ಕಾಲೇಜು ಸಹಪಾಠಿಗಳಿಂದ ಬುಡಕಟ್ಟು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರ ಬಂಧನ

ಮೊದಲ ವರ್ಷದ ಪದವಿ ಓದುತ್ತಿರುವ ಯುವತಿ, ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ತಂದೆ ಕಳೆದ ಎರಡು ವರ್ಷಗಳ ಹಿಂದೆಯೇ ಅಸುನೀಗಿದ್ದರು. ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ಯುವತಿ ಜೂನ್​ 26ರಿಂದ ಕಾಲೇಜಿಗೂ ತೆರಳದೆ ಮನೆಯಲ್ಲೇ ಇದ್ದರು ಎಂದು ಯುವತಿಯ ತಾಯಿ ದುಃಖ ತೋಡಿಕೊಂಡಿದ್ದಾರೆ.

HR Ramesh | news18
Updated:July 16, 2019, 9:38 PM IST
ಕಾಲೇಜು ಸಹಪಾಠಿಗಳಿಂದ ಬುಡಕಟ್ಟು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರ ಬಂಧನ
ಅತ್ಯಾಚಾರದ ಆರೋಪಿಗಳು
  • News18
  • Last Updated: July 16, 2019, 9:38 PM IST
  • Share this:
ಭುವನೇಶ್ವರ: ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬುಡಕಟ್ಟು ಸಮುದಾಯದ ಯುವತಿಯನ್ನು ಮೂವರು ಸಹಪಾಠಿಗಳು ಸೇರಿದಂತೆ ಐವರು ಯುವಕರು ಬಲವಂತವಾಗಿ ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಐವರು ಆರೋಪಿಗಳಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಸಂಬಂಧ ಓಡಿಶಾದ ಸುಂದರಗರ್​ ಪಟ್ಟಣದ ಮಾಡೆಲ್​ ಪೊಲೀಸ್​ ಠಾಣೆಯಲ್ಲಿ ಸಂತ್ರಸ್ತ ಯುವತಿ ಸೋಮವಾರ ಸಂಜೆ ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ಯುವತಿಯ ಮೂವರು ಸಹಪಾಠಿಗಳು ಮತ್ತು ಮತ್ತೊಬ್ಬನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಘಟನೆ ಜೂನ್​ 26ರಂದೇ ನಡೆದಿದ್ದರೂ ವಿಷಯ ಹೊರಗೆ ಬಾಯಿ ಬಿಡದಂತೆ ಆರೋಪಿಗಳು ಯುವತಿಗೆ ಜೀವ ಬೆದರಿಕೆ ಒಡ್ಡಿದ್ದರು. ಹೀಗಾಗಿ ಯುವತಿ ಹೆದರಿಕೆಯಿಂದ ಈ ವಿಷಯವನ್ನು ಯಾರಿಗೂ ತಿಳಿಸಿದೆ ಮುಚ್ಚಿಟ್ಟಿದ್ದರು. ಬಳಿಕ ಯುವತಿ ಧೈರ್ಯ ಮಾಡಿ, ಅತ್ಯಾಚಾರ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿದ್ದು, ಐದನೇ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಸುಂದರ್​ಗರ್ ಎಸ್​ಪಿ ಸೌಮ್ಯಾ ಮಿಶ್ರಾ ತಿಳಿಸಿದ್ದಾರೆ.First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