Viral Video: ಮಲಗಿದವನ ಜೀನ್ಸ್​ ಪ್ಯಾಂಟ್​ ಒಳ ಸೇರಿತ್ತು ಬುಸ್​ ಬುಸ್​ ಹಾವು!; ಆಮೇಲೇನಾಯ್ತು ಗೊತ್ತಾ?

Shocking Video: ಬರೋಬ್ಬರಿ 7 ಗಂಟೆಗಳ ಕಾಲ ಅಲುಗಾಡದೆ ನಿಂತಿದ್ದ ಲವಕೇಶ್​ನ ಪ್ಯಾಂಟನ್ನು ಕತ್ತರಿಯಿಂದ ಕಟ್ ಮಾಡಿ, ಕೊನೆಗೂ ಹಾವನ್ನು ಹೊರಗೆ ತೆಗೆಯಲಾಯಿತು. ಈ ವಿಡಿಯೋ ಈಗ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ.

Sushma Chakre | news18-kannada
Updated:August 1, 2020, 7:13 AM IST
Viral Video: ಮಲಗಿದವನ ಜೀನ್ಸ್​ ಪ್ಯಾಂಟ್​ ಒಳ ಸೇರಿತ್ತು ಬುಸ್​ ಬುಸ್​ ಹಾವು!; ಆಮೇಲೇನಾಯ್ತು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ರಾತ್ರಿ ಸೊಂಪಾಗಿ ನಿದ್ರೆ ಮಾಡಿದ್ದ ಆತನಿಗೆ ಈ ಲೋಕದ ಪರಿವೆಯೇ ಇರಲಿಲ್ಲ. ಸುಂದರವಾದ ಕನಸುಗಳನ್ನು ಕಾಣುತ್ತಾ ಮಲಗಿದ್ದ ಆತನಿಗೆ ಬೆಳಗಾಗುವಷ್ಟರಲ್ಲಿ ದೊಡ್ಡ ಆಘಾತ ಕಾದಿತ್ತು. ನಾವೆಲ್ಲ ಕನಸಿನಲ್ಲಿ ಹಾವು ಕಂಡರೂ ಬೆಚ್ಚಿಬೀಳುತ್ತೇವೆ. ಆದರೆ, ಆ ಯುವಕ ರಾತ್ರಿ ಮಲಗಿದ್ದಾಗ ಅವನ ಜೀನ್ಸ್​ ಪ್ಯಾಂಟ್​ನೊಳಗೆ ಹಾವು ಸೇರಿಕೊಂಡಿತ್ತು!

ಇಂತಹ ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮಿರ್ಜಾಪುರದ ಸಿಕಂದರ್​ಪುರದಲ್ಲಿ. ರಾತ್ರಿ ಮಲಗಿದ್ದಾಗ ಪ್ಯಾಂಟ್​ನೊಳಗೆ ಹಾವು ಸೇರಿಕೊಂಡಿತ್ತು. ಬೆಳಗ್ಗೆ ಎದ್ದಾಗ ಈ ವಿಷಯ ಗೊತ್ತಾಗುತ್ತಿದ್ದಂತೆ ಆ ವ್ಯಕ್ತಿ ಹಾವು ಕಚ್ಚಬಹುದು ಎಂಬ ಭಯದಿಂದ 7 ಗಂಟೆಗಳ ಕಾಲ ಕಂಬದಂತೆ ನಿಂತೇ ಇದ್ದ. ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಲವಕೇಶ್ ಎಂಬಾತ ಕೆಲಸ ಮುಗಿಸಿ ಸುಸ್ತಾಗಿ ಮಲಗಿದ್ದರಿಂದ ಗಡದ್ದಾಗಿ ನಿದ್ರೆ ಮಾಡಿದ್ದ.

