Viral Photo: ಸಂಸದನ ಮಗುವಿಗೆ ಹಾಲು ಕುಡಿಸಿದ ಸ್ಪೀಕರ್; ಫೋಟೋ ವೈರಲ್

Viral Photo: ನ್ಯೂಜಿಲೆಂಡ್​ನಲ್ಲಿ ನಿನ್ನೆ ನಡೆದ ಅಧಿವೇಶನಕ್ಕೆ ಮಗನೊಂದಿಗೆ ಆಗಮಿಸಿದ್ದ ಸಂಸದ ತಮಟಿ  ಸಂಸತ್​ನಲ್ಲಿ ಚರ್ಚೆಯಲ್ಲಿ ತೊಡಗಿದ್ದಾಗ ಸ್ಪೀಕರ್ ಟ್ರೆವರ್ ಮಲ್ಲಾರ್ಡ್​ ಖುದ್ದು ಆ ಮಗುವನ್ನು ಎತ್ತಿಕೊಂಡು ತಮ್ಮ ಮಡಿಲಲ್ಲಿ ಮಲಗಿಸಿಕೊಂಡು ಹಾಲಿನ ಬಾಟಲಿ ಹಿಡಿದಿದ್ದ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

Sushma Chakre | news18
Updated:August 22, 2019, 2:21 PM IST
Viral Photo: ಸಂಸದನ ಮಗುವಿಗೆ ಹಾಲು ಕುಡಿಸಿದ ಸ್ಪೀಕರ್; ಫೋಟೋ ವೈರಲ್
ಮಗುವಿಗೆ ಹಾಲು ಕುಡಿಸುತ್ತಿರುವ ನ್ಯೂಜಿಲೆಂಡ್ ಸ್ಪೀಕರ್
Sushma Chakre | news18
Updated: August 22, 2019, 2:21 PM IST
ನ್ಯೂಜಿಲೆಂಡ್​ನ ಸಂಸತ್​ಗೆ ನಿನ್ನೆ ಹೊಸ ಅತಿಥಿಯೊಬ್ಬರು ಆಗಮಿಸಿದ್ದರು. ಆ ಅತಿಥಿಯನ್ನು ನೋಡುತ್ತಿದ್ದಂತೆ ಸಂಸದರ ಮುಖದಲ್ಲಿ ನಗು ಮೂಡಿತ್ತು. ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಕೆಲ ಸಂಸದರು ಬಾಗಿಲಿನತ್ತ ಹೊರಟರು. ಸ್ವತಃ ಸ್ಪೀಕರ್ ಕೂಡ ಆ ಅತಿಥಿಯನ್ನು ನೋಡಿ ಖುಷಿಯಾದರು. ಅರೆ! ಇದ್ಯಾವ ಅತಿಥಿ? ಎಂದು ಯೋಚಿಸುತ್ತಿದ್ದೀರಾ?

ನಿನ್ನೆ ನ್ಯೂಜಿಲೆಂಡ್​ ಸಂಸತ್​ ಕಲಾಪದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂಸದ ತಮಟಿ ಕಾಫಿ ತನ್ನೊಂದಿಗೆ ಹಸುಗೂಸನ್ನೂ ಕರೆತಂದಿದ್ದರು. ಮುದ್ದು ಮಗನನ್ನು ಕಂಕುಳಲ್ಲಿ ಎತ್ತಿಕೊಂಡು ಬಂದ ತಮಟಿ ಕಾಫಿ ಅವರನ್ನು ಸಂಸದರೆಲ್ಲರೂ ಆತ್ಮೀಯವಾಗಿ ಬರಮಾಡಿಕೊಂಡರು. ಕಳೆದ ತಿಂಗಳಷ್ಟೇ ತಮಟಿ ಕಾಫಿ ಬಾಡಿಗೆ ತಾಯಿಯ ಮೂಲಕ ಗಂಡುಮಗುವನ್ನು ಪಡೆದಿದ್ದರು. ಟಿವಿ ನಿರೂಪಕ ಕೂಡ ಆಗಿದ್ದ ತಮಟಿ ಕಾಫಿ ತಾನು ಸಲಿಂಗ ಕಾಮಿ ಎಂದು ಒಪ್ಪಿಕೊಂಡಿದ್ದರು. ತಮ್ಮ ಬಹುಕಾಲದ ಗೆಳೆಯ, ಇಂಗ್ಲೆಂಡ್​ ಮೂಲದ ಸಂಗೀತ ಶಿಕ್ಷಕ ಟಿಮ್ ಸ್ಮಿತ್ ಜೊತೆ ಅವರು ವಾಸವಾಗಿದ್ದರು. 2011ರಲ್ಲಿ ಈ ಇಬ್ಬರೂ ಮದುವೆಯಾಗಿದ್ದರು. ಕಳೆದ ತಿಂಗಳು ಇಬ್ಬರೂ ಬಾಡಿಗೆ ತಾಯಿಯ ಮೂಲಕ ಗಂಡು ಮಗುವನ್ನು ಪಡೆದಿದ್ದಾರೆ.



