸಿ ಲಕ್ಷಾಂತರ ಆದಾಯ: ಹಲವರಿಗೆ ಕೆಲಸ ಕೊಟ್ಟ ಒಡಿಶಾ ಮಹಿಳೆಯ ಸಾಧನೆಯೇ ಸ್ಫೂರ್ತಿದಾಯಕ!


ಹಲ್ಲು ಸರಿಪಡಿಸಿಕೊಳ್ಳಲು ಹಣವಿಲ್ಲದೇ ಹೀಗೆ ಇದ್ದೇನೆ


ಇನ್ನೂ ಈ ಬಗ್ಗೆ  ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿರುವ ಮುತ್ತು ಅವರು, ಈ ಹಲ್ಲನ್ನು ಸರಿಪಡಿಸಿಕೊಳ್ಳಲು ನಾನು ವೈದ್ಯರನ್ನು ಸಂಪರ್ಕಿಸಿದೆ. ಈ ವೇಳೆ 18,000 ರೂಪಾಯಿ ಖರ್ಚಾಗುತ್ತದೆ ಎಂದು ತಿಳಿಸಿದರು. ಆದರೆ ಅಷ್ಟು ಹಣವನ್ನು ಭರಿಸಲು ನನ್ನ ಕೈಯಲ್ಲೇ ಆಗಲಿ, ಕುಟುಂಬಸ್ಥರ ಕೈಯಲ್ಲೇ ಆಗಲಿ ಸಾಧ್ಯವಿಲ್ಲ. ಹೀಗಾಗಿ ನಾನು ಹೀಗೆ ಇದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Published by:Monika N
First published: