ಜಾರ್ಖಂಡ್: ತನ್ನ ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದ (Live In Relationship) ಶ್ರದ್ಧಾ ವಾಕರ್ (Shraddha Walker) ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಮಾಡಿದ್ದ ಅಫ್ತಾಬ್ (Aftab) ಅಮೀನ್ ಪೂನಾವಾಲಾ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅದೇ ರೀತಿಯ ಘಟನೆಯೊಂದು ಜಾರ್ಖಂಡ್ನಲ್ಲಿ ನಡೆದಿದೆ. ಪತಿಯೇ (Husband) ತನ್ನ ಪತ್ನಿಯ (Wife) ಕೊಂದು, ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿರುವ ಘಟನೆ ಜಾರ್ಖಂಡ್ನ (Jharkhand) ಸಾಹೇಬ್ಗಂಜ್ನಲ್ಲಿ ನಡೆದಿದೆ. ಇದುವರೆಗೂ ಪೊಲೀಸರು ಮೃತದೇಹದ 18 ತುಂಡುಗಳನ್ನು ವಶಪಡಿಸಿಕೊಂಡಿದ್ದು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಪತ್ನಿ ಕೊಂದು ನಾಪತ್ತೆ ದೂರು ದಾಖಲಿಸಲು ಠಾಣೆಗೆ ಹೋದ
ಕಳೆದ ಎರಡು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಆರೋಪಿ ಮತ್ತು ಮೃತ ಮಹಿಳೆ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಪತ್ನಿಯನ್ನು ಕೊಂದ ಬಳಿಕ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆರೋಪಿಯೇ ಪತ್ನಿ ನಾಪತ್ತೆಯಾಗಿರುವುದಾಗಿ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆ ಮನೆಯೊಂದರಲ್ಲಿ ವಿಕೃತ ರೂಪದಲ್ಲಿ ಮಹಿಳೆ ಶವ ಪತ್ತೆ
ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಪೊಲೀಸರು, ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಂತಾಲಿ ಮೊಮಿನ್ ಟೋಲಾ ಪ್ರದೇಶದ ಹಳೆಯ ಮನೆಯೊಂದರಲ್ಲಿ ವಿಕೃತಗೊಂಡಿದ್ದ ಮಹಿಳೆಯ ಶವ ಪತ್ತೆಯಾಗಿದೆ.
ಮಗಳು ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರಿಂದ ದೂರು
ರೂಬಿಕಾ ಪಹಾಡಿನ್ ಮೃತ ಮಹಿಳೆಯಾಗಿದ್ದು, ಆರೋಪಿಯನ್ನು ದಿಲ್ದಾರ್ ಅನ್ಸಾರಿ ಎಂದು ಗುರುತಿಸಲಾಗಿದೆ. ಮಗಳು ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪತಿಯೇ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಕಾರ್ಯಾಚರಣೆ ವೇಳೆ ಬೋರಿಯೊ ಸಂತಾಲಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕೇಂದ್ರದ ಹಿಂಭಾಗದಿಂದ ಮಹಿಳೆಯ ಕಾಲು ಮತ್ತು ದೇಹದ ಇತರ ಭಾಗಗಳು ಪತ್ತೆಯಾಗಿದೆ. ನಂತರ ಘಟನಾ ಸ್ಥಳಕ್ಕೆ ತಲುಪಿದ ಎಸ್ಪಿ ಅನುರಂಜನ್ ಕಿಸ್ಪೊಟ್ಟ ಮತ್ತು ಇತರ ಪೊಲೀಸ್ ಅಧಿಕಾರಿಗಳು ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದರು.
ಪ್ರಕರಣ ಸಂಬಂಧ ಎಸ್ಪಿ ರಿಯಾಕ್ಷನ್
ನಂತರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಅನುರಂಜನ್ ಕಿಸ್ಪೊಟ್ಟ, ಮೃತ ಮಹಿಳೆ ಸಾಹಿಬ್ಗಂಜ್ನಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಸದ್ಯ ಆಕೆಯ ದೇಹದ 12 ಭಾಗಗಳು ಪತ್ತೆಯಾಗಿವೆ. ದೇಹದ ಇನ್ನೂ ಕೆಲವು ಭಾಗಗಳು ನಾಪತ್ತೆಯಾಗಿದ್ದು, ಅವುಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ
ಇದೀಗ ಈ ಪ್ರಕರಣ ಸಂಬಂಧ ಆಕೆಯ ಪತಿ ದಿಲ್ದಾರ್ ಅನ್ಸಾರಿಯನ್ನು ಪೊಲೀಸರು ಬಂಧಿಸಲಾಗಿದ್ದು, ಮೃತ ಮಹಿಳೆ ಆತನ ಎರಡನೇ ಪತ್ನಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆ ವೇಳೆ ದಿಲ್ದಾರ್ ಅನ್ಸಾರಿ ಜೊತೆ ಈ ಪ್ರಕರಣದಲ್ಲಿ ಇತರರು ಭಾಗಿಯಾಗಿರುವ ಅನುಮಾನವಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಪ್ರತಿಪಕ್ಷ ನಾಯಕರು ಕಿಡಿ
ಇನ್ನೂ ಈ ಪ್ರಕರಣದ ಸಂಬಂಧ ಆಡಳಿತ ಪಕ್ಷದ ಬಿಜೆಪಿ ವಿರುದ್ಧ ಪ್ರತಿಪಕ್ಷ ನಾಯಕರು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೇಮಂತ್ ಸರ್ಕಾರ್ ಅವರ ಅಧಿಕಾರಾವಧಿಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ, ಕೆಲವು ಮೇಲ್ವಾರ್ಗದವರು ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ, ಸರ್ಕಾರ ತಕ್ಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನಾವು ತೆಗೆದುಕೊಳ್ಳುತ್ತೇವೆ. ಬೀದಿಗಿಳಿಯುವ ಮೂಲಕ ಸರ್ಕಾರಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ರಾಜ್ಯ ಬಿಜೆಪಿ ವಕ್ತಾರ ಪ್ರತುಲ್ ಶಾಹದೇವ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