ಅಂದಹಾಗೆ, ನಿನ್ನೆ ನಡೆದ ಅಧಿವೇಶನಕ್ಕೆ ಮಗನೊಂದಿಗೆ ಆಗಮಿಸಿದ್ದ ಸಂಸದ ತಮಟಿ  ಸಂಸತ್​ನಲ್ಲಿ ಚರ್ಚೆಯಲ್ಲಿ ತೊಡಗಿದ್ದಾಗ ಸ್ಪೀಕರ್ ಟ್ರೆವರ್ ಮಲ್ಲಾರ್ಡ್​ ಖುದ್ದು ಆ ಮಗುವನ್ನು ಎತ್ತಿಕೊಂಡು ತಮ್ಮ ಮಡಿಲಲ್ಲಿ ಮಲಗಿಸಿಕೊಂಡು ಹಾಲಿನ ಬಾಟಲಿ ಹಿಡಿದಿದ್ದ ಫೋಟೋ ಸದ್ಯಕ್ಕೆ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಫೋಟೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿರುವ ಸ್ಪೀಕರ್ ಟ್ರೆವರ್ ಮಲ್ಲರ್ಡ್​, 'ಸಾಮಾನ್ಯವಾಗಿ ಸ್ಪೀಕರ್ ಕುರ್ಚಿಯಲ್ಲಿ ಕುಳಿತವರು ಅಧಿಕಾರಿಗಳಿಗೆ ಸೂಚನೆ ನೀಡಲಷ್ಟೇ ಸೀಮಿತವಾಗಿರುತ್ತಾರೆ. ಆದರೆ, ಇಂದು ನನ್ನ ಕುರ್ಚಿಯಲ್ಲಿ ನನ್ನೊಂದಿಗೆ ಒಬ್ಬರು ವಿಶೇಷ ಅತಿಥಿಯೂ ಕುಳಿತಿದ್ದರು. ತಮಟಿ ಕಾಫಿ ಮತ್ತು ಟಿಮ್ ಅವರ ಕುಟುಂಬಕ್ಕೆ ಹೊಸ ಅತಿಥಿಯ ಸೇರ್ಪಡೆಯಾಗಿದ್ದಕ್ಕೆ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ.
Loading...




ಈ ಟ್ವೀಟ್​ಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, 'ಪುರುಷ ಕೂಡ ಮಗುವನ್ನು ಸಂಭಾಳಿಸಬಲ್ಲ ಎಂಬುದಕ್ಕೆ ಈ ಫೋಟೋ ಉದಾಹರಣೆ. ಆ ಮಗು ಸ್ಪೀಕರ್ ಜೊತೆ ಇಷ್ಟು ಆರಾಮಾಗಿ ಕುಳಿತಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ' ಎಂದು ಕೆಲವರು ಖುಷಿ ವ್ಯಕ್ತಪಡಿಸಿದ್ದಾರೆ.


2017ರಲ್ಲಿ ಆಸ್ಟ್ರೇಲಿಯಾ ಸಂಸತ್​ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಆಸ್ಟ್ರೇಲಿಯಾ ಸಂಸತ್​ ಸದಸ್ಯೆ ಲರಿಸ್ಸಾ ವಾಟರ್ಸ್​ ತನ್ನ ಹಸುಗೂಸನ್ನು ಎತ್ತಿಕೊಂಡು ಅಧಿವೇಶನಕ್ಕೆ ಆಗಮಿಸಿದ್ದರು.



ಅಷ್ಟೇ ಅಲ್ಲ, ಪುಟ್ಟ ಮಗಳಿಗೆ ಎದೆಹಾಲು ಕುಡಿಸುತ್ತಾ ಗೊತ್ತುವಳಿ ಮಂಡಿಸಿದ್ದರು. ಹೆಗಲ ಮೇಲೆ ಟವೆಲ್ ಹಾಕಿಕೊಂಡು ಮಗುವಿಗೆ ಎದೆಹಾಲು ಕುಡಿಸುತ್ತಾ ಗೊತ್ತುವಳಿ ಮಂಡಿಸಿದ ಸೆನೆಟರ್ ಲರಿಸ್ಸಾ ವಾಟರ್ಸ್​ ಫೋಟೋ ಎಲ್ಲೆಡೆ ಹರಿದಾಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯೂ ಲಭಿಸಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

 

First published:August 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...