ಬೆಳಗ್ಗೆ ಎದ್ದಾಗ ಪ್ಯಾಂಟ್​ನ ಕಾಲಿನ ಬಳಿ ಏನೋ ಹರಿದಾಡಿದಂತೆ ಆಗಿತ್ತು. ಕಟ್ಟಡ ನಿರ್ಮಾಣದ ಪ್ರದೇಶವಾದ್ದರಿಂದ ಏನಾದರೂ ಹುಳ ಇರಬಹುದು ಎಂದು ನಿದ್ರೆಗಣ್ಣಿನಲ್ಲಿಯೇ ಕಾಲಿನ ಬಳಿ ಮುಟ್ಟಿಕೊಂಡಾಗ ಅದು ದಪ್ಪನೆಯ ಹಾವು ಎಂಬುದು ಗೊತ್ತಾಗಿತ್ತು. ಹಾಗೇ ನಿಧಾನವಾಗಿ ಎದ್ದುನಿಂತ ಆತ ಸುತ್ತಲಿದ್ದವರಿಗೆ ವಿಷಯ ತಿಳಿಸಿದ. ವಿಷಯ ಗೊತ್ತಾಗುತ್ತಿದ್ದಂತೆ ಎಲ್ಲರೂ ದೂರಕ್ಕೆ ಓಡಿ ಹೋದರು.

ಇದನ್ನೂ ಓದಿ: Viral Video: ಬಾವಿಗೆ ಬಿದ್ದ ಮರಿಯನ್ನು ಅಪ್ಪಿ, ಮೇಲೆತ್ತಿದ ತಾಯಿಕೋತಿ ವಿಡಿಯೋ ವೈರಲ್

ಯಾರೋ ಒಬ್ಬಾತ ಹಾವು ಹಿಡಿಯುವವನಿಗೆ ಫೋನ್ ಮಾಡಿದ. ಆದರೆ, ಪ್ಯಾಂಟ್​ನೊಳಗೆ ಸೇರಿಕೊಂಡಿದ್ದ ಹಾವನ್ನು ಹೊರಗೆ ತೆಗೆಯುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಕಂಬವನ್ನು ಹಿಡಿದು ನಿಂತಿದ್ದ ಲವಕೇಶ್​ ಸ್ವಲ್ಪ ಅಲುಗಾಡಿದರೂ ಹಾವು ಕಚ್ಚುವ ಸಾಧ್ಯತೆಯಿತ್ತು. ಹೀಗಾಗಿ, ಹಾವು ಹಿಡಿಯುವಾತ ಹಾವನ್ನು ಹೊರಗೆ ಕರೆತರಲು ಎಷ್ಟೇ ಪ್ರಯತ್ನಿಸಿದರೂ ಅದು ಪ್ಯಾಂಟ್​ನ ಕಾಲಿನ ಭಾಗದಿಂದ ಹೊರಗೆ ಬರಲೇಇಲ್ಲ.ಬರೋಬ್ಬರಿ 7 ಗಂಟೆಗಳ ಕಾಲ ಅಲುಗಾಡದೆ ನಿಂತಿದ್ದ ಲವಕೇಶ್​ನ ಪ್ಯಾಂಟನ್ನು ಕತ್ತರಿಯಿಂದ ಕಟ್ ಮಾಡಿ, ಕೊನೆಗೂ ಹಾವನ್ನು ಹೊರಗೆ ತೆಗೆಯಲಾಯಿತು. ಈ ವಿಡಿಯೋ ಈಗ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ. ರಾತ್ರಿಯಿಂದ ಮಾರನೇ ದಿನ ಮಧ್ಯಾಹ್ನದವರೆಗೂ ಹಾವು ಪ್ಯಾಂಟ್​ನೊಳಗೇ ಇದ್ದರೂ ಧೈರ್ಯಗೆಡದೆ ನಿಂತಿದ್ದ ಲವಕೇಶ್​ಗೆ ಹಲವರು ಶಹಬ್ಭಾಸ್​ ಎಂದಿದ್ದಾರೆ. ಈ ದೃಶ್ಯ ನೋಡಲು ಸೇರಿದ್ದ ಜನರು ಗಲಾಟೆ ಮಾಡುತ್ತಿದ್ದರೂ ಪ್ಯಾಂಟ್​ನೊಳಗಿದ್ದ ಹಾವು ಆತನಿಗೆ ಕಚ್ಚದೆ ಸುಮ್ಮನಿದ್ದುದು ಆತನ ಅದೃಷ್ಟ ಎಂದು ಇನ್ನು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Published by: Sushma Chakre
First published: August 1, 2020, 7:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading